ಏಕರೂಪ ಟ್ಯಾಕ್ಸಿ ದರ ನಿಯಮಗಳ ಪರಿಶೀಲಿಸಿ: ರಾಜ್ಯ ಸರ್ಕಾರಕ್ಕೆ NASSCOM ಆಗ್ರಹ

ಕರ್ನಾಟಕದಲ್ಲಿ ಹೊಸದಾಗಿ ಹೊರಡಿಸಲಾಗಿರುವ ಏಕರೂಪದ ಟ್ಯಾಕ್ಸಿ ದರದ ನಿಯಮಗಳನ್ನು ಪರಿಶೀಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ರಾಷ್ಟ್ರೀಯ ಸಾಫ್ಟ್‌ವೇರ್ ಮತ್ತು ಸೇವಾ ಕಂಪನಿಗಳ ಸಂಘ (ನಾಸ್ಕಾಮ್) ಒತ್ತಾಯಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕರ್ನಾಟಕದಲ್ಲಿ ಹೊಸದಾಗಿ ಹೊರಡಿಸಲಾಗಿರುವ ಏಕರೂಪದ ಟ್ಯಾಕ್ಸಿ ದರದ ನಿಯಮಗಳನ್ನು ಪರಿಶೀಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ರಾಷ್ಟ್ರೀಯ ಸಾಫ್ಟ್‌ವೇರ್ ಮತ್ತು ಸೇವಾ ಕಂಪನಿಗಳ ಸಂಘ (ನಾಸ್ಕಾಮ್) ಒತ್ತಾಯಿಸಿದೆ.

ಫೆಬ್ರವರಿ 3 ರಂದು, ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ರಾಜ್ಯದಲ್ಲಿ ಕ್ಯಾಬ್ ದರವನ್ನು ಪರಿಷ್ಕರಿಸಿತ್ತು. ವಾಹನದ ಮೌಲ್ಯಕ್ಕನುಗುಣವಾಗಿ ಪ್ರತಿ 1 ಕಿ.ಮೀ.ಗೆ ತಲಾ 24 ರೂ. ದರವನ್ನು ನಿಗದಿ ಮಾಡಿತ್ತು.

ಸರ್ಕಾರದ ಈ ಅಧಿಸೂಚನೆಗೆ ನಾಸ್ಕಾಮ ಅಸಮಾಧಾನ ವ್ಯಕ್ತಪಡಿಸಿದ್ದು, ಬ್ಲಾಗ್ ಪೋಸ್ಟ್ ಮೂಲಕ ಸರ್ಕಾರಕ್ಕೆ ಪತ್ರ ಬರೆದು, ಆದೇಶಕ್ಕೆ ಕಳವಳ ವ್ಯಕ್ತಪಡಿಸಿದೆ.

ಸಂಗ್ರಹ ಚಿತ್ರ
ಬೆಂಗಳೂರಿನಲ್ಲಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ರೈಡರ್‌ನಿಂದ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ

ಹಿಂದೆ, ಪ್ರತಿ ಕಿ.ಮೀ ದರದ ಶ್ರೇಣಿಯು ಜಾರಿಯಲ್ಲಿತ್ತು. ಇದು ಅಪ್ಲಿಕೇಶನ್-ಆಧಾರಿತ ಟ್ಯಾಕ್ಸಿ ಅಗ್ರಿಗೇಟರ್‌ಗಳಿಗೆ ಸಹಾಯಕವಾಗಿತ್ತು. ಸರ್ಕಾರದ ಅಧಿಸೂಚನೆ ಇದೀಗ ಅನಾನುಕೂಲತೆ ಸೃಷ್ಟಿಸಿದೆ. ಸರ್ಕಾರ ಕೂಡಲೇ ನಿಯಮಗಳನ್ನು ಪರಿಶೀಲಿಸಬೇಕೆಂದು ಒತ್ತಾಯಿಸಿದೆ.

ಆ್ಯಪ್ ಆಧಾರಿತ ಟ್ಯಾಕ್ಸಿಗಳು ಮತ್ತು ಅಪ್ಲಿಕೇಶನ್ ಅಲ್ಲದ ಸಿಟಿ ಟ್ಯಾಕ್ಸಿಗಳ ದರದ ರಚನೆಯು ಮೊದಲು ವಿಭಿನ್ನವಾಗಿತ್ತು. ಹೊಸ ದರದ ರಚನೆಯು ಅಪ್ಲಿಕೇಶನ್-ಆಧಾರಿತ ಮತ್ತು ಅಪ್ಲಿಕೇಶನ್-ಅಲ್ಲದ ಟ್ಯಾಕ್ಸಿಗಳಿಗೆ ಒಂದೇ ದರವನ್ನು ಕಡ್ಡಾಯಗೊಳಿಸುತ್ತದೆ, ಇದರಿಂದಾಗಿ ಮೌಲ್ಯವರ್ಧಿತ ಸೇವೆಗಳನ್ನು ನೀಡಲು ಮತ್ತು ಸೇವೆಯನ್ನು ಸುಧಾರಿಸಲು ಕಠಿಣವಾಗುತ್ತದೆ ಎಂದು ಹೇಳಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com