ಸೈಬರ್ ವಂಚನೆ: 5.17 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಉದ್ಯಮಿ

ಆಧುನಿಕತೆ ಹೆಚ್ಚಾದಂತೆ ತಂತ್ರಜ್ಞಾನ ಆಧಾರಿತ ಅಪರಾಧ, ವಂಚನೆ ಪ್ರಕರಣಗಳ ಸಂಖ್ಯೆಗಳು ಹೆಚ್ಚಾಗುತ್ತಿವೆ. ಸೈಬರ್​​ ವಂಚನೆಗೆ ಸಿಲುಕಿ ಉದ್ಯಮಿಯೊಬ್ಬರು ಬರೋಬ್ಬರಿ 5.17 ಕೋಟಿ ರೂ. ಕಳೆದುಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಆಧುನಿಕತೆ ಹೆಚ್ಚಾದಂತೆ ತಂತ್ರಜ್ಞಾನ ಆಧಾರಿತ ಅಪರಾಧ, ವಂಚನೆ ಪ್ರಕರಣಗಳ ಸಂಖ್ಯೆಗಳು ಹೆಚ್ಚಾಗುತ್ತಿವೆ. ಸೈಬರ್​​ ವಂಚನೆಗೆ ಸಿಲುಕಿ ಉದ್ಯಮಿಯೊಬ್ಬರು ಬರೋಬ್ಬರಿ 5.17 ಕೋಟಿ ರೂ. ಕಳೆದುಕೊಂಡಿದ್ದಾರೆ.

ವಂಚನೆಗೊಳಗಾದ ಉದ್ಯಮಿ ಅಶೋಕ್ ತಿರುಪಲಪ್ಪ ಎಂದು ತಿಳಿದುಬಂದಿದೆ. ಕಳೆದ ಫೆಬ್ರವರಿ 3ರಂದು ಅಶೋಕ್​ ಅವರ ವಾಟ್ಸಪ್​ಗೆ ಅಪರಿಚಿತ ನಂಬರ್​​ನಿಂದ https://www.bys-app.com ಲಿಂಗ್ ಬಂದಿತ್ತು. ಈ ಬಗ್ಗೆ ಅಶೋಕ್ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಕೆಲ ದಿನಗಳ ನಂತರ ವೈ-5-ಎವರ್ ಕೋರ್ ಫೈನಾನ್ಸಿಯಲ್ ಲೀಡರ್ ಎಂಬ ವಾಟ್ಸಪ್​ ಗ್ರೂಪ್​ಗೆ ಅಶೋಕ್ ರನ್ನು ಸೇರಿಸಲಾಯಿತು. ಆ ಬಳಿಕ ಕೆಲ ಅಪರಿಚಿತರು ಅಶೋಕ್ ಕರೆ ಕರೆ ಮಾಡಿ ಈ ಆ್ಯಪ್ ನಲ್ಲಿ ಹಣ ಹೂಡಿ ಹೆಚ್ಚಿನ ಲಾಭ ಬರುತ್ತದೆ ಎಂದು ಆಮಿಷ ಒಡ್ಡಿದರು.

ನಂತರ ಅಶೋಕ್ ಆ್ಯಪ್ ಡೌನ್ ಲೋಡ್ ಮಾಡಿ ಅಪರಿಚಿತರು ಹೇಳಿದಂತೆ ಕೆಲ ಅಕೌಂಟ್​ಗೆ ಹಂತ ಹಂತವಾಗಿ ಹಣ ಹಾಕಲು ಆರಂಭಿಸಿದರು. ಹೀಗೆ ಬರೊಬ್ಬರಿ 5.17 ಕೋಟಿ ರೂಪಾಯಿಯನ್ನು ಹೂಡಿಕೆ ಮಾಡಿದ ನಂತರ ಎಚ್ಚೇತ ಅಶೋಕ್ ನನ್ನ ಹಣವನ್ನು ವಾಪಸ್ ಆ್ಯಪ್ ಮೂಲಕ ಪಡೆಯಲು ಪ್ರಯತ್ನಿಸಿ ವಿಫಲರಾಗುತ್ತಾರೆ.

ಸಾಂದರ್ಭಿಕ ಚಿತ್ರ
ಇದು ಮತ್ತೊಂದು ರೀತಿಯ ಸೈಬರ್ ವಂಚನೆ: ಸಂಚಾರ ನಿಯಮ ಉಲ್ಲಂಘನೆ ಹೆಸರಿನಲ್ಲಿ ಅಮಾಯಕರಿಂದ ಸುಲಿಗೆ!

ಇದಾದ ಬಳಿಕ ತಾವು ಮೋಸ ಹೋಗಿದ್ದಾಗಿ ಮನವರಿಕೆಯಾದ ಬಳಿಕ ಅಶೋರ್ ಸೈಬರ್​ ಕ್ರೈಂ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಸೈಬರ್​ ಕ್ರೈಂ ಪೊಲೀಸರು Fyers Securities Pvt Ltd, Eercore Company ಎಂಬ ಕಂಪನಿಗಳ ಮೇಲೆ ಎಫ್​ಐಆರ್ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com