ಈ ಬಾರಿ ಸುಡಲಿದೆ ರಣ ಬಿಸಿಲು, ಆದರೂ ಬೀಳಲಿದೆ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಈ ಬೇಸಿಗೆಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗುವ ಸಾಧ್ಯತೆಯಿದೆ. ಮಾರ್ಚ್ ನಿಂದ ಮೇ ವರೆಗೆ ರಾಜ್ಯದ ಉತ್ತರ ಒಳಭಾಗಗಳಲ್ಲಿ ಶಾಖವು ಹೆಚ್ಚಿರುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರPTI
Updated on

ಬೆಂಗಳೂರು: ರಾಜ್ಯದಲ್ಲಿ ಈ ಬೇಸಿಗೆಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗುವ ಸಾಧ್ಯತೆಯಿದೆ. ಮಾರ್ಚ್ ನಿಂದ ಮೇ ವರೆಗೆ ರಾಜ್ಯದ ಉತ್ತರ ಒಳಭಾಗಗಳಲ್ಲಿ ಶಾಖವು ಹೆಚ್ಚಿರುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಆದಾಗ್ಯೂ, ಮಾರ್ಚ್‌ನಲ್ಲಿ ಗರಿಷ್ಠ ತಾಪಮಾನವು 35 ಡಿಗ್ರಿ ಸೆಲ್ಸಿಯಸ್ ದಾಟದಿರಬಹುದು. ಇನ್ನು ಈ ತಿಂಗಳು ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದ್ದು ರಾಜ್ಯದ ಕೆಲವು ಭಾಗಗಳಲ್ಲಿ ಸುಡುವ ಶಾಖದಿಂದ ಜನರಿಗೆ ಇದು ಸ್ವಲ್ಪ ವಿರಾಮ ನೀಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಉತ್ತರದ ಒಳಭಾಗಗಳಲ್ಲಿ ರಣ ಬಿಸಿಲಿಗೆ ಸಾಕ್ಷಿಯಾಗುವ ಸಾಧ್ಯತೆಯಿದೆ. ದಾಖಲೆಗಳ ಪ್ರಕಾರ, ಬೆಂಗಳೂರಿನಲ್ಲಿ 2005ರ ಫೆಬ್ರವರಿಯಲ್ಲಿ ಗರಿಷ್ಠ ತಾಪಮಾನ 35.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. 2016, 2017, 2018 ಮತ್ತು 2019ರಲ್ಲಿ, ಫೆಬ್ರವರಿಯಲ್ಲಿ ಗರಿಷ್ಠ ತಾಪಮಾನ 35.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಆದರೆ ಈ ವರ್ಷ ಫೆಬ್ರವರಿಯಲ್ಲಿ 34.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಕಳೆದ ಮಂಗಳವಾರ ಬೆಂಗಳೂರಿನಲ್ಲಿ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದು ಈ ವರ್ಷದ ಅತ್ಯಂತ ಹೆಚ್ಚು ತಾಪಮಾನದ ದಿನವಾಗಿದೆ. ಮಾರ್ಚ್ 2017ರಲ್ಲಿ, ಆ ತಿಂಗಳ ನಾಲ್ಕನೇ ವಾರದಲ್ಲಿ 37.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು. 2019ರಲ್ಲಿ, ಮಾರ್ಚ್ 8ರಂದು 37.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು.

ಸಂಗ್ರಹ ಚಿತ್ರ
ಈ ವರ್ಷ ಬೇಸಿಗೆ ಬಿಸಿಲಿನ ಝಳ ಹೆಚ್ಚಾಗುವ ಸಾಧ್ಯತೆ: ಭಾರತೀಯ ಹವಾಮಾನ ಇಲಾಖೆ

ತಾಪಮಾನ ಹೆಚ್ಚಳಕ್ಕೆ ಹಲವು ಕಾರಣಗಳಿವೆ. ಎಲ್ ನಿನೋ ಪರಿಣಾಮ ಸಹ ಇರಬಹುದು. ಮುಂಬರುವ ತಿಂಗಳುಗಳಲ್ಲಿ ಎಲ್ ನಿನೋ ದುರ್ಬಲಗೊಳ್ಳುವ ಸಾಧ್ಯತೆಯಿದೆ. ಬಹುಶಃ ಆರಂಭದಲ್ಲಿ ಮಾನ್ಸೂನ್ ಋತುವಿನಲ್ಲಿ ಅದು ತಟಸ್ಥವಾಗಲಿದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ... ಅಂದರೆ ಎಲ್ ನಿನೋ 0 ಮತ್ತು 0.5 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ. ಆದರೆ ಈಗ ಅದು 1.5 ಡಿಗ್ರಿ ಸೆಲ್ಸಿಯಸ್ ಆಗಿದೆ. ಇದರಿಂದಾಗಿ, ನಾವು ಸ್ಪಷ್ಟ ನೀಲಾಕಾವನ್ನು ಕಾಣುತ್ತಿದ್ದೇವೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ವಿಜ್ಞಾನಿ ಎ ಪ್ರಸಾದ್ ತಿಳಿಸಿದ್ದಾರೆ.

ಸದ್ಯ ನಾವು ಯಾವುದೇ ಮೋಡ ಕವಿದ ವಾತಾವರಣವನ್ನು ಹೊಂದಿಲ್ಲ. ಆದ್ದರಿಂದ, ತಾಪಮಾನವು ಏರುತ್ತಿದೆ. ಆದರೆ ಸಾಮಾನ್ಯ ಮಳೆಯ ಸಂಭವನೀಯತೆಯೂ ಇದೆ. ಫೆಬ್ರವರಿಯಲ್ಲಿ ಯಾವುದೇ ಮಳೆಯಾಗಲಿಲ್ಲ. ಮುಖ್ಯವಾಗಿ ಈ ಎಲ್ ನಿನೋ ಪರಿಸ್ಥಿತಿಯಿಂದಾಗಿ ಈ ಬಾರಿ ಬೇಸಿಗೆಯ ಆರಂಭದಲ್ಲಿ ನಡುಬೇಸಿಗೆಯಂತಹ ಪರಿಸ್ಥಿತಿಯನ್ನು ಹೊಂದಿದ್ದೇವೆ. ಮಾರ್ಚ್‌ನಲ್ಲಿ ಬೇಸಿಗೆ ಪ್ರಾರಂಭವಾದರೂ, ಕಳೆದ ಕೆಲವು ವರ್ಷಗಳಿಂದ ಅದರ ಪರಿಣಾಮ ಫೆಬ್ರವರಿಯಿಂದಲೇ ಅನುಭವಿಸುತ್ತಿದೆ. ಜಾಗತಿಕ ತಾಪಮಾನವೂ ಇದಕ್ಕೆ ಕಾರಣ ಎಂದರು.

ಸಂಗ್ರಹ ಚಿತ್ರ
ಹವಾಮಾನ: ಅವಧಿಗೂ ಮೊದಲೇ ಬೆಂಗಳೂರಿನಲ್ಲಿ ಬಿರು ಬಿಸಿಲು; 4 ವರ್ಷದ ದಾಖಲೆ ಮುರಿದ ಗಾರ್ಡನ್ ಸಿಟಿ!

ಮಾರ್ಚ್‌ನ ಮುನ್ಸೂಚನೆಯ ಪ್ರಕಾರ, ಬೆಂಗಳೂರು ಸೇರಿದಂತೆ ಕರ್ನಾಟಕದ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ರಾಜ್ಯದಲ್ಲಿ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಕೆಲವು ದಿನಗಳವರೆಗೆ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನಕ್ಕೆ ಸಾಕ್ಷಿಯಾಗುವ ಸಂಭವನೀಯತೆ ಇದೆ. ಇದು ಎಲ್ಲಾ 31 ದಿನಗಳವರೆಗೆ ಇರಬಾರದು. ಆದರೆ ಈ ಮೂರು ತಿಂಗಳುಗಳಲ್ಲಿ ಕೆಲವು ದಿನಗಳು ಮಾತ್ರ ಇರಲಿದೆ ಎಂದು ಪ್ರಸಾದ್ ಹೇಳಿದರು.

ಗರಿಷ್ಠ ತಾಪಮಾನವು 35 ಡಿಗ್ರಿಗಳನ್ನು ಮುಟ್ಟುತ್ತದೆ. ಆದರೆ ಅದು ಈ ತಿಂಗಳಲ್ಲಿ ಮೀರದಿರಬಹುದು. ಮುನ್ಸೂಚನೆಯ ಪ್ರಕಾರ, ಮಾರ್ಚ್‌ನಲ್ಲಿ ಸರಾಸರಿ ತಾಪಮಾನವು 34.1 ಡಿಗ್ರಿ ಸೆಲ್ಸಿಯಸ್ ಆಗಿರಬಹುದು. ಏಪ್ರಿಲ್‌ನಲ್ಲಿ ಇದು 33.4 ಡಿಗ್ರಿ ಸೆಲ್ಸಿಯಸ್ ಮತ್ತು ಮೇ ತಿಂಗಳಿನಲ್ಲಿ ಇದು 33.1 ಡಿಗ್ರಿ ಸೆಲ್ಸಿಯಸ್ ಆಗಿದೆ. ಮೇ ತಿಂಗಳಿನಿಂದ ಸರಾಸರಿ ತಾಪಮಾನ ಕಡಿಮೆಯಾಗಲಿದೆ ಎಂದು ಅವರು ಹೇಳಿದರು.

ಇದು ಬಿರು ಬೇಸಿಗೆ ಆಗುವುದಿಲ್ಲ ... ಮಳೆಯೂ ಇರುತ್ತದೆ ... ಸಾಮಾನ್ಯ ಮಳೆಯಾಗುತ್ತದೆ. ಈ ಮೂರು ತಿಂಗಳಲ್ಲಿ ನಾವು ಸಾಮಾನ್ಯ ಮಳೆಯ ನಿರೀಕ್ಷೆಯಲ್ಲಿದ್ದೇವೆ. ಮಾರ್ಚ್‌ನಲ್ಲಿ ಸಹ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಯಿದೆ. ನಾವು ಬೆಂಗಳೂರಿಗೆ ಮಾರ್ಚ್‌ನಲ್ಲಿ 14.7 ಮಿಮೀ ಮಳೆಯ ಅಗತ್ಯವಿದೆ. ಕಳೆದ ವರ್ಷ ಬೆಂಗಳೂರಿನಲ್ಲಿ ಮಾರ್ಚ್‌ನಲ್ಲಿ ಒಂಬತ್ತು ಮಿಮೀ ಮಳೆಯಾಗಿತ್ತು. ಕರ್ನಾಟಕವು ಈ ವರ್ಷ ಮಾರ್ಚ್‌ನಲ್ಲಿ 10.5 ಮಿಮೀ ಮಳೆಯಾಗಬೇಕು ಎಂದು ಪ್ರಸಾದ್ ಹೇಳಿದರು.

ಮುನ್ಸೂಚನೆಯ ಪ್ರಕಾರ, ಈ ಬೇಸಿಗೆಯಲ್ಲಿ ಕರ್ನಾಟಕದ ಉತ್ತರ ಒಳಭಾಗದಲ್ಲಿ ತಾಪಮಾನವು 38 ರಿಂದ 39 ಡಿಗ್ರಿ ಸೆಲ್ಸಿಯಸ್ ಅನ್ನು ಮುಟ್ಟುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com