ಕೋಟೆ ಬೆಟ್ಟ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರ ಮೇಲೆ ಹಲ್ಲೆ: ಪೊಲೀಸರ ಕ್ರಮಕ್ಕೆ ಸ್ಥಳೀಯರ ವಿರೋಧ!

ಕರ್ನಾಟಕದ ಖ್ಯಾತ ಪ್ರವಾಸಿ ತಾಣ ಕೊಡಗು ಜಿಲ್ಲೆಯಲ್ಲಿ ಪ್ರವಾಸಿಗರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆಪೊಲೀಸರ ಕ್ರಮಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.
Kodava forums condemn police action
ಕೋಟೆ ಬೆಟ್ಟದಲ್ಲಿ ಪ್ರವಾಸಿಗರು, ಸ್ಥಳೀಯರ ನಡುವೆ ಸಂಘರ್ಷ
Updated on

ಕೊಡಗು: ಕರ್ನಾಟಕದ ಖ್ಯಾತ ಪ್ರವಾಸಿ ತಾಣ ಕೊಡಗು ಜಿಲ್ಲೆಯಲ್ಲಿ ಪ್ರವಾಸಿಗರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆಪೊಲೀಸರ ಕ್ರಮಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮಾದಪುರ ಸಮೀಪದ ಕೋಟೆ ಬೆಟ್ಟ ವೀಕ್ಷಣೆಗೆ ಬಂದಿದ್ದ ಪುತ್ತೂರು ಮೂಲದ ಪ್ರವಾಸಿಗರ ಮೇಲೆ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಮೇಲೆ ಹಲ್ಲೆ ನಡೆಸಿ, ಚಿನ್ನದ ಸರವನ್ನೂ ಎಗರಿಸಿ ಪರಾರಿಯಾಗಿದ್ದರು.

ಪ್ರವಾಸಿಗರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 324, 504, 506 ಮತ್ತು 354 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಇದೀಗ ಪೊಲೀಸರು ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರ ಕ್ರಮವನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಆದಾಗ್ಯೂ, ಹಲವಾರು ಕೊಡವ ವೇದಿಕೆಗಳು ಪೊಲೀಸರು ದಾಖಲಿಸಿರುವ ಪ್ರಕರಣಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಆರೋಪಿ ಯುವಕರ ಮೇಲೆ ಪೊಲೀಸರು ಅನಗತ್ಯವಾಗಿ 354 ಸೆಕ್ಷನ್ ಅಡಿಯಲ್ಲಿ ಸುಳ್ಳು ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಸೆಕ್ಷನ್ ಮಹಿಳೆಯ ಗೌರವಕ್ಕೆ ಧಕ್ಕೆ ತರುವ ಪ್ರಕರಣವಾಗಿದ್ದು, ಅಂತಹ ಯಾವುದೇ ಕಾರ್ಯವನ್ನು ಹುಡುಗರು ಮಾಡಿಲ್ಲ. ಹೀಗಾಗಿ ಈ ಪ್ರಕರಣವನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರವಾಸಿಗರ ವಿರುದ್ಧವೂ ಕ್ರಮಕ್ಕೆ ಆಗ್ರಹ

ಸ್ಥಳೀಯ ಯುವಕರ ವಿರುದ್ಧ ಪ್ರಕರಣ ದಾಖಲಿಸಿರುವ ಘಟನೆಯನ್ನು ಜಿಲ್ಲೆಯ ಹಲವು ಕೊಡವ ವೇದಿಕೆಗಳು ಖಂಡಿಸಿದ್ದು, ಸೋಮವಾರಪೇಟೆ ತಾಲೂಕಿನ ಪ್ರವಾಸಿ ತಾಣದಲ್ಲಿ ಹಿಂಸಾಚಾರ ಎಸಗಿರುವ ಪ್ರವಾಸಿಗರ ವಿರುದ್ಧವೂ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಜಾಭೂಮಿ ಎಂಬ ಸಂಘಟನೆ ಎಚ್ಚರಿಕೆ ನೀಡಿದೆ.

“ಕೊಡಗಿಗೆ ಭೇಟಿ ನೀಡುವ ಕೆಲವು ಪ್ರವಾಸಿಗರು ಜಿಲ್ಲೆಯ ಸ್ಥಳೀಯರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾರೆ. ಅಂತಹ ಪ್ರವಾಸಿಗರ ವಿರುದ್ಧ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ಸ್ಥಳೀಯ ನಿವಾಸಿಗಳ ಹಿತಾಸಕ್ತಿ ಕಾಪಾಡಲು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಜಾಭೂಮಿ ವೇದಿಕೆ ಅಧ್ಯಕ್ಷ ರಾಜೀವ್ ಬೋಪಯ್ಯ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

Kodava forums condemn police action
ಕೊಡಗು: ತಾಟಳ್ಳಿ ಬುಡಕಟ್ಟು ಸಮುದಾಯದ 70 ಕುಟುಂಬಗಳಿಗೆ ಮರೀಚಿಕೆಯಾದ ಮೂಲಭೂತ ಸೌಕರ್ಯ!

ಏತನ್ಮಧ್ಯೆ, ಜೂನ್ 23 ರಂದು ವರದಿಯಾದ ಕೋಟೆ ಬೆಟ್ಟದ ಘಟನೆಯಲ್ಲಿ ಸ್ಥಳೀಯರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿ ಗರ್ವಾಲೆ ಕೊಡವ ಸಮಾಜವು ಪೊಲೀಸರ ಕ್ರಮವನ್ನು ಖಂಡಿಸಿದೆ. 'ಸಪೋರ್ಟ್ ಲೋಕಲ್ಸ್' ಹ್ಯಾಷ್‌ಟ್ಯಾಗ್ ಬಳಸಿ ವಿವಿಧ ಕೊಡವ ಗುಂಪುಗಳ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಂದೇಶ ಹರಿಬಿಡಲಾಗುತ್ತಿದ್ದು, ಇದು ವೈರಲ್ ಆಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com