ಬೀದಿಬದಿ ವ್ಯಾಪಾರಿಗಳ ತೆರವುಗೊಳಿಸಿ ಹೈಕೋರ್ಟ್ ಆದೇಶ ಉಲ್ಲಂಘಿಸಿದೆ ಬಿಬಿಎಂಪಿ: ವ್ಯಾಪಾರಸ್ಥರ ಆರೋಪ

2023ರ ನವೆಂಬರ್‌ನಲ್ಲಿ ಅತಿಕ್ರಮಣ ತೆರವು ಮಾಡಿದ ಸ್ಥಳದಲ್ಲಿ ಅಂಗಡಿಗಳನ್ನು ತೆರೆದಿದ್ದಾರೆಂದು ಆರೋಪಿಸಿ ಬಿಬಿಎಂಪಿ 40 ಮಾರಾಟಗಾರರನ್ನು ತೆರವುಗೊಳಿಸಿದ್ದು, ಇದು ಹೈಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು ಬೀದಿಬದಿ ವ್ಯಾಪಾರಿಗಳ ಸಂಘಗಳ ಒಕ್ಕೂಟ ಆರೋಪಿಸಿದೆ.
ಜಯನಗರದಲ್ಲಿ ಬೀದಿ ಬದಿ ವ್ಯಾಪಾರಿಗಳ ತೆರವುಗೊಳಿಸುತ್ತಿರುವ ಬಿಬಿಎಂಪಿ ಮಾರ್ಷಲ್‌ಗಳು.
ಜಯನಗರದಲ್ಲಿ ಬೀದಿ ಬದಿ ವ್ಯಾಪಾರಿಗಳ ತೆರವುಗೊಳಿಸುತ್ತಿರುವ ಬಿಬಿಎಂಪಿ ಮಾರ್ಷಲ್‌ಗಳು.

ಬೆಂಗಳೂರು: 2023ರ ನವೆಂಬರ್‌ನಲ್ಲಿ ಅತಿಕ್ರಮಣ ತೆರವು ಮಾಡಿದ ಸ್ಥಳದಲ್ಲಿ ಅಂಗಡಿಗಳನ್ನು ತೆರೆದಿದ್ದಾರೆಂದು ಆರೋಪಿಸಿ ಬಿಬಿಎಂಪಿ 40 ಮಾರಾಟಗಾರರನ್ನು ತೆರವುಗೊಳಿಸಿದ್ದು, ಇದು ಹೈಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು ಬೀದಿಬದಿ ವ್ಯಾಪಾರಿಗಳ ಸಂಘಗಳ ಒಕ್ಕೂಟ ಆರೋಪಿಸಿದೆ.

ಬೀದಿಬದಿ ವ್ಯಾಪಾರಿಗಳ ಸಂಘಗಳ ಒಕ್ಕೂಟದ ಕಾರ್ಯಕರ್ತ ವಿನಯ್ ಶ್ರೀನಿವಾಸ ಮಾತನಾಡಿ, ಜಯನಗರ 4ನೇ ಬ್ಲಾಕ್‌ನ ಬೀದಿಬದಿ ವ್ಯಾಪಾರಿಗಳ ಪರವಾಗಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದ್ದು, 78 ಅರ್ಜಿದಾರರಿಗೆ ಕಿರುಕುಳ ನೀಡದಂತೆ ಪೊಲೀಸರು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನ್ಯಾಯಾಲಯ ಸೂಚನೆ ನೀಡಿದೆ. ಹೀಗಿದ್ದರೂ ಬಿಬಿಎಂಪಿ ಮತ್ತು ಪೊಲೀಸರು ಮಾರಾಟಗಾರರನ್ನು ಹೊರಹಾಕುತ್ತಿದ್ದಾರೆ, ಇದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಹೇಳಿದ್ದಾರೆ.

ಜಯನಗರದಲ್ಲಿ ಬೀದಿ ಬದಿ ವ್ಯಾಪಾರಿಗಳ ತೆರವುಗೊಳಿಸುತ್ತಿರುವ ಬಿಬಿಎಂಪಿ ಮಾರ್ಷಲ್‌ಗಳು.
ಜಯನಗರ ಬೀದಿಬದಿ ಅಂಗಡಿಗಳ ತೆರವು: ಬಿಬಿಎಂಪಿ ನಿರ್ಧಾರಕ್ಕೆ ಡಿಸಿಎಂ ಡಿಕೆ.ಶಿವಕುಮಾರ್ ಬೆಂಬಲ

ಮಾರಾಟಗಾರರು ಬೆಳಗ್ಗೆ 8ರಿಂದ ಮಧ್ಯಾಹ್ನದವರೆಗೆ ಹಾಗೂ ಮತ್ತೆ ಸಂಜೆ 7ರಿಂದ ರಾತ್ರಿ 10ರವರೆಗೆ ಅಂಗಡಿಗಳನ್ನು ತೆರೆಯುತ್ತಿದ್ದರು. ಆದರೆ ಬಿಬಿಎಂಪಿ ಮಾರ್ಷಲ್‌ಗಳು ಈ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ನ್ಯಾಯಾಲಯದ ಆದೇಶವಿದೆ ಎಂದೂ ಹೇಳುತ್ತಿದ್ದಾರೆ. ಆದರೆ, ಆದೇಶ ತೋರಿಸಿ ಎಂದರೆ ನಿರಾಕರಿಸುತ್ತಾರೆ. ಅಧಿಕಾರಿಗಳ ಈ ಕ್ರಮ ನ್ಯಾಯಾಲಯದ ನಿಂದನೆಯಾಗಿದೆ. ನಮಗೆ ನ್ಯಾಯಾಂಗ ನಿಂದನೆ ಅರ್ಜಿ ಎಂದೂ ಕೂಡ ಸವಾಲು ಹಾಕುತ್ತಿದ್ದಾರೆಂದು ತಿಳಿಸಿದ್ದಾರೆ.

ಬಿಬಿಎಂಪಿ ದಕ್ಷಿಣ ವಲಯದ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಹೈಕೋರ್ಟ್ ನಿರ್ದೇಶನದ ಮೇರೆಗೆ ನವೆಂಬರ್‌ನಲ್ಲಿ ಬಿಬಿಎಂಪಿಯು ಪೊಲೀಸರ ನೆರವಿನೊಂದಿಗೆ ಜಯನಗರ ಸಂಕೀರ್ಣದ ಆವರಣದಲ್ಲಿನ ಅತಿಕ್ರಮಣಗಳನ್ನು ತೆರವುಗೊಳಿಸಿತ್ತು. ಆದರೆ ಮಾರಾಟಗಾರರು ಮತ್ತೆ ಅಂಗಡಿಗಳನ್ನು ಹಾಕಲು ಪ್ರಯತ್ನಿಸುತ್ತಿದ್ದಾರೆ. ಇದು ಸಾರ್ವಜನಿಕ ಸ್ಥಳವಾಗಿರುವುದರಿಂದ ಜಾಗ ಖಾಲಿ ಮಾರಾಟಗಾರರಿಗೆ ಸೂಚನೆ ನೀಡಲಾಗುತ್ತಿದೆ. ವ್ಯಾಪಾರಸ್ಥರಿಗೆ ಜಾಗ ಹುಡುಕಿ ಅಲ್ಲಿ ವ್ಯವಹಾರ ನಡೆಸುವಂತೆ ತಿಳಿಸಲಾಗುತ್ತಿದೆ. ಇದಕ್ಕಾಗಿ ಐಡಿ ಕಾರ್ಡ್ ಗಳನ್ನೂ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com