ಬೆಂಗಳೂರು: ಬೃಹತ್ ಖರೀದಿದಾರರಿಗೆ ಟ್ಯಾಂಕರ್‌ಗಳ ಆದ್ಯತೆ; ಇಂಡಿಪೆಂಡೆಂಟ್ ಹೌಸ್ ಗಳಿಗೆ ಸಿಗುತ್ತಿಲ್ಲ ನೀರು!

ನಗರದಲ್ಲಿ ತಲೆದೋರಿರುವ ನೀರಿನ ಬಿಕ್ಕಟ್ಟು ಕೇವಲ ಹೊರವಲಯದಲ್ಲಿರುವ ಪ್ರದೇಶಗಳ ನಿವಾಸಿಗಳಿಗೆ ಮಾತ್ರ ಸೀಮಿತವಾಗಿಲ್ಲ, ಸ್ವತಂತ್ರ (ಇಂಡಿಪೆಂಡೆಂಟ್ ಹೌಸ್) ಮನೆಗಳಲ್ಲಿ ವಾಸಿಸುವವರಿಗೂ ನೀರಿನ ಸಮಸ್ಯೆಯ ಬಿಸಿ ತಟ್ಟಿದೆ.
ಟ್ಯಾಂಕರ್ ನಿಂದ ನೀರು ಪೂರೈಕೆ
ಟ್ಯಾಂಕರ್ ನಿಂದ ನೀರು ಪೂರೈಕೆ
Updated on

ಬೆಂಗಳೂರು: ನಗರದಲ್ಲಿ ತಲೆದೋರಿರುವ ನೀರಿನ ಬಿಕ್ಕಟ್ಟು ಕೇವಲ ಹೊರವಲಯದಲ್ಲಿರುವ ಪ್ರದೇಶಗಳ ನಿವಾಸಿಗಳಿಗೆ ಮಾತ್ರ ಸೀಮಿತವಾಗಿಲ್ಲ, ಸ್ವತಂತ್ರ (ಇಂಡಿಪೆಂಡೆಂಟ್ ಹೌಸ್) ಮನೆಗಳಲ್ಲಿ ವಾಸಿಸುವವರಿಗೂ ನೀರಿನ ಸಮಸ್ಯೆಯ ಬಿಸಿ ತಟ್ಟಿದೆ.

ಕಾವೇರಿ ನೀರಿನ ಪೂರೈಕೆ ಕಡಿಮೆಯಾಗಿದ್ದು, ಬೋರ್‌ವೆಲ್‌ಗಳು ಸಂಪೂರ್ಣ ಬತ್ತಿ ಹೋಗುತ್ತಿವೆ, ಇಲ್ಲವೆ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ನಿವಾಸಿಗಳು ದೂರುತ್ತಿದ್ದಾರೆ. ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಸದಾಶಿವನಗರದ ನಿವಾಸಿ ಡಿಕೆ ಶಿವಕುಮಾರ್ ಕೂಡ ತಮ್ಮ ಮನೆಯಲ್ಲಿನ ಬೋರ್‌ವೆಲ್ ಬತ್ತಿಹೋಗಿದೆ ಎಂದು ಹೇಳಿದ್ದರು.

ನಗರದ ಹೊರ ವಲಯಗಳಾದ ಮಹದೇವಪುರ, ಬೆಳ್ಳಂದೂರು, ವರ್ತೂರು, ಹೂಡಿ, ಕೆಆರ್ ಪುರಂ, ವೈಟ್‌ಫೀಲ್ಡ್, ರಾಜರಾಜೇಶ್ವರಿನಗರದಲ್ಲಿ ಮಾತ್ರ ನೀರಿನ ಸಮಸ್ಯೆ ಉಂಟಾಗಿದೆ ಎಂದು ಆರಂಭದಲ್ಲಿ ಊಹಿಸಲಾಗಿತ್ತು, ಆದರೆ ಇದು ಚಾಮರಾಜಪೇಟೆ, ಕಾಟನ್‌ಪೇಟೆ, , ವಿಜಯನಗರ ಮತ್ತು ಉತ್ತರಹಳ್ಳಿ, ಹನುಮಂತನಗರದಂತಹ ಒಳ ಪ್ರದೇಶಗಳ ಮೇಲೂ ಪರಿಣಾಮ ಬೀರುತ್ತಿದೆ.

ಟ್ಯಾಂಕರ್ ನಿಂದ ನೀರು ಪೂರೈಕೆ
ಕಾವೇರಿ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಸರ್ಕಾರದ ಬಗ್ಗೆ ಬಿಜೆಪಿಗೆ ಅಸೂಯೆ!

ಅವಲಂಬಿಸಿರುವ ಬೋರ್‌ವೆಲ್‌ಗಳು ಒಣಗುತ್ತಿರುವಾಗ, ಖಾಸಗಿ ನೀರಿನ ಟ್ಯಾಂಕರ್‌ಗಳು ವೈಯಕ್ತಿಕ ಅಥವಾ ಸ್ವತಂತ್ರ ಮನೆಗಳಿಗೆ ನೀರು ಸರಬರಾಜು ಮಾಡಲು ನಿರಾಕರಿಸುತ್ತಿವೆ, ಏಕೆಂದರೆ ಅವುಗಳು ತಮ್ಮ ಸಾಮಾನ್ಯ ಗ್ರಾಹಕರ ಪಟ್ಟಿಯಲ್ಲಿಲ್ಲ. ಸರಬರಾಜು ಮಾಡಲು ನೀರನ್ನು ಹೊಂದಿದ್ದರೂ, ಖಾಸಗಿ ಟ್ಯಾಂಕರ್‌ಗಳು ಮುಖ್ಯವಾಗಿ ವೈಯಕ್ತಿಕ ಮನೆಗಳಿಗೆ ನೀರು ಸರಬರಾಜು ಮಾಡಲು ಮುಂದಾಗುತ್ತಿಲ್ಲ.

ದೊಡ್ಡ ಅಪಾರ್ಟ್‌ಮೆಂಟ್ ಸಮುಚ್ಚಯಗಳು ಮತ್ತು ಬಹು ವಸತಿ ಘಟಕಗಳು ಸೇರಿದಂತೆ, ಕೇವಲ ಖಾಸಗಿ ನೀರಿನ ಟ್ಯಾಂಕರ್‌ಗಳನ್ನು ಪಡೆಯಲು ಸಾಧ್ಯವಾಗುವಂತಹ ಬೃಹತ್ ಗ್ರಾಹಕರಿಗೆ ಅವರು ಆದ್ಯತೆ ನೀಡುತ್ತಾರೆ.

ಬಿಡಬ್ಲ್ಯೂಎಸ್‌ಎಸ್‌ಬಿಯಿಂದ ಅನಿಯಮಿತ ನೀರು ಪೂರೈಕೆಯು ಸ್ವತಂತ್ರ ಮನೆಗಳ ನಿವಾಸಿಗಳನ್ನು ಸಮಸ್ಯೆಗೆ ದೂಡಿದೆ. ''ಕಾವೇರಿ ನೀರು ಪೂರೈಕೆ ಅನಿಯಮಿತವಾಗಿದೆ. ವಾರಕ್ಕೆ ನಾಲ್ಕೈದು ಬಾರಿಯಾದರೂ ನೀರು ಸಿಗುತ್ತಿದ್ದ ನಮಗೆ ಈಗ ವಾರಕ್ಕೆ ಎರಡು ಬಾರಿ ಮಾತ್ರ ಸಿಗುತ್ತಿದೆ. ಅಂತರ್ಜಲ , ಕೆರೆ ಮತ್ತು ಓವರ್ಹೆಡ್ ಟ್ಯಾಂಕ್ನಲ್ಲಿ ನಾವು ಹೊಂದಿರುವ ಎಲ್ಲಾ ನೀರಿನ ಸಂಗ್ರಹವು ಖಾಲಿಯಾಗಿದೆ. ನಮ್ಮ ಬೋರ್‌ವೆಲ್ ಕೂಡ ಬತ್ತಿ ಹೋಗಿದೆ. ನಾನು ಅನೇಕ ಖಾಸಗಿ ನೀರಿನ ಟ್ಯಾಂಕರ್‌ಗಳಿಗೆ ಕರೆ ಮಾಡಿದ್ದೇನೆ ಮತ್ತು ಅವರೆಲ್ಲರೂ ನೀರು ಸರಬರಾಜು ಮಾಡಲು ಸಾಧ್ಯವಿಲ್ಲ ಮತ್ತು ತಮ್ಮ ಸಾಮಾನ್ಯ ಗ್ರಾಹಕರತ್ತ ಗಮನ ಹರಿಸಬೇಕು ಎಂದು ಹೇಳುತ್ತಾರೆ ಎಂದು ಉತ್ತರಹಳ್ಳಿ ನಿವಾಸಿ ಪ್ರಕಾಶ್ ಮುರುಗನ್ ಹೇಳಿದರು.

ಟ್ಯಾಂಕರ್ ನಿಂದ ನೀರು ಪೂರೈಕೆ
'ನೀರು ಉಳಿಸಿ, ಬೆಂಗಳೂರು ಬೆಳೆಸಿ' ಅಭಿಯಾನ; ನೀರನ್ನು ವಿವೇಚನೆಯಿಂದ ಬಳಸಿ: ಡಿಕೆ ಶಿವಕುಮಾರ್ ಸಲಹೆ

ಬಿಡಬ್ಲ್ಯುಎಸ್‌ಎಸ್‌ಬಿಯಿಂದ ಟ್ಯಾಂಕರ್‌ಗಳು ಮತ್ತು ಮೊಬೈಲ್ ಟ್ಯಾಂಕ್‌ಗಳಲ್ಲಿ ಸರಬರಾಜು ಮಾಡುವ ನೀರು ಸಹ ಅವರ ಪ್ರದೇಶಗಳಲ್ಲಿ ಲಭ್ಯವಿಲ್ಲ. ಇತ್ತೀಚೆಗೆ ನೆರೆಹೊರೆಯವರು ಆಳವಾದ ಕೊಳವೆಬಾವಿ ಕೊರೆಸಿದ್ದರಿಂದ ನಮ್ಮ ಕೊಳವೆಬಾವಿ ಬತ್ತಿ ಹೋಗಿದೆ. ನಮ್ಮ ಪ್ರದೇಶದ ಹಲವು ಭಾಗಗಳಲ್ಲಿ ಸಾರ್ವಜನಿಕ ಟ್ಯಾಂಕ್‌ಗಳನ್ನು ಹೊಂದಿದ್ದೇವೆ, ಆದರೆ ಅವೆಲ್ಲವೂ ಕಾರ್ಯನಿರ್ವಹಿಸುತ್ತಿಲ್ಲ. BWSSB ಟ್ಯಾಂಕರ್‌ಗಳಲ್ಲಿ ಮತ್ತು ತಾತ್ಕಾಲಿಕ ಟ್ಯಾಂಕರ್ ಗಳಲ್ಲಿ ನೀರು ಸರಬರಾಜು ಮಾಡುವುದಾಗಿ ಹೇಳಿಕೊಂಡಿದೆ. ಆದರೆ ನಮ್ಮ ಏರಿಯಾದಲ್ಲಿ ಯಾವುದೂ ಸಿಗುತ್ತಿಲ್ಲ ಎಂದು ಆಜಾದ್ ನಗರದ ನಿವಾಸಿ ಹರಿ ಪ್ರಿಯಾ ಹೇಳಿದರು.

ನೀರಿನ ಕೊರತೆಯನ್ನು ನಿಭಾಯಿಸಲು ಅನೇಕ ಸ್ವತಂತ್ರ ಮನೆಗಳು ಹತ್ತಿರದ ಅಪಾರ್ಟ್ಮೆಂಟ್ ಸಂಕೀರ್ಣಗಳ ಮೊರೆ ಹೋಗಿವೆ. ಜನರು ಸಾಮಾನ್ಯವಾಗಿ ಭಾರೀ ಹಣವನ್ನುಸಂಪಾದಿಸುತ್ತಿದ್ದಾರೆ ಎಂದು ಭಾವಿಸುತ್ತಾರೆ, ಆದರೆ ಅದು ನಿಜವಲ್ಲ. ಒಂದು ಲೋಡ್ ತಲುಪಿಸಲು, ನಮಗೆ ಇಂಧನಕ್ಕೆ 250 ರೂ. ಬೇಕು, ಪ್ರತಿ ಚಾಲಕನಿಗೆ ದಿನಕ್ಕೆ 1,000 ರೂ. ಪಾವತಿಸಬೇಕು ಮತ್ತು ನಮಗೆ ವಿದ್ಯುತ್ ಬಿಲ್ ಬರುತ್ತದೆ, ಇದು ತಿಂಗಳಿಗೆ ರೂ. 50,000 ದಾಟುತ್ತದೆ, ಬೋರ್‌ವೆಲ್‌ಗಳನ್ನು ಕೊರೆಯಲು ಲಕ್ಷಾಂತರ ರೂ ಬಂಡವಾಳ ಹಾಕಿರುತ್ತೇವೆ ಎಂದು ಟ್ಯಾಂಕರ್ ಮಾಲೀಕರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಅಳಲು ತೋಡಿಕೊಂಡಿದ್ದಾರೆ.

ಒಂದು ದಿನದಲ್ಲಿ, ನಾವು ಗರಿಷ್ಠ ಎಂಟು ಲೋಡ್‌ಗಳನ್ನು ಪೂರೈಸಬಹುದು. ಅದೂ ಕೂಡ ಡೆಲಿವರಿ ಮಾಡುವ ಸ್ಥಳ 4 ಕಿ.ಮೀ ಒಳಗೆ ಇರಬೇಕು. ನಮ್ಮ ಬೋರ್‌ವೆಲ್‌ಗಳು ಬತ್ತಿ ಹೋಗಿರುವುದರಿಂದ, ನೀರಿನ ಮಟ್ಟ ತೀರಾ ಕಡಿಮೆಯಾಗಿದೆ. ವರ್ಷವಿಡೀ, ನಾವು ಹೋಟೆಲ್‌ಗಳು, ಅಪಾರ್ಟ್‌ಮೆಂಟ್‌ಗಳು, ಶಾಲೆಗಳು ಮತ್ತು ಕಚೇರಿಗಳಂತಹ ನಿಯಮಿತ ಗ್ರಾಹಕರನ್ನು ಹೊಂದಿದ್ದೇವೆ. ನಾವು ಅವುಗಳ ಮೇಲೆ ಕೇಂದ್ರೀಕರಿಸಬೇಕು, ನಮಗೆ ಸಮಯ ಮತ್ತು ನೀರು ಇದ್ದರೆ, ನಾವು ಪ್ರತ್ಯೇಕ ಮನೆಗಳಿಗೆ ಸರಬರಾಜು ಮಾಡುತ್ತೇವೆ ಎಂದು ಸರಬರಾಜುದಾರರೊಬ್ಬರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com