ಬೆಂಗಳೂರು: ಎನ್‌ಜಿಟಿ ಆದೇಶವಿದ್ದರೂ ನಿಧಾನಗತಿಯಲ್ಲಿ ಸಾಗುತ್ತಿದೆ ಬೆಳ್ಳಂದೂರು- ವರ್ತೂರು ಕೆರೆಗಳ ಪುನರುಜ್ಜೀವನ

ಐದು ವರ್ಷ ಕಳೆದರೂ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಹೂಳು ತೆಗೆಯುವ ಮತ್ತು ಕಾಯಕಲ್ಪ ಮಾಡುವ ಕಾಮಗಾರಿ ಶೇ 50ರಷ್ಟು ಮಾತ್ರ ಪೂರ್ಣಗೊಂಡಿದೆ. ಆದರೆ ಅತ್ಯಂತ ಆಘಾತಕಾರಿ ಸಂಗತಿಯೆಂದರೆ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನಿರ್ದೇಶನದ ಹೊರತಾಗಿಯೂ, ಬೆಳ್ಳಂದೂರು ಮತ್ತು ವರ್ತೂರು ಡೈವರ್ಶನ್ ಚಾನಲ್‌ಗಳಲ್ಲಿ ಸಂಸ್ಕರಿಸದ ಚರಂಡಿ ನೀರು ಹರಿಯುತ್ತಲೇ ಇದೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ

ಬೆಂಗಳೂರು: ಐದು ವರ್ಷ ಕಳೆದರೂ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಹೂಳು ತೆಗೆಯುವ ಮತ್ತು ಕಾಯಕಲ್ಪ ಮಾಡುವ ಕಾಮಗಾರಿ ಶೇ 50ರಷ್ಟು ಮಾತ್ರ ಪೂರ್ಣಗೊಂಡಿದೆ. ಆದರೆ ಅತ್ಯಂತ ಆಘಾತಕಾರಿ ಸಂಗತಿಯೆಂದರೆ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನಿರ್ದೇಶನದ ಹೊರತಾಗಿಯೂ, ಬೆಳ್ಳಂದೂರು ಮತ್ತು ವರ್ತೂರು ಡೈವರ್ಶನ್ ಚಾನಲ್‌ಗಳಲ್ಲಿ ಸಂಸ್ಕರಿಸದ ಚರಂಡಿ ನೀರು ಹರಿಯುತ್ತಲೇ ಇದೆ ಎಂದು ಐಐಎಸ್‌ಸಿ ಮತ್ತು ಮಾಜಿ ಎನ್‌ಜಿಟಿ ಸಮಿತಿ ಸದಸ್ಯ ಪ್ರೊ. ಟಿವಿ ರಾಮಚಂದ್ರ ಹೇಳಿದ್ದಾರೆ.

ನೊರೆ ಮತ್ತು ಬೆಂಕಿ ಕಾಣಿಸಿಕೊಂಡ ನಂತರ ಎರಡು ಕೆರೆಗಳ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಸಮಿತಿ ರಚಿಸಲಾಯಿತು. ಸಮಿತಿ ರಚನೆ ಮತ್ತು ಎರಡು ಜಲಮೂಲಗಳ ಪುನಶ್ಚೇತನಕ್ಕೆ ಎನ್‌ಜಿಟಿ ನಿರ್ದೇಶನಗಳನ್ನು ನೀಡಿತ್ತು. ತಾವು ಈ ಕೆರೆಗಳ ಸ್ಥಿತಿಯ ಕುರಿತು ಎನ್‌ಜಿಟಿಗೆ ವರದಿ ಸಲ್ಲಿಸುವುದಾಗಿ ರಾಮಚಂದ್ರ ಟಿಎನ್‌ಐಇಗೆ ತಿಳಿಸಿದರು.

ಅಂಬೇಡ್ಕರ್ ಕಾಲೋನಿಯಲ್ಲಿನ ಕೊಳೆಗೇರಿಯನ್ನು ತೆರವುಗೊಳಿಸಲು ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಹೆಚ್ಚು ಆಘಾತಕಾರಿ ಸಂಗತಿಯೆಂದರೆ ಈಗ ಅತಿಕ್ರಮಿತ ಪ್ರದೇಶದಲ್ಲಿ ಧಾರ್ಮಿಕ ಸಂಸ್ಥೆಯನ್ನು ನಿರ್ಮಿಸಲಾಗುತ್ತಿದೆ. ಇದು ಗಂಭೀರವಾಗಿದ್ದು, ಸರ್ಕಾರ ಶೀಘ್ರ ಕ್ರಮಕೈಗೊಳ್ಳಬೇಕು ಎಂದರು.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ
ಬೆಳ್ಳಂದೂರು, ಅಗರ ಕೆರೆಗಳ ಸಂರಕ್ಷಣಾ ಯೋಜನೆ ಜಾರಿಗೆ ಒಂಬತ್ತು ತಿಂಗಳ ಗಡುವು- ಎನ್ ಜಿಟಿ ಆದೇಶ

ರಾಮಚಂದ್ರ ಅವರು ಎರಡು ಜಲಾನಯನ ಪ್ರದೇಶಗಳ ಪರಿಶೀಲನೆ ನಡೆಸಿದರು. ಈ ವೇಳೆ ಕೆರೆಗಳ ಉಸ್ತುವಾರಿ ವಹಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸಹ ಹಾಜರಿದ್ದರು.

ಬೆಳ್ಳಂದೂರು ಕೆರೆಯಲ್ಲಿ ಶೇ 45ರಷ್ಟು ಮಾತ್ರ ಹೂಳು ತೆಗೆಯಲಾಗಿದ್ದು, ಸುಮಾರು 1.42 ದಶಲಕ್ಷ ಟನ್‌ಗಳಷ್ಟು ಹೂಳು ತೆರವುಗೊಂಡಿದೆ ಎಂದು ರಾಮಚಂದ್ರ ಹೇಳಿದರು. ವರ್ತೂರು ಕೆರೆಯಲ್ಲಿ ಹೂಳು ತೆಗೆಯುವ ಕಾರ್ಯ ಪೂರ್ಣಗೊಂಡಿದ್ದು, 1.48 ಮಿಲಿಯನ್ ಟನ್‌ಗಳಷ್ಟು ಹೂಳು ತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ
ವರ್ತೂರು, ಬೆಳ್ಳಂದೂರು ಕೆರೆಗಳ ಕಾಮಗಾರಿ ಪುನರಾರಂಭಿಸುವಂತೆ ನಿವಾಸಿಗಳ ಆಗ್ರಹ

2019ರಿಂದ ಎರಡು ಕೆರೆಗಳಿಗೆ 200 ಕೋಟಿ ರೂಪಾಯಿ ಖರ್ಚು ಮಾಡಿದರೂ ಪರಿಸ್ಥಿತಿ ಅಷ್ಟಾಗಿ ಸುಧಾರಿಸಿಲ್ಲ. ಈಗ ಸರ್ಕಾರಿ ಸಂಸ್ಥೆಗಳು ತಮ್ಮ ಬಳಿ ಹಣವಿಲ್ಲ ಎಂದು ಹೇಳುತ್ತಿವೆ. ಆದರೆ, ಹೂಳು ತೆಗೆಯುವ ಕಾರ್ಯ ಇನ್ನೂ ಪೂರ್ಣಗೊಳ್ಳಬೇಕಿದೆ, ಬಂಡ್‌ಗಳನ್ನು ಮಾಡಬೇಕು, ಜೌಗು ಪ್ರದೇಶವನ್ನು ಮಾಡಬೇಕು, ಡೈವರ್ಶನ್ ಚಾನಲ್‌ಗಳನ್ನು ತೆಗೆದುಹಾಕಬೇಕು ಮತ್ತು ಎಸ್‌ಟಿಪಿಗಳ ಸರಿಯಾದ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com