ಬೆಂಗಳೂರು: ಬೆಡ್‌ರೂಂ ಕಿಟಕಿ ಹಾಕದೆ ಕಾಮಕೇಳಿ; ದಂಪತಿ ವಿರುದ್ಧ ಮಹಿಳೆ ಪೊಲೀಸರಿಗೆ ದೂರು!

ಬೆಂಗಳೂರಿನಲ್ಲಿ ತಮ್ಮ ಬೆಡ್‌ರೂಂ ಕಿಟಕಿ ಹಾಕದೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ದಂಪತಿಯ ವಿರುದ್ಧ ಪಕ್ಕದ ಮನೆಯ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿರುವ ವಿಚಿತ್ರ ಪ್ರಕರಣವೊಂದು ಬುಧವಾರ ಬೆಳಕಿಗೆ ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ತಮ್ಮ ಬೆಡ್‌ರೂಂ ಕಿಟಕಿ ಹಾಕದೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ದಂಪತಿಯ ವಿರುದ್ಧ ಪಕ್ಕದ ಮನೆಯ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿರುವ ವಿಚಿತ್ರ ಪ್ರಕರಣವೊಂದು ಬುಧವಾರ ಬೆಳಕಿಗೆ ಬಂದಿದೆ.

ಈ ಸಂಬಂಧ ಪಕ್ಕದ ಮನೆ ಮಹಿಳೆ ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದಂಪತಿ ತಮ್ಮ ಕೋಣೆಯ ಕಿಟಕಿ ತೆರೆದಿಟ್ಟು ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾರೆ ಮತ್ತು ವಿಕೃತವಾಗಿ ವರ್ತಿಸುತ್ತಾರೆ. ಅವರ ವರ್ತನೆಯಿಂದ ತಮಗೆ ಕಿರಿಕಿರಿಯಾಗುತ್ತಿದೆ ಎಂದು 44 ವರ್ಷದ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಕಿಟಕಿಯ ಬಾಗಿಲು ಹಾಕಿಕೊಂಡು ಸರಸ ಸಲ್ಲಾಪ ನಡೆಸಿ ಎಂದು ಹೇಳಿದರೆ, ನಮ್ಮ ಮನೆ, ನಮ್ಮ ಇಷ್ಟ ಎಂಬ ಉತ್ತರ ದಂಪತಿಯಿಂದ ಬಂದಿದೆ. ಆಕ್ಷೇಪಿಸಿದಾಗ, ಆ ವ್ಯಕ್ತಿ ತನಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಸಾಂದರ್ಭಿಕ ಚಿತ್ರ
ನಮ್ಮ ಮೆಟ್ರೋ ಅಧಿಕಾರಿಯಿಂದ ಮಹಿಳಾ ಸೆಕ್ಯೂರಿಟಿಗಳಿಗೆ ಲೈಂಗಿಕ ಕಿರುಕುಳ ಆರೋಪ; ಎಫ್ಐಆರ್ ದಾಖಲು

ಪೊಲೀಸರ ಪ್ರಕಾರ, ದೂರುದಾರ ಮಹಿಳೆಯ ಮನೆ ಆರೋಪಿ ದಂಪತಿಗಳ ಮನೆಯ ಪಕ್ಕದಲ್ಲಿದೆ. ದಂಪತಿಯ ಮಲಗುವ ಕೋಣೆ, ದೂರುದಾರ ಮಹಿಳೆ ಮನೆಯ ಬಾಗಿಲಿನ ಮುಂಭಾಗದಲ್ಲಿದೆ. ಮಹಿಳೆ ಮನೆಯಲ್ಲಿರುವುದನ್ನು ಲೆಕ್ಕಿಸದೆ ದಂಪತಿಗಳು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಿದ್ದು, ಸಂತ್ರಸ್ತ ಮಹಿಳೆ ತಮ್ಮ ಕೋಣೆಯ ಕಿಟಕಿಯನ್ನು ಮುಚ್ಚುವಂತೆ ಕೇಳಿಕೊಂಡಿದ್ದಾರೆ.

ಆರೋಪಿ ದಂಪತಿಗೆ ಮನೆ ಮಾಲೀಕ ಮತ್ತು ಆತನ ಮಗನೂ ಸಾಥ್ ನೀಡಿದ್ದು, ನಿಮಗೆ ಇಷ್ಟವಿಲ್ಲದಿದ್ರೇ ನೀವೇ ಮನೆ ಬಿಟ್ಟುಹೋಗಿ ಎಂದು ದಬಾಯಿಸಿದ್ದಾರೆ. ಮನೆ ಮಾಲಿಕನೂ ರೌಡಿ ಹುಡುಗರನ್ನು ಕರೆಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾರೆ. ಮನೆ ಮಾಲೀಕ ಚಿಕ್ಕಣ್ಣ, ಆತನ ಪುತ್ರ ಮಂಜುನಾಥ್, ಪಕ್ಕದ ಮನೆ ವ್ಯಕ್ತಿ ವಿರುದ್ಧ ದೂರು ನೀಡಲಾಗಿದೆ.

ದೂರಿನ ಆಧಾರದ ಮೇಲೆ ಎಫ್‌ಐಆರ್‌ ದಾಖಲಿಸಿರುವ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. IPC ಸೆಕ್ಷನ್ 504, 506, 509, 34ರಡಿ ಪ್ರಕರಣ ದಾಖಲು ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com