2024 ಲೋಕಸಭೆ ಚುನಾವಣೆ: ಪ್ರಧಾನಿ ಮೋದಿ ಭಾಷಣವನ್ನು ಕನ್ನಡದಲ್ಲೇ ಕೇಳಿಸಲು ಎಐ ಮೊರೆ ಹೋದ ಬಿಜೆಪಿ

ಲೋಕಸಭಾ ಚುನಾವಣಾ ಪ್ರಚಾರದಲ್ಲಿ, ಬಿಜೆಪಿಯು ತಮ್ಮ ರಾಷ್ಟ್ರೀಯ ನಾಯಕರು ಸಾಮಾನ್ಯವಾಗಿ ಹಿಂದಿಯಲ್ಲಿ ಮಾಡುವ ಭಾಷಣಗಳನ್ನು ಇತರ ಭಾರತೀಯ ಭಾಷೆಗಳಿಗೆ ಭಾಷಾಂತರಿಸಲು ಎಐ ಆಧರಿತ ತಂತ್ರಜ್ಞಾನವನ್ನು ಬಳಸುತ್ತಿದೆ. ಬಿಜೆಪಿ ಈಗಾಗಲೇ ರೆಕಾರ್ಡ್ ಮಾಡಿದ ಭಾಷಣಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರ ಮಾಡಲು ಪ್ರಾರಂಭಿಸಿದ್ದು, ಶೀಘ್ರದಲ್ಲೇ ಭಾಷಣ ಮಾಡುವ ಸಮಯದಲ್ಲೇ ಇತರ ಭಾಷೆಗಳಇಗೆ ಅನುವಾದಿಸಲು ಮುಂದಾಗಿದೆ.
ಲೋಕಸಭೆ ಚುನಾವಣೆ ಪೂರ್ವಭಾವಿಯಾಗಿ ಕಲಬುರಗಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ಲೋಕಸಭೆ ಚುನಾವಣೆ ಪೂರ್ವಭಾವಿಯಾಗಿ ಕಲಬುರಗಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
Updated on

ಬೆಂಗಳೂರು: ಲೋಕಸಭಾ ಚುನಾವಣಾ ಪ್ರಚಾರದಲ್ಲಿ, ಬಿಜೆಪಿಯು ತಮ್ಮ ರಾಷ್ಟ್ರೀಯ ನಾಯಕರು ಸಾಮಾನ್ಯವಾಗಿ ಹಿಂದಿಯಲ್ಲಿ ಮಾಡುವ ಭಾಷಣಗಳನ್ನು ಇತರ ಭಾರತೀಯ ಭಾಷೆಗಳಿಗೆ ಭಾಷಾಂತರಿಸಲು ಎಐ ಆಧರಿತ ತಂತ್ರಜ್ಞಾನವನ್ನು ಬಳಸುತ್ತಿದೆ. ಬಿಜೆಪಿ ಈಗಾಗಲೇ ರೆಕಾರ್ಡ್ ಮಾಡಿದ ಭಾಷಣಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರ ಮಾಡಲು ಪ್ರಾರಂಭಿಸಿದ್ದು, ಶೀಘ್ರದಲ್ಲೇ ಭಾಷಣ ಮಾಡುವ ಸಮಯದಲ್ಲೇ ಇತರ ಭಾಷೆಗಳಇಗೆ ಅನುವಾದಿಸಲು ಮುಂದಾಗಿದೆ.

ಮೂರು ತಿಂಗಳ ಹಿಂದೆ, ವಾರಣಾಸಿಯಲ್ಲಿ ಕಾಶಿ ತಮಿಳು ಸಂಗಮಂ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಈ ವೇಳೆ ಭಾರತ ಸರ್ಕಾರ ಅಭಿವೃದ್ಧಿಪಡಿಸಿದ ಆ್ಯಪ್ ಭಾಷಿಣಿ ಮೂಲಕ ಮೋದಿ ಅವರ ಹಿಂದಿ ಭಾಷಣವನ್ನು ತಮಿಳಿಗೆ ನೇರ ಭಾಷಾಂತರಿಸಲು ಪ್ರಯತ್ನಿಸಲಾಯಿತು. ಪ್ರೇಕ್ಷಕರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಬಳಸಿಕೊಂಡು ತಮಿಳಿನಲ್ಲಿ ಅದನ್ನು ಕೇಳಲು ಸಾಧ್ಯವಾಯಿತು. 'ಆದರೆ, ಕೆಲವು ತಾಂತ್ರಿಕ ದೋಷಗಳು ಕಂಡುಬಂದಿತ್ತು ಮತ್ತು ಭಾವನಾತ್ಮಕ ವಿಚಾರ ಕಣ್ಮರೆಯಾಗಿತ್ತು. ಇದೀಗ ಅವರು ಅದರ ಮೇಲೆ ಕೆಲಸ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಪ್ರೇಕ್ಷಕರು ಯಾವುದೇ ಭಾರತೀಯ ಭಾಷೆಯಲ್ಲಿ ನೇರವಾಗಿ ಭಾಷಣಗಳನ್ನು ಕೇಳಲು ಸಾಧ್ಯವಾಗುತ್ತದೆ' ಎಂದು ಬಿಜೆಪಿ ನಾಯಕರೊಬ್ಬರು ಟಿಎನ್ಐಇಗೆ ತಿಳಿಸಿದ್ದಾರೆ.

ಜನರನ್ನು ತಲುಪಲು AI ಬಳಸುತ್ತಿದೆ ಬಿಜೆಪಿ

ಈ ಪ್ರಯೋಗ ಈಗಾಗಲೇ ಪ್ರಾರಂಭವಾಗಿದೆ ಮತ್ತು ಸೀಮಿತ ಪ್ರೇಕ್ಷಕರಿಗೆ ಪ್ರಾಯೋಗಿಕ ಆಧಾರದ ಮೇಲೆ ಮಾಡಲಾಗಿದೆ ಎಂದು ಬಿಜೆಪಿ ನಾಯಕ ಹೇಳಿದರು. ಈಗಾಗಲೇ, ಪಕ್ಷದ ಸಾಮಾಜಿಕ ಮಾಧ್ಯಮ ಮತ್ತು ಸಂವಹನ ತಂಡಗಳು ಹೆಚ್ಚಿನ ಸಂಖ್ಯೆಯ ಜನರನ್ನು ತಲುಪಲು AI ಅನ್ನು ವ್ಯಾಪಕವಾಗಿ ಬಳಸುತ್ತಿವೆ.

'ನಾವು ಇತರ ಭಾಷೆಗಳಲ್ಲಿ ಮಾತನಾಡುವ ಮೋದಿ ಮತ್ತು ಪಕ್ಷದ ಇತರ ನಾಯಕರ ಕೆಲವು ಕ್ಲಿಪ್ಪಿಂಗ್‌ಗಳನ್ನು ಆಯ್ಕೆ ಮಾಡುತ್ತಿದ್ದೇವೆ. AI ಬಳಸಿ, ನಾವು ಅದೇ ವಿಡಿಯೋಗೆ ಕನ್ನಡದಲ್ಲಿ ಧ್ವನಿಯನ್ನು ನೀಡುತ್ತೇವೆ. ಕ್ಲಿಪ್‌ಗಳನ್ನು ನಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಬಳಸಲಾಗುತ್ತಿದೆ' ಎಂದು ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣೆ ಪೂರ್ವಭಾವಿಯಾಗಿ ಕಲಬುರಗಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ರಾಜ್ಯ ಸರ್ಕಾರ ಲೂಟಿಯಲ್ಲಿ ತೊಡಗಿದೆ, ಕಾಂಗ್ರೆಸ್ ಗೆ ಭ್ರಷ್ಟಾಚಾರವೇ ಆಕ್ಸಿಜನ್: ಪ್ರಧಾನಿ ಮೋದಿ

ಕರ್ನಾಟಕದಲ್ಲಿ ಬಿಜೆಪಿ 32,835 ವಾಟ್ಸಾಪ್ ಗುಂಪುಗಳನ್ನು ಹೊಂದಿದೆ ಮತ್ತು ಅದರ ಬ್ರಾಡ್‌ಕಾಸ್ಟ್ ಪಟ್ಟಿಯಲ್ಲಿ 3.58 ಲಕ್ಷ ಜನರನ್ನು ಹೊಂದಿದೆ. 'ನಾವು ವಾಟ್ಸಾಪ್ ಗ್ರೂಪ್‌ಗಳಲ್ಲಿ ಕನ್ನಡದಲ್ಲಿ (ವಾಯ್ಸ್‌ಓವರ್ ಮತ್ತು ಪಠ್ಯ) ಭಾಷಣಗಳನ್ನು ಹೊಂದಿರುವ ಎಐ ಆಧರಿತ ವಿಡಿಯೋಗಳನ್ನು ಹಂಚಿಕೊಳ್ಳುತ್ತೇವೆ ಮತ್ತು ಅವುಗಳನ್ನು ಪ್ರಸಾರ ಮಾಡುತ್ತೇವೆ. ಕೆಲವೇ ಸೆಕೆಂಡುಗಳಲ್ಲಿ, ನಾವು ಹಲವಾರು ಜನರನ್ನು ತಲುಪುತ್ತೇವೆ. ಅವರು ಇತರ ಗುಂಪುಗಳಲ್ಲಿ ಹಂಚಿಕೊಳ್ಳಲು ಪ್ರಾರಂಭಿಸುತ್ತಾರೆ. ಈ ಮೂಲಕ ನಾವು ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಥವಾ ಕನ್ನಡೇತರ ಭಾಷೆಗಳಲ್ಲಿ ಮಾತನಾಡುವ ಯಾವುದೇ ನಾಯಕರ ಭಾಷಣಗಳನ್ನು ಕನ್ನಡ ಮಾತನಾಡುವ ಜನರಿಗೆ ತಲುಪಿಸಬಹುದು ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com