
ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ಭೀಕರ ದುರಂತ ಸಂಭವಿಸಿತು. ನಿಂತಿದ್ದ ಲಾರಿಗೆ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದ ಪರಿಣಾಮ 13 ಮಂದಿ ಸಾವನ್ನಪ್ಪಿದ್ದಾರೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಗ್ರಾಮದ ಎನ್.ಎಚ್.48ರಲ್ಲಿ ಈ ಘಟನೆ ನಡೆದಿದೆ.
ಘಟನೆಯ ಸ್ಥಳ, ಮೃತದೇಹಗಳು ಮತ್ತು ಗಾಯಾಳುಗಳನ್ನು ನೋಡಿ ಕೆಲವು ಪೊಲೀಸರು, ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ಮತ್ತು ತುರ್ತು ಸಿಬ್ಬಂದಿ ಸ್ವಲ್ಪ ಸಮಯದವರೆಗೆ ಆಘಾತಕ್ಕೊಳಗಾದರು. ಸರಕಾರಿ ಆಸ್ಪತ್ರೆಯ ಆಂಬ್ಯುಲೆನ್ಸ್ 108 ರ ಚಾಲಕ ತೌಸಿಫ್ ಪಠಾಣ್ ಅವರಿಗೆ ಬ್ಯಾಡಗಿ ಬಳಿ ಅಪಘಾತ ಸ್ಥಳಕ್ಕೆ ಬರುವಂತೆ ಪೊಲೀಸರಿಂದ ಕರೆ ಬಂದಿತ್ತು.
ನಾನು ಸ್ಥಳವನ್ನು ತಲುಪಿದಾಗ, ಇದು ಸಣ್ಣ ಅಪಘಾತ ಎಂದು ನಾವು ಭಾವಿಸಿದ್ದೆ. ಆದರೆ ಟೆಂಪೋ ಬಾಗಿಲು ತೆರೆದಾಗ ಕಂಡ ದೃಶ್ಯ ಭಯಾನಕವಾಗಿತ್ತು. ವಾಹನದಲ್ಲಿ ಸಿಲುಕಿದ್ದ ಗಾಯಾಳುಗಳು ಸಹಾಯಕ್ಕಾಗಿ ಅಳುತ್ತಿದ್ದರು. ಒಂದು ಕ್ಷಣ, ನನ್ನ ಮನಸ್ಸು ಪೂರ್ತಿ ಖಾಲಿಯಾಯಿತು. ನಾನು ದೇಹಗಳನ್ನು ಮತ್ತು ಗಾಯಗೊಂಡ ಪ್ರಯಾಣಿಕರನ್ನು ಹೊರತೆಗೆಯಲು ಪ್ರಾರಂಭಿಸಿದೆ.
ನಾವು ಆರು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೆವು, ಅವರಲ್ಲಿ ಇಬ್ಬರು ದಾರಿಯಲ್ಲಿ ಸಾವನ್ನಪ್ಪಿದರು. ಆಂಬ್ಯುಲೆನ್ಸ್ ಚಾಲಕನಾಗಿ ನನ್ನ ಆರು ವರ್ಷಗಳ ಸೇವೆಯಲ್ಲಿ, ಇದು ನಾನು ಕಂಡ ಅತ್ಯಂತ ಭೀಕರ ಅಪಘಾತವಾಗಿದೆ ಎಂದು ಅವರು ವಿವರಿಸಿದ್ದಾರೆ.
ನಮ್ಮ ಸಿಬ್ಬಂದಿ, ಅಗ್ನಿಶಾಮಕ ಮತ್ತು ತುರ್ತುಸ್ಥಿತಿ ಮತ್ತು ಪೊಲೀಸ್ ಸಿಬ್ಬಂದಿ ಗಾಯಗೊಂಡ ಪ್ರಯಾಣಿಕರನ್ನು ಹೊರಕ್ಕೆ ತೆಗೆಯಲು ಹಿಂದಿನ ಬಾಗಿಲನ್ನು ಒಡೆದು ಸೀಟುಗಳನ್ನು ಕೆಡವಬೇಕಾಯಿತು. ಇಡೀ ವಾಹನ ರಕ್ತಸಿಕ್ತವಾಗಿತ್ತು, ನಾವು ಬಾಗಿಲು ತೆರೆದಾಗ ಇಬ್ಬರು ಬಾಲಕಿಯರು ಜೀವಂತವಾಗಿದ್ದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿಯ ಎದುರೇ ಇಬ್ಬರೂ ಸಾವನ್ನಪ್ಪಿದ್ದರು. ಗಾಯಾಳುಗಳು ಮತ್ತು ದೇಹಗಳನ್ನು ಸ್ಥಳಾಂತರಿಸುವಾಗ ಅನೇಕ ಹಿರಿಯ ಅಧಿಕಾರಿಗಳು ಕುಸಿದರು ಎಂದು ಪಠಾಣ್ ತಿಳಿಸಿದ್ದಾರೆ.
Advertisement