ಜೆಪಿ ನಡ್ಡಾ, ಅಮಿತ್ ಮಾಲವೀಯಗೆ ಬೆಂಗಳೂರು ಪೊಲೀಸರಿಂದ ಸಮನ್ಸ್!

ಬೆಂಗಳೂರು ಪೊಲೀಸರು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಪಕ್ಷದ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲವೀಯ ಅವರಿಗೆ ಸಮನ್ಸ್ ಜಾರಿ ಮಾಡಿದ್ದಾರೆ.
ಜೆಪಿ ನಡ್ಡಾ
ಜೆಪಿ ನಡ್ಡಾonline desk

ಬೆಂಗಳೂರು: ಬೆಂಗಳೂರು ಪೊಲೀಸರು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಪಕ್ಷದ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲವೀಯ ಅವರಿಗೆ ಸಮನ್ಸ್ ಜಾರಿ ಮಾಡಿದ್ದಾರೆ. ನಿರ್ದಿಷ್ಟ ಅಭ್ಯರ್ಥಿಗಳಿಗೆ ಮತ ಹಾಕದಂತೆ ಎಸ್ ಸಿ/ ಎಸ್ ಟಿ ಸಮುದಾಯದ ಸದಸ್ಯರಿಗೆ ಬೆದರಿಸುವ ಪೋಸ್ಟ್ ನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಮನ್ಸ್ ಜಾರಿಗೊಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿಯಾದ ನೊಟೀಸ್ ತಲುಪಿದ 7 ದಿನಗಳ ಒಳಗಾಗಿ ಬೆಳಿಗ್ಗೆ 11 ಗಂಟೆ ವೇಳೆಗೆ ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನಲ್ಲಿ ಸೂಚಿಸಲಾಗಿದೆ.

ಕೆಪಿಸಿಸಿ ಈ ಪೋಸ್ಟ್ ನ್ನು ಉಲ್ಲೇಖಿಸಿ ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾ, ಮಾಲವೀಯ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ದೂರು ನೀಡಿತ್ತು. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯೂ ಆಗಿದೆ ಎಂದು ಮೇ.05 ರಂದು ಆಯೋಗಕ್ಕೆ ಕಾಂಗ್ರೆಸ್ ದೂರು ಸಲ್ಲಿಸಿತ್ತು.

ಜೆಪಿ ನಡ್ಡಾ
ಮೀಸಲಾತಿ ಕುರಿತು ವೀಡಿಯೋ ಪೋಸ್ಟ್: ಜೆಪಿ ನಡ್ಡಾ, ಅಮಿತ್ ಮಾಳವೀಯಾ, ವಿಜಯೇಂದ್ರ ವಿರುದ್ಧ FIR!

ಜನಪ್ರತಿನಿಧಿಗಳ ಕಾಯ್ದೆ ಹಾಗೂ ಸೆಕ್ಷನ್ 505 (2) (ವರ್ಗಗಳ ನಡುವೆ ದ್ವೇಷ, ದ್ವೇಷ ಅಥವಾ ದುಶ್ಚಟವನ್ನು ಸೃಷ್ಟಿಸುವ ಅಥವಾ ಉತ್ತೇಜಿಸುವ ಹೇಳಿಕೆಗಳು) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

"ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ (ಕಾಂಗ್ರೆಸ್ ನಾಯಕ) ರಾಹುಲ್ ಗಾಂಧಿ ಮತ್ತು (ಮುಖ್ಯಮಂತ್ರಿ) ಸಿದ್ದರಾಮಯ್ಯ ಅವರ ಅನಿಮೇಟೆಡ್ ಪಾತ್ರಗಳಿವೆ. ಕ್ಲಿಪ್‌ನಲ್ಲಿ, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯವನ್ನು ಗೂಡಿನಲ್ಲಿ "ಮೊಟ್ಟೆ"ಎಂಬಂತೆ ಚಿತ್ರಿಸಲಾಗಿದೆ ಮತ್ತು ಇದು ರಾಹುಲ್ ಗಾಂಧಿಯನ್ನು ಮುಸ್ಲಿಂ ಸಮುದಾಯ ಎಂದು ಹೆಸರಿಸಲಾದ ದೊಡ್ಡ ಮೊಟ್ಟೆಯನ್ನು ಇಡುತ್ತಿರುವಂತೆ ಸಂದೇಶ ರವಾನೆ ಮಾಡ್ಲಾಗಿತ್ತು.

ಮುಸ್ಲಿಂ ಸಮುದಾಯವನ್ನು ಬಿಂಬಿಸುವ ಮರಿಗೆ ಮೂಲಸೌಕರ್ಯ, ನಿಧಿಯನ್ನು ನೀಡಲಾಗುತ್ತಿರುವಂತೆ ಈ ಅನಿಮೇಟೆಡ್ ಚಿತ್ರವನ್ನು ಬಿಂಬಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com