ಲೋಕಸಭಾ ಚುನಾವಣೆ 2024: ರಾಜ್ಯದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ, ಏಪ್ರಿಲ್ 4 ಕೊನೆ ದಿನ

ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಅಧಿಕೃತ ಪ್ರಕ್ರಿಯೆ ಗುರುವಾರದಿಂದ ಆರಂಭವಾಗುತ್ತಿದೆ. ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಅಧಿಸೂಚನೆ ಪ್ರಕಟಗೊಂದ ಬೆನ್ನಲ್ಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಏ.4ರಂದು ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದೆ.
ಚುನಾವಣಾ ಆಯೋಗ (ಸಂಗ್ರಹ ಚಿತ್ರ)
ಚುನಾವಣಾ ಆಯೋಗ (ಸಂಗ್ರಹ ಚಿತ್ರ)

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಅಧಿಕೃತ ಪ್ರಕ್ರಿಯೆ ಗುರುವಾರದಿಂದ ಆರಂಭವಾಗುತ್ತಿದೆ. ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಅಧಿಸೂಚನೆ ಪ್ರಕಟಗೊಂದ ಬೆನ್ನಲ್ಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಏ.4ರಂದು ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದೆ.

ಏ.5ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಏ.8ರಂದು ಉಮೇದುವಾರಿಕೆಗಳನ್ನು ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಏ.26ರಂದು ಮತದಾನ ನಡೆಯಲಿದೆ. ಜೂ.4ರಂದು ಫಲಿತಾಂಶ ಹೊರಬೀಳಲಿದೆ.

ಚುನಾವಣಾ ಆಯೋಗ (ಸಂಗ್ರಹ ಚಿತ್ರ)
ಮೈಸೂರು-ಕೊಡಗು ಲೋಕಸಭಾ ಚುನಾವಣೆ: ಯದುವೀರ್ ಗೆಲವು ಖಚಿತಪಡಿಸಲು ಶೀಘ್ರದಲ್ಲೇ ಬಿಜೆಪಿ ಮಹತ್ವದ ಸಭೆ!

ಇಂದು ನಾಮಪತ್ರ ಸಲ್ಲಿಕೆಯಾಗುವ 14 ಕ್ಷೇತ್ರಗಳಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿ ಕೂಟ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದು, ಒಟ್ಟಾಗಿಯೇ ಚುನಾವಣೆ ಎದುರಿಸಲಿದೆ. ಬಿಜೆಪಿ ಪಾಲಿಗೆ ಬಂದ 11 ಕ್ಷೇತ್ರಗಳ ಅಭ್ಯರ್ಥಿಗಳು ಆಖೈರುಗೊಂಡಿದ್ದು, ತನ್ನ ಪಾಲಿಗೆ ಸಿಕ್ಕಿದ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಜೆಡಿಎಸ್‌ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.

ಈ ನಡುವೆ ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಚಾಮರಾಜನಗರ ಹೊರತುಪಡಿಸಿ ಉಳಿದ 11 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್‌ ಘೋಷಿಸಿದೆ.

ಚುನಾವಣಾ ಆಯೋಗ (ಸಂಗ್ರಹ ಚಿತ್ರ)
ಲೋಕಸಭಾ ಚುನಾವಣೆ 2024: ಡಿಕೆ.ಸುರೇಶ್ ನಾಮಪತ್ರ ಸಲ್ಲಿಕೆಗೆ ಮುಹೂರ್ತ ಫಿಕ್ಸ್‌

ಮೊದಲ ಹಂತದಲ್ಲಿ ಚುನಾವಣೆ ನಡೆಯುವ ಕರ್ನಾಟಕದ ಲೋಕಸಭಾ ಕ್ಷೇತ್ರಗಳು ಇಂತಿವೆ...

  • ಉಡುಪಿ - ಚಿಕ್ಕಮಗಳೂರು

  • ಹಾಸನ

  • ದಕ್ಷಿಣ ಕನ್ನಡ

  • ಚಿತ್ರದುರ್ಗ (ಎಸ್‌ಸಿ)

  • ತುಮಕೂರು

  • ಮಂಡ್ಯ

  • ಮೈಸೂರು

  • ಚಾಮರಾಜನಗರ (ಎಸ್‌ಸಿ)

  • ಬೆಂಗಳೂರು ಗ್ರಾಮಾಂತರ

  • ಬೆಂಗಳೂರು ಉತ್ತರ

  • ಬೆಂಗಳೂರು ಕೇಂದ್ರ

  • ಬೆಂಗಳೂರು ದಕ್ಷಿಣ

  • ಚಿಕ್ಕಬಳ್ಳಾಪುರ

  • ಕೋಲಾರ (ಎಸ್‌ಸಿ)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com