3ನೇ ಹಂತದ ಲೋಕಸಭಾ ಚುನಾವಣೆ: ವಯಸ್ಸಿನ ಸಮಸ್ಯೆ, ದೈಹಿಕ ಮಿತಿಗಳನ್ನು ಮೀರಿ ಉತ್ಸಾಹದಿಂದ ಮತದಾನ!

ಲೋಕಸಭಾ ಚುನಾವಣೆ2024 ರ 3 ನೇ ಹಂತದ ಮತದಾನ (ರಾಜ್ಯದಲ್ಲಿ 2 ನೇ ಹಂತ) ಇಂದು ಮುಕ್ತಾಯಗೊಂಡಿದ್ದು ಹಲವು ಮಾದರಿಗಳಿಗೆ ಸಾಕ್ಷಿಯಿತು.
ಮತದಾನ (ಸಾಂದರ್ಭಿಕ ಚಿತ್ರ)
ಮತದಾನ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಲೋಕಸಭಾ ಚುನಾವಣೆ 2024ರ 3ನೇ ಹಂತದ ಮತದಾನ (ರಾಜ್ಯದಲ್ಲಿ 2 ನೇ ಹಂತ) ಇಂದು ಮುಕ್ತಾಯಗೊಂಡಿದ್ದು ಹಲವು ಮಾದರಿಗಳಿಗೆ ಸಾಕ್ಷಿಯಿತು. ಬಿಸಿಲಿನ ಹೊರತಾಗಿಯೂ ರಾಜ್ಯದ ಜನತೆ ಉತ್ಸಾಹದಿಂದ ಮತದಾನ ಮಾಡಿದರು. ಅಷ್ಟೇ ಅಲ್ಲದೇ ವಯಸ್ಸಿನ ಸಮಸ್ಯೆ, ದೈಹಿಕ ಮಿತಿಗಳನ್ನು ದಾಟಿ ಮತದಾನ ಮಾಡಿ ಹಲವರು ಮಾದರಿಯಾಗಿದ್ದಾರೆ.

ವಿಜಯಪುರ ಜಿಲ್ಲೆಯ ಕೊಲ್ಹಾರ್ ತಾಲೂಕಿನ ತಳೆವಾಡ್ ಗ್ರಾಮದಲ್ಲಿ 100 ವರ್ಷದ ಮಹಿಳೆ ಗಂಗವ್ವ ವಸ್ತ್ರದ್ ಹಾಗೂ ಚಿಕ್ಕೋಡಿಯ ಯಲ್ಲುಬಾಯಿ ವೆಂಕಣ್ಣ ಲಾಡ್ (100) ಮತದಾನ ಮಾಡಿದ್ದಾರೆ.

ಮನಸ್ಸಿದ್ದರೆ ಮಾರ್ಗ, ಮನಸ್ಸು ಮಾಡಿದರೆ ಯಾವುದನ್ನೂ ತಪ್ಪಿಸುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು ವ್ಹೀಲ್ ಚೇರ್ ನ ಸಹಾಯದಿಂದ ಬಂದು ಮತದಾನ ಮಾಡಿದ ಬೆಳಗಾವಿಯ ವಿಶೇಷ ಚೇತನರಾಗಿರುವ ಪ್ಯಾರಾ ಈಜುಗಾರ (para-swimmer) ಮೊಯಿನ್ ಎಂ ಜುನ್ನೈದಿ ಸಾಬೀತುಪಡಿಸಿದ್ದಾರೆ.

ಬೆಳಗಾವಿಯ ಟಿಳಕವಾಡಿಯಲ್ಲಿ ಮತದಾನ ಮಾಡಲು 42 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಅಧಿಕ ಬೇಸಿಗೆಯ ಬಿಸಿ ಮತ್ತು ತಾಪಮಾನವನ್ನು ತಾಳಿಕೊಂಡು ಆತ ಗಾಲಿಕುರ್ಚಿಯಲ್ಲಿ ಬಂದಿದ್ದರು.

ಮತದಾನ (ಸಾಂದರ್ಭಿಕ ಚಿತ್ರ)
Lok Sabha Election 2024 Voting Live Updates: ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ತೆರೆ; 2ನೇ ಹಂತದಲ್ಲಿ ಶೇ.66 ರಷ್ಟು ಮತದಾನ

ಬಳ್ಳಾರಿಯ ಕೂಡ್ಲಿಗಿಗೆ ಮತದಾನ ಮಾಡಲು ಬಂದಿದ್ದ 95ರ ಹರೆಯದ ವಿಶೇಷಚೇತನ ಮಹಿಳೆ ಹನುಮವ್ವ ಅವರನ್ನು ನೋಡಿ ವಯೋಸಹಜ, ದೈಹಿಕ ಕ್ಷಮತೆಯ ಕೊರತೆ, ಹವಾಮಾನದ ನೆಪ ಹೇಳುತ್ತಿದ್ದವರು ಬೆರಗಾದರು.

ಅದೇ ರೀತಿ 98 ವರ್ಷದ ಶಿವಗಂಗಮ್ಮ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಬ್ಬಲಗೆರೆ ಬೂತ್‌ಗೆ ಭೇಟಿ ನೀಡಿ ಬಿಸಿಲಿನ ತಾಪವನ್ನು ಮೆಟ್ಟಿ ನಿಂತು ಮತದಾನ ಮಾಡಿದರು. ಇದೇ ರೀತಿಯಲ್ಲಿ ಬಳ್ಳಾರಿಯ ರಾಧಮ್ಮ (98) ಸಂಗನಕಲ್ಲು ಗ್ರಾಮದ ಬೂತ್‌ ನಲ್ಲಿ ಮತದಾನ ಮಾಡಿ ಮಾದರಿಯಾಗಿದ್ದಾರೆ.

34,110 ಅನುಮೋದಿತ ಮತದಾರರಲ್ಲಿ ಒಟ್ಟು 32,433 (95.08%) ಮತದಾರರು ಮನೆಯಿಂದಲೇ ಮತ ಚಲಾಯಿಸಿದ್ದಾರೆ ಎಂದು ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ (CEO) ಕಚೇರಿಯ ಮಾಹಿತಿ ತೋರಿಸಿದೆ

ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ VFH ಅನ್ನು ಪರಿಚಯಿಸಲಾಯಿತು. “ಸಿಬ್ಬಂದಿಗಳು ಅವರು ಸಿದ್ಧಪಡಿಸಿದ ಪಟ್ಟಿಯನ್ನು ಆಧರಿಸಿ ಬೂತ್‌ವಾರು ಮತದಾರರನ್ನು ಸಂಪರ್ಕಿಸಿದ್ದರು, ಆದರೆ ಬೂತ್‌ಗಳಿಗೆ ಭೇಟಿ ನೀಡುವ ಅನುಭವವನ್ನು ಅವರು ಆನಂದಿಸುತ್ತೇವೆ ಎಂಬ ಕಾರಣ ನೀಡಿ ಅನೇಕ ಮತದಾರರು ಮನೆಯಿಂದಲೇ ಮತ ಚಲಾಯಿಸುವ ಬದಲು ಮತಗಟ್ಟೆಗಳಿಗೆ ಭೇಟಿ ನೀಡಲು ಆದ್ಯತೆ ನೀಡಿದರು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ಆದರೆ, 85ರ ವಯಸ್ಸಿನ ಗಣಪತಿ ಶಿಂಧೆ ಅವರ ವಿಷಯದಲ್ಲಿ ಹಾಗಾಗಲಿಲ್ಲ. ಹುಕ್ಕೇರಿಯ ಮತಗಟ್ಟೆಗೆ ಮತ ಹಾಕಲು ಆಗಮಿಸಿದ ಅವರು, ಚುನಾವಣಾಧಿಕಾರಿಗಳು ಮನೆಗೆ ಬಾರದೇ ಇದ್ದುದರಿಂದ ಮತಗಟ್ಟೆಗೆ ಬಂದೆ ಎಂದು ಗಣಪತಿ ಶಿಂಧೆ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com