ರಾಜ್ಯದ ರಾಷ್ಟ್ರೀಯ ಹೆದ್ದಾರಿ 748A ಉನ್ನತೀಕರಣಕ್ಕೆ ಕೇಂದ್ರದಿಂದ 2,675 ಕೋಟಿ ರೂ. ಮಂಜೂರು

ರಾಷ್ಟ್ರೀಯ ಹೆದ್ದಾರಿ-748ಎ ಬೆಳಗಾವಿ-ಹುನಗುಂದ-ರಾಯಚೂರು ವಿಭಾಗದ ಚತುಷ್ಪಥ ರಸ್ತೆಯಾಗಿ ಉನ್ನತೀಕರಿಸಲು ಹೆದ್ದಾರಿ ಸಚಿವಾಲಯ 2,675.31 ಕೋಟಿ ರೂ. ಮಂಜೂರು ಮಾಡಿದೆ.
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ

ನವದೆಹಲಿ: ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-748ಎ ಬೆಳಗಾವಿ-ಹುನಗುಂದ-ರಾಯಚೂರು ವಿಭಾಗದ ಚತುಷ್ಪಥ ರಸ್ತೆಯಾಗಿ ಉನ್ನತೀಕರಿಸಲು ಹೆದ್ದಾರಿ ಸಚಿವಾಲಯ 2,675.31 ಕೋಟಿ ರೂ. ಮಂಜೂರು ಮಾಡಿದೆ.

ಈ ಉಪಕ್ರಮವು ಒಟ್ಟು 92.40 ಕಿಮೀ ಉದ್ದದ ಹೆದ್ದಾರಿಯನ್ನು ಒಳಗೊಂಡಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಯೋಜನೆಯು ಪಣಜಿ-ಹೈದರಾಬಾದ್ EC10 ಕಾರಿಡಾರ್‌ನ ಅವಿಭಾಜ್ಯ ಅಂಗವಾಗಿದೆ ಎಂದು ಅವರು ಹೇಳಿದ್ದಾರೆ.

ನಿತಿನ್ ಗಡ್ಕರಿ
ಬೆಳಗಾವಿಯಲ್ಲಿ 6,975 ಕೋಟಿ ರೂ. ಮೌಲ್ಯದ ಹೆದ್ದಾರಿ ಕಾಮಗಾರಿಗೆ ನಿತಿನ್ ಗಡ್ಕರಿ ಚಾಲನೆ

EC10 ಮೀನುಗಾರಿಕೆ ಮತ್ತು ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುವ ಪಣಜಿ, ಆಹಾರ ಧಾನ್ಯಗಳು ಮತ್ತು ಹಾಲಿನ ಉತ್ಪನ್ನಗಳಿಗೆ ಹೆಸರುವಾಸಿಯಾಗಿರುವ ಬೆಳಗಾವಿ; ಅಕ್ಕಿ, ಹತ್ತಿ, ಶೇಂಗಾ, ಮತ್ತು ಬೇಳೆಕಾಳುಗಳಿಗೆ ಹೆಸರುವಾಸಿಯಾಗಿರುವ ರಾಯಚೂರು ಮತ್ತು ಐಟಿ, ಫಾರ್ಮ್ ಮತ್ತು ಹೆಲ್ತ್‌ಕೇರ್‌ಗೆ ವಿಶಿಷ್ಟ ಸ್ಥಾನ ಪಡೆದಿರುವ ಹೈದರಾಬಾದ್ ಸೇರಿದಂತೆ ಪ್ರಮುಖ ಕೈಗಾರಿಕಾ ಕೇಂದ್ರಗಳನ್ನು ಸಂಪರ್ಕಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com