ಇಂದಿನಿಂದ 5,8,9 ನೇ ತರಗತಿ ಮಕ್ಕಳಿಗೆ ಬೋರ್ಡ್ ಪರೀಕ್ಷೆ, 28.14 ಲಕ್ಷ ವಿದ್ಯಾರ್ಥಿಗಳು ಭಾಗಿ

ಗೊಂದಲಗಳ ನಡುವೆಯೇ ಇಂದಿನಿಂದ 5,8 ಮತ್ತು 9 ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳು ಆರಂಭವಾಗಿವೆ.
ಪರೀಕ್ಷೆ (ಸಾಂಕೇತಿಕ ಚಿತ್ರ)
ಪರೀಕ್ಷೆ (ಸಾಂಕೇತಿಕ ಚಿತ್ರ)Online desk

ಬೆಂಗಳೂರು: ಗೊಂದಲಗಳ ನಡುವೆಯೇ ಇಂದಿನಿಂದ 5,8 ಮತ್ತು 9 ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳು ಆರಂಭವಾಗಿವೆ. ಬೋರ್ಡ್ ಪ್ರಶ್ನೆ ಪತ್ರಿಕೆಗಳಿಗೆ ಶಾಲೆಗಳಲ್ಲಿಯೇ ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಅನುದಾನಿತ ಮತ್ತು ಅನುದಾನ ರಹಿತ ಸೇರಿ ಒಟ್ಟು 69,137 ಶಾಲೆಗಳಿಂದ 28.14 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

5ನೇ ತರಗತಿ ಪರೀಕ್ಷೆಗಳು ಈ ಹಿಂದೆ ನಿಗದಿಯಾಗಿದ್ದಂತೆಯೇ, ಮಾ.11ರಿಂದ 14ರ ವರೆಗೆ ನಡೆಯಲಿದೆ. 8 ಮತ್ತು 9ನೇ ತರಗತಿ ಪರೀಕ್ಷೆಗಳು ಮಾ.11ರಿಂದ 18ರವರೆಗೆ ನಡೆಯಲಿವೆ. ಎಲ್ಲ ಮಕ್ಕಳಿಗೂ ಮಧ್ಯಾಹ್ನ 2.30ಕ್ಕೆ ಪರೀಕ್ಷೆಗಳು ಆರಂಭವಾಗಲಿದ್ದು ಕ್ರಮವಾಗಿ 4.30ರವರೆಗೆ, ಸಂಜೆ 5 ಹಾಗೂ 5.15ಕ್ಕೆ ಮುಕ್ತಾಯವಾಗಲಿವೆ.

ಪರೀಕ್ಷೆ (ಸಾಂಕೇತಿಕ ಚಿತ್ರ)
ಬೋರ್ಡ್ ಪರೀಕ್ಷೆ ಗೊಂದಲ; ಶಿಕ್ಷಣ ತಜ್ಞರ ಸಭೆ ಕರೆಯುವಂತೆ ಬಿಜೆಪಿ ಆಗ್ರಹ

ಮಂಡಳಿ ಈಗಾಗಲೇ ಸಿದ್ಧಪಡಿಸಿರುವ ಪ್ರಶ್ನೆ ಪತ್ರಿಕೆಗಳು ಸ್ಟ್ರಾಂಗ್‌ ರೂಂಗಳಿಗೆ ತಲುಪಿದ್ದು, ಸಿಸಿ ಕ್ಯಾಮರಾ ಕಣ್ಗಾವಲಿದಲಾಗಿದೆ. ಶಾಲಾ ಮಟ್ಟದಲ್ಲೇ ಪರೀಕ್ಷೆಗಳು ನಡೆಯಲಿದ್ದು ಉತ್ತರ ಬರೆಯುವುದಕ್ಕೂ ಮಂಡಳಿಯಿಂದಲೇ ಪ್ರತಿಗಳನ್ನು ವಿತರಿಸಲಿದೆ.

ಪರೀಕ್ಷೆ (ಸಾಂಕೇತಿಕ ಚಿತ್ರ)
5,8,9 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ತೀರ್ಪು: ಒತ್ತಡದಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳು

5, 8 ಮತ್ತು 9ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ ನಡೆಸುವುದನ್ನು ಪ್ರಶ್ನಿಸಿ ವಿವಿಧ ಖಾಸಗಿ ಶಾಲಾ ಸಂಘಟನೆಗಳು ಹೈಕೋರ್ಟ್‌ ಮೆಟ್ಟಿಲೇರಿದ್ದವು. ಏಕ ಸದಸ್ಯ ಪೀಠ ಪರೀಕ್ಷೆ ರದ್ದು ಪಡಿಸಿ ಆದೇಶಸಿತ್ತು, ಆದರೆ ಸರ್ಕಾರ ಈ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ್ದ ದ್ವಿಸದಸ್ಯ ಪೀಠ ನಿಗದಿತ ಪಟ್ಟಿಯಂತೆ ಪರೀಕ್ಷೆ ನಡೆಸಲು ಆದೇಶಿಸಿತ್ತು ಹೈಕೋರ್ಟ್‌ ಆದೇಶ ಪ್ರಶ್ನಿಸಿ ಈಗ ಖಾಸಗಿ ಶಾಲೆಗಳು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿವೆ. ಗೊಂದಲಗಳ ನಡುವೆಯೇ ಪರೀಕ್ಷೆಗಳು ನಡೆಯುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com