ಶಿವಮೊಗ್ಗ ಇಸಿಸ್ ಪಿತೂರಿ, ಮಂಗಳೂರು ಗೋಡೆ ಬರಹ ಪ್ರಕರಣ: ಎನ್ಐಎಯಿಂದ ಮತ್ತೊಂದು ಚಾರ್ಜ್ ಶೀಟ್ ಸಲ್ಲಿಕೆ

ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಮತ್ತು ಮಂಗಳೂರಿನ ಗೋಡೆ ಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ಮತ್ತೊಬ್ಬ ಆರೋಪಿಯ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಎನ್ಐಎ
ಎನ್ಐಎ

ಬೆಂಗಳೂರು: ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಮತ್ತು ಮಂಗಳೂರಿನ ಗೋಡೆ ಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ಮತ್ತೊಬ್ಬ ಆರೋಪಿಯ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಮಂಗಳೂರಿನ ಎರಡು ಕಡೆ ಗೋಡೆ ಬರಹ ಬರೆಯಲು ಮೊಹಮ್ಮದ್ ಶಾರೀಕ್ ಮತ್ತು ಮಾಝ್ ಮುನೀರ್ ಗೆ ಪ್ರೇರಣೆ ನೀಡಿದ್ದ ಅರಾಫತ್ ಆಲಿ ಮತ್ತು ಇತರ ಇಬ್ಬರ ಬಗ್ಗೆ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ.

ಎನ್ಐಎ
ರಾಮೇಶ್ವರ ಕೆಫೆ ಸ್ಫೋಟ ಪ್ರಕರಣ: ಕರಾವಳಿ ಮೇಲೆ ಎನ್ಐಎ ಹದ್ದಿನ ಕಣ್ಣು, ಓರ್ವ ಶಂಕಿತ ವಶಕ್ಕೆ, ತೀವ್ರ ವಿಚಾರಣೆ

ಅರಾಫತ್, ಕೆಲ ಯುವಕರನ್ನು ಮತೀಯವಾದಕ್ಕೆ ಸೆಳೆದು ಅವರ ಮೂಲಕ ಮಂಗಳೂರಿನಲ್ಲಿ ಗೋಡೆ ಬರಹ ಬರೆಸಿದ್ದ. ಪ್ರಕರಣದಲ್ಲಿ ನಾಪತ್ತೆಯಾಗಿರುವ ಅಬ್ದುಲ್ ಮಥೀನ್ ತಾಹ ಮತ್ತು ಮಸ್ಸವೀರ್ ಹುಸ್ಸೇನ್ ಶಹಬೇಜ್'ನ ಸೂಚನೆಯಂತೆ ಅರಾಫತ್ ಈ ಕೆಲಸ ಮಾಡಿದ್ದ. ಶಾರೀಖ್ ಅಹ್ಮದ್ ಎಂಬಾರತನ ಮೂಲಕ ಈ ಗೋಡೆ ಬರಹ ಬರೆಸಿದದ. ಗೋಡ ಬರಹ ಬರೆದವರಿಗೆ ವಿದೇಶಗಳಿಂದ ಸ್ವೀಕರಿಸಿದ ಕ್ರಿಪ್ಟೋಕರೆನ್ಸಿ ಹಣವನ್ನು ಬಳಸಿಕೊಂಡು ಹಣ ಪಾವತಿಸಿದ್ದ ಎಂದು ಎನ್ಐಎ ಆರೋಪಿಸಿದೆ.

ಅರಾಫತ್'ನ ಕಳೆದ ಸೆ.14ರಂದು ಕೀನ್ಯಾದಿಂದ ಆಗಮಿಸಿದ ವೇಳೆ ಎನ್ಐಎ ಅಧಿಕಾರಿಗಳು ಬಂಧಿಸಿದ್ದರು. ಇದಲ್ಲದೇ ಇದೇ ಪ್ರಕರಣ ಸಂಬಂಧ ಮಾಝ್ ಮುನೀರ್ ಅಹ್ಮದ್ ಹಾಗೂ ಮೊಹಮ್ಮದ್ ಶಾರೀಖ್ ವಿರುದ್ಧವೂ ಆರೋಪಪಟ್ಟಿ ದಾಖಲಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com