ಬಿಬಿಎಂಪಿ ಬಜೆಟ್: ಬೆಂಗಳೂರು ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಸುರಂಗ ರಸ್ತೆ ಯೋಜನೆ

ಬೆಂಗಳೂರು ನಗರದಲ್ಲಿ ಸಂಚಾರದ ದಟ್ಟಣೆ ಇರುವ ಎರಡು ಸ್ಥಳಗಳಲ್ಲಿ ಪ್ರಾಯೋಗಿಕ ನಗರ ಸುರಂಗ ಮಾರ್ಗ ನಿರ್ಮಾಣವಾಗಲಿದೆ. ಇದಕ್ಕಾಗಿ ಬಿಬಿಎಂಪಿ ಬಜೆಟ್‌ನಲ್ಲಿ 200 ಕೋಟಿ ರೂ.ಗಳ ಸೀಡ್‌ ಮನಿ ಒದಗಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ನಗರದ ಟ್ರಾಫಿಕ್‌ ಸಮಸ್ಯೆಗೆ ಮುಕ್ತಿ ನೀಡಲು ಬಿಬಿಎಂಪಿ ಮುಂದಾಗಿದೆ. ಬೆಂಗಳೂರು ನಗರದಲ್ಲಿ ಸಂಚಾರದ ದಟ್ಟಣೆ ಇರುವ ಎರಡು ಸ್ಥಳಗಳಲ್ಲಿ ಪ್ರಾಯೋಗಿಕ ನಗರ ಸುರಂಗ ಮಾರ್ಗ ನಿರ್ಮಾಣವಾಗಲಿದೆ. ಇದಕ್ಕಾಗಿ ಬಿಬಿಎಂಪಿ ಬಜೆಟ್‌ನಲ್ಲಿ 200 ಕೋಟಿ ರೂ.ಗಳ ಸೀಡ್‌ ಮನಿ ಒದಗಿಸಲಾಗಿದೆ.

ಸಂಚಾರ ದಟ್ಟಣೆಯ ಎರಡು ಸ್ಥಳಗಳಲ್ಲಿ ನಗರ ಸುರಂಗ ಯೋಜನೆ ಸೇರಿದಂತೆ ವಿವಿಧ ರಸ್ತೆ ಕಾಮಗಾರಿಗಳಿಗಾಗಿ ವಿವರವಾದ ಯೋಜನಾ ವರದಿ (ಡಿಪಿಆರ್) ಸಲ್ಲಿಸಲು ಪರಿಣಿತ ಯೋಜನಾ ಸಲಹೆಗಾರರಿಗೆ ಈಗಾಗಲೇ ಆದೇಶ ನೀಡಲಾಗಿದೆ ಎಂದು ವಿಶೇಷ ಆಯುಕ್ತ (ಹಣಕಾಸು) ಶಿವಾನಂದ ಎಚ್ ಕಲಕೇರಿ ತಿಳಿಸಿದರು. ಇದಕ್ಕಾಗಿ ಬಜೆಟ್‌ನಲ್ಲಿ 200 ಕೋಟಿ ರೂಪಾಯಿ 'ಸೀಡ್ ಮನಿ' ಮೀಸಲಿರಿಸಲಾಗಿದೆ ಎಂದು ಅವರು ಹೇಳಿದರು.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಕನಕಪುರ ಮುಖ್ಯರಸ್ತೆಯಿಂದ ಬನ್ನೇರುಘಟ್ಟ ಮುಖ್ಯರಸ್ತೆ ಮತ್ತು ಹೆಣ್ಣೂರಿನಿಂದ ಬಾಗಲೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಮತ್ತು ವಿಸ್ತರಿಸಲಾಗುವುದು.

ಸಾಂದರ್ಭಿಕ ಚಿತ್ರ
ಬಿಬಿಎಂಪಿ ಬಜೆಟ್: ಬ್ರಾಂಡ್ ಬೆಂಗಳೂರು ಪರಿಕಲ್ಪನೆಗೆ 1,580 ಕೋಟಿ ರೂ. ಮೀಸಲು

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಪಾದರಾಯನಪುರ ಪ್ರದೇಶದ ಕಿರಿದಾದ ರಸ್ತೆ ವಿಸ್ತರಣೆಯಾಗಲಿದೆ. ಮೇಲಿನ ಕಾಮಗಾರಿಗಳಿಗೆ ಬಜೆಟ್‌ನಲ್ಲಿ 130 ಕೋಟಿ ರೂ. ನೀಡಲಾಗಿದೆ. ಬಳ್ಳಾರಿ ರಸ್ತೆಯಿಂದ (ಸಾದಹಳ್ಳಿ ಗೇಟ್) ಬೇಗೂರು ಮತ್ತು ಸಾತನೂರು ಮೀಸಗಾನಹಳ್ಳಿಯಿಂದ ಮತ್ತೊಂದು ರಸ್ತೆ ಮೂಲಕ ಕೆಐಎಗೆ ಪರ್ಯಾಯ ಮಾರ್ಗಗಳನ್ನು ನಿರ್ಮಿಸಲು ಟಿಡಿಆರ್ ಆಧಾರದ ಮೇಲೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು ಮತ್ತು ಅಭಿವೃದ್ಧಿಪಡಿಸಲಾಗುವುದು ಎಂದು ಕಲಕೇರಿ ವಿವರಿಸಿದ್ದಾರೆ.

15 ನೇ ಹಣಕಾಸು ಆಯೋಗದ "ಕ್ಲೀನ್ ಏರ್" ಯೋಜನೆಯಡಿ 2024-25 ರ ಬಿಬಿಎಂಪಿ ಬಜೆಟ್‌ನಲ್ಲಿ 135 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ, ಕೊನೆಯ ಮೈಲಿ ಸಂಪರ್ಕವನ್ನು ಸಾಧಿಸಲು 45-ಕಿಮೀ ಉದ್ದದ ಪಾದಚಾರಿ ಸ್ನೇಹಿ ಪಾದಚಾರಿ ಮಾರ್ಗಗಳನ್ನು ನಿರ್ಮಿಸಲಾಗುವುದು.

ನಗರದ ಮೂಲಸೌಕರ್ಯಗಳು ತೀವ್ರ ಒತ್ತಡಕ್ಕೆ ಒಳಗಾಗಿರುವುದರಿಂದ ನಗರದ ಹೊರವಲಯದಲ್ಲಿರುವ ಮಳೆನೀರು ಚರಂಡಿಗಳ (ರಾಜಕಾಲುವೆ) ಬಫರ್ ಪ್ರದೇಶವನ್ನು ಟಿಡಿಆರ್ ಆಧಾರದ ಮೇಲೆ ಮತ್ತು ಲಘು ವಾಹನಗಳ ಸಂಚಾರ ಮತ್ತು ಸೈಕಲ್ ಸಂಚಾರಕ್ಕಾಗಿ ರಸ್ತೆ ಮಾರ್ಗಗಳನ್ನು ನಿರ್ಮಿಸಲಾಗುವುದು. ಮೂರು ವರ್ಷಗಳಲ್ಲಿ 600 ಕೋಟಿ ರೂ.ಗಳಲ್ಲಿ 300 ಕಿ.ಮೀ ಉದ್ದದ ರಾಜಕಾಲುವೆ ಎರಡೂ ಬದಿಯಲ್ಲಿ ಪಥ ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ
BBMP Budget: 12,370 ಕೋಟಿ ರೂ. ಗಾತ್ರ; ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆ ಸಾಕಾರಕ್ಕೆ 8 ವಿಭಾಗ ಸೃಷ್ಟಿ

ಪ್ರವಾಹ ತಡೆಗಟ್ಟಲು ಕಿರಿದಾದ ರಾಜಕಾಲುವೆ ಹಾಗೂ ಹಳೆಯ ಸೇತುವೆಗಳ ಪುನರ್ ನಿರ್ಮಾಣಕ್ಕೆ ರಾಷ್ಟ್ರೀಯ ವಿಪತ್ತು ನಿಧಿಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, 250 ಕೋಟಿ ಅನುದಾನ ದೊರೆಯುವ ನಿರೀಕ್ಷೆ ಇದೆ ಎಂದರು.

ಸುಮಾರು 145 ಕಿ.ಮೀ ಉದ್ದದ ರಸ್ತೆಗಳ ವೈಟ್ ಟಾಪಿಂಗ್ ರಸ್ತೆಯನ್ನು ಎರಡು ವರ್ಷಗಳ ಕಾಲ ರಾಜ್ಯ ಸರ್ಕಾರದ 800 ಕೋಟಿ ರೂಪಾಯಿ ಅನುದಾನ ಮತ್ತು ಬಿಬಿಎಂಪಿಯ 900 ಕೋಟಿ ರೂಪಾಯಿಗಳ ಆಂತರಿಕ ಸಂಪನ್ಮೂಲಗಳೊಂದಿಗೆ ಕೈಗೊಳ್ಳಲಾಗುವುದು. ಇದಕ್ಕಾಗಿಜೆಟ್ ನಲ್ಲಿ 300 ಕೋಟಿ ರೂ.ನೀಡಲಾಗಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com