
ಮೈಸೂರು: ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ಭಾಗದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಸೃಷ್ಟಿ ಮಾಡಿದ್ದ ಹುಲಿಯನ್ನು ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳು ಹಿಡಿಯುವಲ್ಲಿ ಕೊನೆಗೂ ಸಫಲರಾಗಿದ್ದಾರೆ.
ಹೌದು.. ಎಚ್.ಡಿ.ಕೋಟೆ ತಾಲ್ಲೂಕಿನ ಮಳಲಿ ಗ್ರಾಮದ ಕಬಿನಿ ಹಿನ್ನೀರಿನ ಸಮೀಪದ ಡಿಸ್ಕವರಿ ವಿಲೇಜ್ ರೆಸಾರ್ಟ್ ಪಕ್ಕ ಎಂಟು ವರ್ಷದ ಗಂಡು ಹುಲಿಯನ್ನು ಶನಿವಾರ ಸೆರೆ ಹಿಡಿಯಲಾಗಿದೆ.
ಹುಲಿಯು ಜನ ವಸತಿ ಪ್ರದೇಶದಲ್ಲಿ ಮಧ್ಯಾಹ್ನದಿಂದಲೇ ಕಾಣಿಸಿಕೊಂಡಿದ್ದರಿಂದ, ಮುಂಜಾಗ್ರತಾ ಕ್ರಮವಾಗಿ ಅರಣ್ಯಾಧಿಕಾರಿಗಳು ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿದರು. ‘ಹುಲಿಯು ಸಫಾರಿ ವಲಯದಲ್ಲೂ ಕಾಣಿಸಿಕೊಳ್ಳುತ್ತಿತ್ತು’ ಎಂದು ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದ್ದಾರೆ.
ಸೆರೆಯಾದ ಹುಲಿಯನ್ನು ಬಳಿಕ ಕಾಡಿನೊಳಗೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
Advertisement