
ಬೆಂಗಳೂರು: ಈ ಹಿಂದೆ ಜುನ್ನಸಂದ್ರ ಕೆರೆ ಮತ್ತು ಸೌಲ್ ಕೆರೆ (ಕೆರೆ)ಗೆ ಸಂಪರ್ಕ ಕಲ್ಪಿಸುವ ಮಳೆನೀರು ಚರಂಡಿಗಳ (ಎಸ್‌ಡಬ್ಲ್ಯುಡಿ) ಒತ್ತುವರಿ ತೆರವುಗೊಳಿಸಲಾಗಿತ್ತು. ಇದೀಗ ಬೆಳ್ಳಂದೂರು ವಾರ್ಡ್‌ನ ಚರಂಡಿಗಳು ಮತ್ತೊಮ್ಮೆ ಅತಿಕ್ರಮಣಕ್ಕೆ ಒಳಗಾಗಿವೆ ಎಂದು ಮಹದೇವಪುರ ನಿವಾಸಿಗಳು ಆರೋಪಿಸಿದ್ದು, ಶಾಂತಿ ಲೇಔಟ್, ರೈನ್‌ಬೋ ಡ್ರೈವ್ ಲೇಔಟ್, ಜುನ್ನಸಂದ್ರ ಗ್ರಾಮದ ನಿವಾಸಿಗಳಲ್ಲಿ ಪ್ರವಾಹದ ಭೀತಿಗೆ ಕಾರಣವಾಗಿದೆ.
ಮಹದೇವಪುರ ಕ್ಷೇತ್ರದ ಎಎಪಿ ಅಧ್ಯಕ್ಷ ಅಶೋಕ್ ಮೃತ್ಯುಂಜಯ ಅವರ ಪ್ರಕಾರ, ಈ ಪ್ರದೇಶಗಳ 300 ನಿವಾಸಿಗಳು 2021 ರಲ್ಲಿ ಪಾದಯಾತ್ರೆ ಕೈಗೊಂಡು ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ಕೋರಿದ್ದರು. ಭಾರಿ ಮಳೆಯ ಸಂದರ್ಭದಲ್ಲಿ ರಸ್ತೆಗಳಲ್ಲಿ ನಾಲ್ಕು ಅಡಿ ನೀರು ನಿಲ್ಲುತ್ತಿದೆ. ಮೂರು ದಿನಗಳ ಹಿಂದೆ ನಗರದಲ್ಲಿ ಸುಮಾರು 19ಮಿ.ಮೀ ಮಳೆಯಾದಾಗ ಬೆಳ್ಳಂದೂರು-ಜುನ್ನಸಂದ್ರ ರಸ್ತೆ ಜಲಾವೃತವಾಗಿತ್ತು. ಏಕೆಂದರೆ ಅತಿಕ್ರಮಣದಿಂದಾಗಿ 10 ಅಡಿ ಚರಂಡಿ ಮತ್ತೊಮ್ಮೆ 3 ಅಡಿಗೆ ಕುಗ್ಗಿದೆ ಎಂದು ಅವರು ಆರೋಪಿಸಿದರು.
ರಾಜ ಕಾಲುವೆಯನ್ನು ಜುನ್ನಸಂದ್ರ ಗ್ರಾಮದ ಚರಂಡಿಗೆ ತಿರುಗಿಸುವ ಯೋಜನೆ ಇದ್ದು, ಇದರಿಂದ ಮನೆಗಳು ಜಲಾವೃತಗೊಳ್ಳುತ್ತವೆ. ಕೆಲವು ಪ್ರಭಾವಿ ಬಿಲ್ಡರ್‌ಗಳು ಎಸ್‌ಡಬ್ಲ್ಯುಡಿಗಳಲ್ಲಿ 41 ವಿಲ್ಲಾಗಳನ್ನು ನಿರ್ಮಿಸಿದ್ದಾರೆ ಮತ್ತು ಖರೀದಿದಾರರು 15 ವರ್ಷಗಳ ಹಿಂದೆ ಇದರ ಅರಿವಿಲ್ಲದೆ ವಿಲ್ಲಾಗಳಿಗೆ ಸ್ಥಳಾಂತರಗೊಂಡಿದ್ದಾರೆ. ಬಿಲ್ಡರ್‌ಗಳು ಇದೀಗ ಉಂಟಾಗಿರುವ ಹಾನಿಯನ್ನು ಸರಿಪಡಿಸಲು ಎಸ್‌ಡಬ್ಲ್ಯೂಡಿಗಳನ್ನು ನಿರ್ಮಿಸಲು ಬಿಬಿಎಂಪಿಯಿಂದ ಹೆಚ್ಚುವರಿ ಭೂಮಿಯನ್ನು ಖರೀದಿಸಬೇಕಾಗಿದೆ ಎಂದರು.
ಎಸ್‌ಡಬ್ಲ್ಯುಡಿಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಮಾಲತಿ ಅವರಿಗೆ ಟಿಎನ್ಐಇ ಕರೆ ಮಾಡಿದಾಗ, ಬೆಳ್ಳಂದೂರು ವಾರ್ಡ್‌ನ ರಸ್ತೆಗಳಲ್ಲಿ ನೀರು ನಿಲ್ಲುವುದು ಸಾಮಾನ್ಯವಾಗಿದೆ. ಏಕೆಂದರೆ, ಖರಾಬ್ ಭೂಮಿ ಅಥವಾ ಎಸ್‌ಡಬ್ಲ್ಯೂಡಿ ಇಲ್ಲ ಎಂದು ರೈನ್‌ಬೋ ಡ್ರೈವ್ ಲೇಔಟ್ ನ್ಯಾಯಾಲಯದ ಸ್ಟೇ ಪಡೆದು ಹರಿವನ್ನು ನಿರ್ಬಂಧಿಸಿದೆ ಎಂದು ಹೇಳಿದರು.
ಇತ್ತೀಚೆಗೆ ಸರ್ಜಾಪುರ ರಸ್ತೆ ಎಸ್‌ಡಬ್ಲ್ಯೂಡಿಗೆ ಸಂಪರ್ಕ ಕಲ್ಪಿಸುವ ನೀರು ಹರಿಯಲು ದಾರಿ ಮಾಡಿಕೊಡುವಂತೆ ಪಾಲಿಕೆ ಸಮುದಾಯದವರನ್ನು ಸಂಪರ್ಕಿಸಿದಾಗ, ಬಿಬಿಎಂಪಿ ಬಲವಂತವಾಗಿ ಪ್ರವೇಶ ಮಾಡುತ್ತಿದೆ ಎಂದು ಆರೋಪಿಸಿ ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲೇರಿದ್ದರು.
'ನಿರಂತರ ನೀರು ಹರಿವಿಗೆ ದಾರಿ ಮಾಡಿಕೊಡುವ ತುರ್ತು ಅಗತ್ಯವನ್ನು ಪಾಲಿಕೆ ವಕೀಲರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದರು ಮತ್ತು ನ್ಯಾಯಾಲಯವೂ ಅನುಮತಿ ನೀಡಿದೆ. ಆದರೆ, ರೈನ್‌ಬೋ ಡ್ರೈವ್ ಆವರಣದೊಳಗೆ ಬಿಬಿಎಂಪಿಯಿಂದ ಬೇರೆ ಯಾವುದೇ ನಿರ್ಮಾಣಕ್ಕೆ ಅವಕಾಶ ನೀಡದಂತೆ ನಿರ್ದೇಶನ ನೀಡಿದೆ ಎಂದು ಮಾಲತಿ ಹೇಳಿದರು.
Advertisement