ಹವಾಮಾನ: ಅವಧಿಗೂ ಮೊದಲೇ ಬೆಂಗಳೂರಿನಲ್ಲಿ ಬಿರು ಬಿಸಿಲು; 4 ವರ್ಷದ ದಾಖಲೆ ಮುರಿದ ಗಾರ್ಡನ್ ಸಿಟಿ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅವಧಿಗೂ ಮೊದಲೇ ಬೇಸಿಗೆ ಝಳ ಹೆಚ್ಚಾಗಿದ್ದು ತಾಪಮಾನ ದಿಢೀರ್ ಏರಿಕೆಯಾಗಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅವಧಿಗೂ ಮೊದಲೇ ಬೇಸಿಗೆ ಝಳ ಹೆಚ್ಚಾಗಿದ್ದು ತಾಪಮಾನ ದಿಢೀರ್ ಏರಿಕೆಯಾಗಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

ಚಳಿಗಾಲದ ಅಂತ್ಯದ ನಡುವೆಯೇ ರಾಜ್ಯಕ್ಕೆ ಬೇಸಿಗೆ ಝಳ ಕಾಲಿಟ್ಟಿದ್ದು, ಅವಧಿಗೂ ಮೊದಲೇ ಬೆಂಗಳೂರಿನಲ್ಲಿ ಬೇಸಿಗೆ ಆರಂಭವಾಗಿದೆ ಎಂದು ಮಾಹಿತಿ ನೀಡಿದೆ. ಇನ್ನು ಬೆಂಗಳೂರು ನಾಲ್ಕು ವರ್ಷದ ದಾಖಲೆಯನ್ನು ಮುರಿದಿದೆ. 2018ರ ಬಳಿಕ ದಾಖಲೆಯನ್ನು ನಿನ್ನೆ ಮಂಗಳವಾರ ದಾಖಲಾಗಿದೆ.

ರಾಜ್ಯದಲ್ಲಿ ಸಾಮಾನ್ಯ ಮಾರ್ಚ್ 1 ರ ಬದಲಿಗೆ ಫೆಬ್ರವರಿ 24 ರಿಂದಲೇ ಬೇಸಿಗೆ ಆರಂಭವಾಗಿದೆ. ಇನ್ನು ತಾಪಮಾನ ದಿಢೀರ್ ಏರಿಕೆಯಾಗಿದೆ. ನಿನ್ನೆ ಬೆಂಗಳೂರಿನಲ್ಲಿ 36 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದು ಮುಂದಿನ ದಿನಗಳಲ್ಲಿ ತಾಪಮಾನ ಏರಿಕೆಯೊಂದಿಗೆ ಶುಷ್ಕ ಹವಾಮಾನದ ಮುನ್ಸೂಚನೆ ಇದೆ.

ಸಂಗ್ರಹ ಚಿತ್ರ
ಕರ್ನಾಟಕದ ಬಹುತೇಕ ಭಾಗಗಳಲ್ಲಿ ತಾಪಮಾನ ಏರಿಕೆ: ನಾಗರಿಕರೇ ಎಚ್ಚರಿಕೆಯಿಂದಿರಿ...

ಬಿರು ಬೇಸಿಗೆ ನಡುವೆ ಬೆಂಗಳೂರಿನಲ್ಲಿ ನೀರಿನ ಹಾಹಾಕಾರ ಶುರುವಾಗಿದೆ. ಬೆಂಗಳೂರಿನ ಹಲವು ಭಾಗಗಳಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ. ಇನ್ನು ಒಂದು ನೀರಿನ ಟ್ಯಾಂಕರ್ ಗೆ 1,500 ರಿಂದ 2,000 ರೂಪಾಯಿ ಕೊಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com