ರಾಮೇಶ್ವರಂ ಕೆಫೆ ಸ್ಫೋಟ: ಬಿಎಂಟಿಸಿ ಬಸ್‌ನಲ್ಲಿ ಶಂಕಿತ ಪಯಣ, ಸಿಸಿಟಿವಿ ದೃಶ್ಯ ಪರಿಶೀಲನೆ

30 ರಿಂದ 35 ವರ್ಷದೊಳಗಿನ ಶಂಕಿತ ಎಂದು ಅಂದಾಜು
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ

ಬೆಂಗಳೂರು: ನಗರದ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಿ 30 ರಿಂದ 35 ವರ್ಷದೊಳಗಿನ ಶಂಕಿತ ಎಂದು ಅಂದಾಜುಪಟ್ಟಿದ್ದಾರೆ.

ಪ್ರಕರಣವನ್ನು ಎಸಿಪಿ ನವೀನ್ ಕುಲಕರ್ಣಿ ನೇತೃತ್ವದಲ್ಲಿ ಕೇಂದ್ರ ಅಪರಾಧ ವಿಭಾಗದ (CCB) ತನಿಖೆಗೆ ಹಸ್ತಾಂತರಿಸಲಾಗಿದೆ.

ದೃಶ್ಯಗಳಲ್ಲಿ, ಆರೋಪಿತ ಬಾಂಬರ್ ಶರ್ಟ್, ಕಪ್ಪು ಪ್ಯಾಂಟ್ ಮತ್ತು ಕಪ್ಪು ಬೂಟುಗಳನ್ನು ಧರಿಸಿರುವುದು ಕಂಡುಬಂದಿದೆ. ಬಲಗೈಯಲ್ಲಿ ಕಪ್ಪು ಬ್ಯಾಗ್ ಧರಿಸಿದ್ದು, ಎಡಗೈಯಲ್ಲಿ ಸೆಲ್ ಫೋನ್ ಹಿಡಿದುಕೊಂಡು ಶಂಕಿತ ಆರೋಪಿ ಬೆಳಿಗ್ಗೆ 11.34 ಕ್ಕೆ ಕೆಫೆಗೆ ಪ್ರವೇಶಿಸಿ 11.50 ಕ್ಕೆ ಹೊರಟುಹೋಗಿದ್ದಾನೆ.

ಶಂಕಿತ ಆರೋಪಿ ಬಿಎಂಟಿಸಿ ವೋಲ್ವೋ ಬಸ್‌ನಲ್ಲಿ ಪ್ರಯಾಣಿಸಿದ್ದಾನೆ. ಆರೋಪಿಗಳ ಪ್ರಯಾಣದ ಬಗ್ಗೆ ಪರಿಶೀಲಿಸಲು ಪೊಲೀಸರು ಬಿಎಂಟಿಸಿ ಒದಗಿಸಿದ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ
ರಾಮೇಶ್ವರಂ ಕೆಫೆ ಸ್ಫೋಟ: ಕ್ಯಾಪ್, ಮಾಸ್ಕ್ ಧರಿಸಿ ಬಂದು ರವೆ ಇಡ್ಲಿ ತಿಂದು ಟೈಮರ್ ಇಟ್ಟು ಹೋಗಿದ್ದ ಶಂಕಿತ!

ಶಂಕಿತ ಉಗ್ರರು ಬಾಂಬ್ ಹೊತ್ತೊಯ್ದ ಬ್ಯಾಗ್ ಹಿಡಿದು ರೆಸ್ಟೋರೆಂಟ್‌ಗೆ ತೆರಳಿದ್ದು ಬಿಎಂಟಿಸಿ ಬಸ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಿನ್ನೆ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಶಂಕಿತ ವ್ಯಕ್ತಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿದ್ದಾನೆ ಎಂದು ಖಚಿತಪಡಿಸಿದ್ದಾರೆ.

ಶಂಕಿತ ವ್ಯಕ್ತಿಯು ಕೆಫೆಗೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಕೋರಿದ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ನಾವು ಹಂಚಿಕೊಂಡಿದ್ದೇವೆ. ಪೊಲೀಸರು ತನಿಖೆ ನಡೆಸಬೇಕಾಗಿದ್ದು, ಪೊಲೀಸರು ಕೇಳಿದ ವಿವರಗಳನ್ನು ನೀಡುವ ಮೂಲಕ ಪೊಲೀಸರಿಗೆ ಬೆಂಬಲ ನೀಡುವುದು ನಮ್ಮ ಕೆಲಸವಾಗಿದೆ. ಅವರ ವಿಚಾರಣೆಯಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದರು.

ಶಂಕಿತ ವ್ಯಕ್ತಿ ಪ್ರಯಾಣಿಸಿದ ಬಸ್ ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಕಾಡುಗೋಡಿ ನಡುವೆ ಸಿಎಮ್‌ಆರ್‌ಐಟಿ ಕಾಲೇಜು, ಕುಂದಲಹಳ್ಳಿ ಕಾಲೋನಿ, ಐಟಿಪಿಎಲ್ ಬಸ್ ನಿಲ್ದಾಣಗಳು ಒಳಗೊಂಡ ಮಾರ್ಗ ಸಂಖ್ಯೆ ‘500 ಎಫ್’ ಎಂದು ಹೇಳಲಾಗಿದೆ. ಬಿಎಂಟಿಸಿ ಬಸ್‌ನಲ್ಲಿ ಬಾಂಬ್ ಇಟ್ಟು ವಾಪಸ್ ಪ್ರಯಾಣಿಸಿದ್ದಾರೆ ಎನ್ನಲಾಗಿದ್ದು, ಬಿಎಂಟಿಸಿ ಹಂಚಿಕೊಂಡಿರುವ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com