ಬೆಂಗಳೂರು: ಕೇರಳಕ್ಕೆ ಹೋಗುವುದಾಗಿ ಹೇಳಿ ಹೋದ ಟೆಕ್ಕಿ ಪತಿ ನಾಪತ್ತೆ; ಹುಡುಕಿಕೊಡುವಂತೆ ಪತ್ನಿ ದೂರು!

ಫೆಬ್ರವರಿ 22 ರಂದು ಇದ್ದಕ್ಕಿದ್ದಂತೆ ನಾಪತ್ತೆಯಾರುವ ಪತಿಯನ್ನು ಹುಡುಕಲು ಮಹಿಳಾ ಟೆಕ್ಕಿಯೊಬ್ಬರು ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಸಂಪರ್ಕಿಸಿದ್ದಾರೆ.
ನಾಪತ್ತೆಯಾಗಿರುವ ಟೆಕ್ಕಿ ರಂಜಿತ್
ನಾಪತ್ತೆಯಾಗಿರುವ ಟೆಕ್ಕಿ ರಂಜಿತ್

ಬೆಂಗಳೂರು: ಫೆಬ್ರವರಿ 22 ರಂದು ಇದ್ದಕ್ಕಿದ್ದಂತೆ ನಾಪತ್ತೆಯಾರುವ ಪತಿಯನ್ನು ಹುಡುಕಲು ಮಹಿಳಾ ಟೆಕ್ಕಿಯೊಬ್ಬರು ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಸಂಪರ್ಕಿಸಿದ್ದಾರೆ. ಅವರು ಕೇರಳದ ತ್ರಿಶೂರ್‌ಗೆ ಹೋಗುವುದಾಗಿ ಹೇಳಿದ್ದರು ಆದರೆ ಬದಲಿಗೆ ಪುದುಚೇರಿಗೆ ತೆರಳಿದ್ದರು.

ಪಿ ಹಿತಾ (39) ಮತ್ತು ಅವರ ಪತಿ ರಂಜಿತ್ ವಿಆರ್ (42) ತಮ್ಮ ಇಬ್ಬರು ಮಕ್ಕಳೊಂದಿಗೆ ವೈಟ್‌ಫೀಲ್ಡ್‌ನ ನ್ಯೂ ಟೆಂಪಲ್ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಕಳೆದ ತಿಂಗಳು ಹಿತ ರಂಜಿತ್‌ನನ್ನು ಮೆಟ್ರೋ ನಿಲ್ದಾಣಕ್ಕೆ ಇಳಿಸಿ ಮನೆಗೆ ಹಿಂದಿರುಗಿದ ನಂತರ ಜೀವನವು ಇದ್ದಕ್ಕಿದ್ದಂತೆ ಬದಲಾಯಿತು. ತಾನು ಮೆಜೆಸ್ಟಿಕ್ ಬಳಿ ಬಸ್‌ಗಾಗಿ ಕಾಯುತ್ತಿರುವುದಾಗಿ ಹೇಳಲು ಆಕೆಗೆ ಕರೆ ಮಾಡಿದ ಎನ್ನಲಾಗಿದೆ. ಕರೆ ಮಾಡಿದ ನಂತರ, ಅವರು ನಾಪತ್ತೆಯಾಗಿದ್ದಾರೆ.

ರಂಜಿತ್ ವೈಟ್‌ಫೀಲ್ಡ್‌ನಲ್ಲಿರುವ ಎನರ್ಜಿ ಟೆಕ್ನಾಲಜಿ ಕಂಪನಿಯಲ್ಲಿ ಟೀಮ್ ಲೀಡರ್ ಆಗಿ ಕೆಲಸ ಮಾಡುತ್ತಿದ್ದಾರೆ, ಹಿತ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾರೆ. ಅವರು ಆತಂಕ ಮತ್ತು ಖಿನ್ನತೆಯ ಸಮಸ್ಯೆಗಳನ್ನು ಹೊಂದಿದ್ದರು ಹೀಗಾಗಿ ಔಷಧೋಪಚಾರದಲ್ಲಿದ್ದರು ಎಂದು ವರದಿಯಾಗಿದೆ.

ರಂಜಿತ್ ಫೆಬ್ರವರಿ 22 ರಿಂದ 28 ರವರೆಗೆ ಕೇರಳದ ತನ್ನ ತವರು ತ್ರಿಶೂರ್‌ಗೆ ವಿಹಾರಕ್ಕೆ ಯೋಜಿಸಿದ್ದರು. ಮೆಟ್ರೋದಲ್ಲಿ ಮೆಜೆಸ್ಟಿಕ್‌ಗೆ ತೆರಳಿದ್ದರು. ಮೆಜೆಸ್ಟಿಕ್‌ನಲ್ಲಿ ರೈಲು ಹತ್ತಿದೆ ಎಂದು ಪತ್ನಿಗೂ ಕರೆ ಮಾಡಿದ. ಆದರೆ ತ್ರಿಶೂರ್ ಬದಲಾಗಿ ಪುದುಚೇರಿಗೆ ಕ್ಯಾಬ್ ಬಾಡಿಗೆಗೆ ಪಡೆದಿದ್ದರು.

ನಾಪತ್ತೆಯಾಗಿರುವ ಟೆಕ್ಕಿ ರಂಜಿತ್
ಫೆಬ್ರವರಿ 5ರಂದು ಗೋಕರ್ಣದಲ್ಲಿ ಜಪಾನ್‌ನ ಪ್ರವಾಸಿ ಮಹಿಳೆ ನಾಪತ್ತೆ!

ಅವರ ಮೊಬೈಲ್ ಸ್ವಿಚ್ ಆಫ್ ಆಗಿರುವುದು ಕಂಡುಬಂದ ನಂತರ, ಹಿತ ಅವರ ಕರೆ ದಾಖಲೆಗಳನ್ನು ಪರಿಶೀಲಿಸಿದಾಗ ಅವರು ಮೆಜೆಸ್ಟಿಕ್‌ನಲ್ಲಿರುವ ಟೂರ್ಸ್ ಮತ್ತು ಟ್ರಾವೆಲ್ಸ್ ಏಜೆನ್ಸಿಯಲ್ಲಿ ಕ್ಯಾಬ್ ಅನ್ನು ಬಾಡಿಗೆಗೆ ಪಡೆದಿರುವುದು ಕಂಡುಬಂದಿದೆ. ಹಿತ ಅವರು ಫೆಬ್ರವರಿ 23 ರಂದು ವೈಟ್‌ಫೀಲ್ಡ್ ಪೊಲೀಸರಿಗೆ ದೂರು ನೀಡಿದ್ದಾರೆ. ಅವರು ಕಾಣೆಯಾಗುವ ಒಂದು ದಿನದ ಮೊದಲು, ರಂಜಿತ್ ತನ್ನ ಪತ್ನಿಗೆ ಇ-ಮೇಲ್ ಕಳುಹಿಸಿದ್ದನು, ತನ್ನ ಖಿನ್ನತೆಯಿಂದ ಸಮಸ್ಯೆಗಳನ್ನು ಉಂಟುಮಾಡಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾನೆ. ಫೆಬ್ರವರಿ 26 ರಂದು ಆಕೆಗೆ ಮೇಲ್ ಬಂದಿದೆ.

ನಾವು ಚಾಲಕನೊಂದಿಗೆ ಮಾತನಾಡಿದ್ದೇವೆ, ಅವರು ಪುದುಚೇರಿಯ ಐಜಿ ಸ್ಕ್ವೇರ್‌ಗೆ ಡ್ರಾಪ್ ಮಾಡಿರುವುದಾಗಿ ತಿಳಿಸಿದ್ದಾರೆ. ಫೆಬ್ರವರಿ 22 ರ ಸಂಜೆಯಿಂದ, ರಂಜಿತ್ ಅವರ ಸಂಖ್ಯೆಯಿಂದ ಯಾವುದೇ ಕರೆ ಮಾಡಲಾಗಿಲ್ಲ. ಪುದುಚೇರಿಗೆ ಹೋಗಿ ನಾಲ್ಕು ದಿನ ಅಲ್ಲಿಯೇ ಇದ್ದು ಹುಡುಕಿದೆವು.

ನಾಪತ್ತೆಯಾಗಿರುವ ಟೆಕ್ಕಿ ರಂಜಿತ್
ಕೆರಗೋಡು: ಹನುಮ ಧ್ವಜಕ್ಕೆ ಅನುಮತಿ ಕೊಟ್ಟ ಗ್ರಾಮ ಪಂಚಾಯಿತಿ ರಿಜಿಸ್ಟರ್ ನಾಪತ್ತೆ; ಕೆಲಕಾಲ ಪರಿಸ್ಥಿತಿ ಉದ್ವಿಗ್ನ

ನಾವು ಫೆಬ್ರವರಿ 23 ರಂದು 2.30 ರ ಸುಮಾರಿಗೆ ಪುದುಚೇರಿಯ ಬೀಚ್ ರಸ್ತೆಯವರೆಗೂ ಅವರ ಚಲನವಲನಗಳನ್ನು ಪತ್ತೆಹಚ್ಚಲು ಸಾಧ್ಯವಾಯಿತು. ಆದರೆ ಹೆಚ್ಚಿಗೆ ಏನನ್ನೂ ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಆತ ತನ್ನ ಖಾತೆಯಿಂದ ಹಣವನ್ನು ಪಡೆದಿಲ್ಲ ಎಂದು ಕುಟುಂಬದ ಸದಸ್ಯರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ನಾಪತ್ತೆ ದೂರು ದಾಖಲಿಸಿಕೊಂಡಿರುವ ವೈಟ್‌ಫೀಲ್ಡ್ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕಾಣೆಯಾದ ವ್ಯಕ್ತಿ ಇನ್ನೂ ಪತ್ತೆಯಾಗಿಲ್ಲ. ಆತನನ್ನು ಪುದುಚೇರಿಯಲ್ಲಿ ಡ್ರಾಪ್ ಮಾಡಿದ ಚಾಲಕನೊಂದಿಗೆ ಮಾತನಾಡಿದ್ದೇವೆ. ಆತನ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ವೈಟ್‌ಫೀಲ್ಡ್ ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com