ತುಮಕೂರು: ಕಾರಿನಲ್ಲಿ ಮೂವರನ್ನು ಸುಟ್ಟಿದ್ದ ಪ್ರಕರಣ; ನಿಧಿ ವಿಚಾರವಾಗಿ ಹತ್ಯೆ, ಇಬ್ಬರ ಬಂಧನ

ಕಾರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾದ ಮೂವರ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇನ್ನೂ ಆರು ಮಂದಿ ತಲೆಮರೆಸಿಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ತುಮಕೂರು: ಕಾರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾದ ಮೂವರ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇನ್ನೂ ಆರು ಮಂದಿ ತಲೆಮರೆಸಿಕೊಂಡಿದ್ದಾರೆ.

ಪ್ರಮುಖ ಆರೋಪಿ ಇಲ್ಲಿನ ಸಿರಾ ಗೇಟ್‌ನ ಸ್ವಯಂ ಘೋಷಿತ ಅರ್ಚಕ ರಾಜು ಅಲಿಯಾಸ್ ರಾಜಗುರು ಕುಮಾರ್ ಅಲಿಯಾಸ್ ಪಾತರಾಜು (35) ಮತ್ತು ಸತ್ಯಮಂಗಲದ ಗಂಗರಾಜು (35) ಎಂಬುವರನ್ನು ಬಂಧಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಎಸ್‌ಡಿಪಿಐ ಸದಸ್ಯ ಸಾಹುಲ್ (45), ಇಸಾಕ್ (56) ಮತ್ತು ಸಿದ್ದಿಕ್ (34) ಫೆಬ್ರವರಿ 22 ರಂದು ಹತ್ಯೆಗೀಡಾಗಿದ್ದರು.

ಜಮೀನೊಂದರಲ್ಲಿ ಸಿಕ್ಕ ಚಿನ್ನದ ಒಡವೆ ನೀಡುವುದಾಗಿ ಭರವಸೆ ನೀಡಿ ಸಂತ್ರಸ್ತರಿಂದ 6 ಲಕ್ಷ ರೂ.ಗಳನ್ನು ಪಾತರಾಜು ಪಡೆದಿದ್ದರು. ಅವರು ನೀಡಿದ ಭರವಸೆಯನ್ನು ಈಡೇರಿಸದಿದ್ದಾಗ, ಸಂತ್ರಸ್ತರು ತಮ್ಮ ಹಣವನ್ನು ಹಿಂದಿರುಗಿಸುವಂತೆ ಒತ್ತಾಯಿಸಿದರು.

ಸಾಂದರ್ಭಿಕ ಚಿತ್ರ
ತುಮಕೂರು: ಭಸ್ಮವಾಗಿರುವ ಕಾರಿನಲ್ಲಿ ಸುಟ್ಟು ಕರಕಲಾಗಿರುವ ಮೂರು ಮೃತದೇಹ ಪತ್ತೆ!

ಗಂಗರಾಜು ಮೂಲಕ ಅರ್ಚಕರು ಸಂತ್ರಸ್ತರನ್ನು ಕೊಲ್ಲಲು ಆರು ಮಂದಿಯನ್ನು ನೇಮಿಸಿಕೊಂಡಿದ್ದರು. ಶವಗಳನ್ನು ಕಾರಿನೊಳಗೆ ತುಂಬಿ ಕೂಚಂಗಿ ಕೆರೆ ಬಳಿ ತೆಗೆದುಕೊಂಡು ಹೋಗಿ ಬೆಂಕಿ ಹಚ್ಚಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com