
ಬೆಂಗಳೂರು: ಪ್ರಜ್ವಲ್ ಪೆನ್ ಡ್ರೈವ್ ಲೀಕ್ ಕೇಸ್ ಗೆ ಸಂಬಂಧಿಸಿದಂತೆ ದೇವರಾಜೇಗೌಡ ವಿರುದ್ಧ ರಾಜ್ಯ ವಕೀಲ ಪರಿಷತ್ತಿನಲ್ಲಿ ದೂರು ದಾಖಲಾಗಿದೆ.
ರಾಜ್ಯ ವಕೀಲರ ಪರಿಷತ್ ಅಧ್ಯಕ್ಷರಿಗೆ ವಕೀಲ ಸೂರ್ಯ ಮುಖುಂದರಾಜ್ ಎಂಬುವವರು ಪತ್ರ ಬರೆದು ದೂರು ನೀಡಿದ್ದಾರೆಂದು ತಿಳಿದುಬಂದಿದೆ.
ಕಕ್ಷಿದಾರ ನೀಡಿರುವ ಸಾಕ್ಷಿ ಎಂದು ಕೆಲ ಆಡಿಯೋ ಮತ್ತು ಫೋಟೋಗಳನ್ನು ಪ್ರಜ್ವಲ್ ರೇವಣ್ಣ ಮಾಜಿ ಡ್ರೈವರ್ ಕಾರ್ತಿಕ್ ರೆಡ್ಡಿ ನೀಡಿದ್ದು ಎಂದು ರಿಲೀಸ್ ಮಾಡಿದ್ದ ದೇವರಾಜೇಗೌಡ, ಬಹಿರಂಗವಾಗಿ ಸುದ್ಧಿಗೋಷ್ಠಿ ನಡೆಸಿ ಬಿಡುಗಡೆ ಮಾಡಿ ಮಾತಾಡಿದ್ದರು. ಅಲ್ಲದೇ ಒಂದೂವರೆ ವರ್ಷಗಳಿಂದ ತಮ್ಮ ಬಳಿ ಪೆಂಡ್ರೈವ್ ಹಾಗೂ ಡಿಜಿಟಲ್ ಎವಿಡೆನ್ಸ್ ಇರೋದಾಗಿ ಹೇಳಿದ್ದರು. ಇದು ವಕೀಲರ ವೃತ್ತಿ ನಿಯಮಾನುಸಾರ ಭಾರತೀಯ ಅಧಿಸಾಕ್ಷಿ ಕಲಂ 126ಅಡಿ ಉಲ್ಲಂಘನೆ ಎಂದು ಆರೋಪಿಸಿ, ಸುಮೊಟೊ ದೂರು ದಾಖಲಿಸಲು ಬಾರ್ ಕೌನ್ಸಿಲ್ಗೆ ದೂರು ನೀಡಿ ಮನವಿ ಮಾಡಿದ್ದಾರೆ.
ಪ್ರಜ್ವಲ್ ರೇವಣ್ಣ ವಿರುದ್ಧದ ಪೆನ್ ಡ್ರೈವ್ ಪ್ರಕರಣದಲ್ಲಿ ಬಿಜೆಪಿ ನಾಯಕ ಹಾಗು ವಕೀಲ ದೇವರಾಜೇಗೌಡ ಅವರು ಸುದ್ದಿಗೋಷ್ಠಿ ನಡೆಸಿ ಹಲವು ಮಹತ್ವದ ವಿಚಾರಗಳನ್ನು ಹೊರಹಾಕಿದ್ದರು.
ಈ ಪೆನ್ ಡ್ರೈವ್ ಕೇಸ್ನ ರೂವಾರಿಯೇ ಕಾಂಗ್ರೆಸ್ ಪಕ್ಷ. ಪೆನ್ ಡ್ರೈವ್ನಲ್ಲಿರುವ ವಿಡಿಯೋಗಳನ್ನು ಲೀಕ್ ಮಾಡಿ ಹಲವರ ಮಾನ ಹರಾಜು ಮಾಡಿದೆ ಕಾಂಗ್ರೆಸ್. ಅಲ್ಲದೇ ಈ ಕೇಸ್ ಬಳಸಿ ಯಾರಾರನ್ನು ಫಿಟ್ ಮಾಡಿ ಮಟ್ಟ ಹಾಕಬೇಕೆಂದೂ ಕಾಂಗ್ರೆಸ್ ಪ್ಲಾನ್ ಮಾಡಿದೆ ಎನ್ನುವಂತಹ ಸಂಗತಿಯನ್ನು ದೇವರಾಜೇಗೌಡರು ಸಾಕ್ಷಿ ಸಮೇತ ತಿಳಿಸಿದ್ದರು.
Advertisement