ಮಂಗಳೂರು: ತಣ್ಣೀರಬಾವಿ ಬೀಚ್ ಬಳಿ ಪ್ರಯಾಣಿಕರ ಹತ್ತಿಸಿಕೊಂಡಿದ್ದಕ್ಕೆ ಆಟೋ ಚಾಲಕನ ಮೇಲೆ ಹಲ್ಲೆ

ಮಂಗಳೂರಿನಲ್ಲಿ ಗುರುವಾರದಂದು ತಣ್ಣೀರಬಾವಿ ಬೀಚ್ ಬಳಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದ ಆಟೋ ಚಾಲಕನ ಮೇಲೆ ಕೆಲವು ಆಟೋ ರಿಕ್ಷಾ ಚಾಲಕರು ಹಲ್ಲೆ ನಡೆಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳೂರು: ಮಂಗಳೂರಿನಲ್ಲಿ ಗುರುವಾರದಂದು ತಣ್ಣೀರಬಾವಿ ಬೀಚ್ ಬಳಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದ ಆಟೋ ಚಾಲಕನ ಮೇಲೆ ಕೆಲವು ಆಟೋ ರಿಕ್ಷಾ ಚಾಲಕರು ಹಲ್ಲೆ ನಡೆಸಿದ್ದಾರೆ.

ಮೊಹಮ್ಮದ್ ಅರಾಫತ್ ಹಲ್ಲೆಗೊಳಗಾದ ಆಟೋ ಚಾಲಕನಾಗಿದ್ದು, ಈ ಬಗ್ಗೆ ಮಾತನಾಡಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು, 'ಅರಾಫತ್ ಕೆಲವು ಪ್ರಯಾಣಿಕರನ್ನು ಬೀಚ್ ಬಳಿ ಇಳಿಸಲು ಹೋದಾಗ ಈ ಘಟನೆ ನಡೆದಿದೆ.

ಸಾಂದರ್ಭಿಕ ಚಿತ್ರ
ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ

ಅವರು ಪ್ರಯಾಣಿಕರನ್ನು ಇಳಿಸಿ ಹಿಂತಿರುಗುತ್ತಿದ್ದಾಗ, ಅಲ್ಲಿದ್ದ ಇತರೆ ಆಟೋ ಚಾಲಕರು ರಿಕ್ಷಾ ಚಾಲಕರು ವಿರೋಧಿಸಿ ಗಲಾಟೆ ಮಾಡಿದದರು ಎಂದು ಹೇಳಿದ್ದಾರೆ.

ಆದರೆ ಈ ವೇಳೆ ಸ್ಥಳೀಯ ಆಟೊ ಚಾಲಕರು ಅರಾಫತ್‌ನನ್ನು ಸಮಾಧಾನಪಡಿಸಿದ್ದಾರೆ. ಆ ಬಳಿಕವೂ ಅರಾಫತ್ ಸ್ಥಳದಲ್ಲಿ ಪ್ರಯಾಣಿಕರಿಗಾಗಿ ದೀರ್ಘಕಾಲ ಕಾಯುತ್ತಿದ್ದರು. ಇದರಿಂದ ವಾಗ್ವಾದ ನಡೆದು ಸ್ಥಳೀಯ ಮೂವರು ಆಟೋ ಚಾಲಕರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com