ಬೆಂಗಳೂರು: ಪ್ರತ್ಯೇಕ ವಿದ್ಯುತ್ ಮೀಟರ್, ರಸ್ತೆ ಸೌಲಭ್ಯ ಒದಗಿಸುವಂತೆ ಕಣಿಮಿಣಿಕೆ ಅಪಾರ್ಟ್‌ಮೆಂಟ್‌ ನಿವಾಸಿಗಳ ಆಗ್ರಹ

ಮೈಸೂರು ರಸ್ತೆಯ ಕಣಿಮಿಣಿಕೆಯಲ್ಲಿರುವ ಬಿಡಿಎ ವಸತಿ ಸಂಕೀರ್ಣದ ನಿವಾಸಿಗಳಿಗೆ ಪ್ರತ್ಯೇಕ ವಿದ್ಯುತ್ ಮೀಟರ್‌ಗಳನ್ನು ಮತ್ತು ಮುಖ್ಯ ರಸ್ತೆಯಿಂದ ನೇರವಾಗಿ ಅಪಾರ್ಟ್‌ಮೆಂಟ್‌ ಗೆ ಪ್ರತ್ಯೇಕ ರಸ್ತೆ ಒದಗಿಸುವುದಾಗಿ ಆರು ವರ್ಷಗಳ ಹಿಂದೆ ಭರವಸೆ ನೀಡಲಾಗಿತ್ತು.
ಕಣಿಮಿಣಿಕೆ ಅಪಾರ್ಟ್‌ಮೆಂಟ್‌
ಕಣಿಮಿಣಿಕೆ ಅಪಾರ್ಟ್‌ಮೆಂಟ್‌

ಬೆಂಗಳೂರು: ಮೈಸೂರು ರಸ್ತೆಯ ಕಣಿಮಿಣಿಕೆಯಲ್ಲಿ(ಹಂತ-II ಮತ್ತು IV)ರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(ಬಿಡಿಎ) ವಸತಿ ಸಂಕೀರ್ಣದ ನಿವಾಸಿಗಳಿಗೆ ಪ್ರತ್ಯೇಕ ವಿದ್ಯುತ್ ಮೀಟರ್‌ಗಳನ್ನು ಮತ್ತು ಮುಖ್ಯ ರಸ್ತೆಯಿಂದ ನೇರವಾಗಿ ಅಪಾರ್ಟ್‌ಮೆಂಟ್‌ ಪ್ರವೇಶಿಸಲು ಪ್ರತ್ಯೇಕ ರಸ್ತೆ ಒದಗಿಸುವುದಾಗಿ ಆರು ವರ್ಷಗಳ ಹಿಂದೆ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೂ ಭರವಸೆ ಈಡೇರಿಸಿಲ್ಲ. ಈಗ ವರ್ಷಾಂತ್ಯದೊಳಗೆ ರಸ್ತೆ ನಿರ್ಮಾಣವಾಗಲಿದೆ ಎಂದು ಬಿಡಿಎ ಭರವಸೆ ನೀಡಿದೆ.

3 ಬಿಎಚ್‌ಕೆ ಮನೆ ಹೊಂದಿರುವ ಡಾ ಮಿತ್ರ ಬಿಸಿ ಅವರು ಮಾತನಾಡಿ, ನಿವಾಸಿಗಳಿಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕದಿಂದಾಗಿ ಹೆಚ್ಚು ವಿದ್ಯುತ್ ಬಿಲ್‌ ಬರುತ್ತಿದೆ. ಬೇಸಿಗೆಯಲ್ಲಿ ಅತಿಯಾದ ಬಳಕೆಯಿಂದಾಗಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಪ್ರತಿ ಕುಟುಂಬಕ್ಕೆ 4,000 ರೂ.ಗೆ ಹೆಚ್ಚು ವಿದ್ಯುತ್ ಬಿಲ್ ಬಂದಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಪ್ರತ್ಯೇಕ ವಿದ್ಯುತ್ ಮೀಟರ್‌ಗಳು ಇಲ್ಲದಿರುವುದರಿಂದ ತೀವ್ರ ತೊಂದರೆಯಾಗುತ್ತಿದೆ ಮತ್ತು ನೆರೆಹೊರೆಯವರ ಜೊತೆ ಸಮಸ್ಯೆಗಳಾಗುತ್ತಿವೆ. "ಒಂಬತ್ತು ಲಿಫ್ಟ್‌ಗಳಲ್ಲಿ, ನಾವು ಒಂದು ಲಿಫ್ಟ್ ಅನ್ನು ಮಾತ್ರ ಬಳಸುತ್ತಿದ್ದೇವೆ. ಇದರಿಂದ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಬಹುದು" ಎಂದು ಅವರು ಹೇಳಿದ್ದಾರೆ.

ಕಣಿಮಿಣಿಕೆ ಅಪಾರ್ಟ್‌ಮೆಂಟ್‌
ಬಿಡಿಎ ಕರ್ಮಕಾಂಡ: ಹಂಚಿಕೆಯಾಗಿ 18 ವರ್ಷ ಕಳೆದರೂ BDA ನಿವೇಶನಕ್ಕಾಗಿ ಮಾಜಿ ಪೊಲೀಸ್ ಅಧಿಕಾರಿ ಅಲೆದಾಟ!

2 ಬಿಎಚ್‌ಕೆ ಫ್ಲಾಟ್ ಮಾಲೀಕರಾದ ಎಎಮ್ ತಿಮ್ಮಯ್ಯ, “ಇದು ಸುಮಾರು 50 ಎಕರೆಯಲ್ಲಿ ನಿರ್ಮಿಸಲಾದ ಬಿಡಿಎ ವಸತಿ ಸಂಕೀರ್ಣದೊಂದಿಗೆ ಸುಂದರವಾದ ಪ್ರದೇಶವಾಗಿದೆ. ಆದರೆ ಸೌಲಭ್ಯಗಳು ತೀರಾ ಅಸಮರ್ಪಕವಾಗಿದ್ದು, ಕೇವಲ 50 ಕುಟುಂಬಗಳು ಮಾತ್ರ ತಮ್ಮ ಫ್ಲಾಟ್‌ಗಳಲ್ಲಿ ವಾಸವಾಗಿದ್ದಾರೆ. ಬಿಡಿಎ 2018 ರಲ್ಲಿ ಮೈಸೂರು ರಸ್ತೆಯಿಂದ ನೇರ ಪ್ರವೇಶಕ್ಕೆ ಪ್ರತ್ಯೇಕ ರಸ್ತೆ ನಿರ್ಮಿಸುವುದಾಗಿ ಭರವಸೆ ನೀಡಿತ್ತು. “ನಮ್ಮ ಅಪಾರ್ಟ್ಮೆಂಟ್ ಚಲ್ಲಘಟ್ಟ ಮೆಟ್ರೋ ನಿಲ್ದಾಣದಿಂದ 3.5 ಕಿಮೀ ದೂರದಲ್ಲಿದೆ. ನಾನು ಫ್ಲಾಟ್ ಖರೀದಿಸಿದಾಗ, ನಮಗೆ 80 ಅಡಿ ಅಗಲದ ಉತ್ತಮ ರಸ್ತೆ ಸಂಪರ್ಕದ ಭರವಸೆ ನೀಡಲಾಯಿತು. ಆದರೆ ಇದುವರೆಗೂ ರಸ್ತೆ ನಿರ್ಮಿಸಿಲ್ಲ. ನಮ್ಮ ಮನೆಗಳನ್ನು ತಲುಪಲು ನಾವು ಸುತ್ತು ಬಳಸಿ ಕಣಿಮಿಣಿಕೆ ಗ್ರಾಮದ ಮೂಲಕ ಹಾದು ಹೋಗಬೇಕು. ಹೀಗಾಗಿ ನಮಗೆ ಪ್ರತ್ಯೇಕ ರಸ್ತೆ ಮತ್ತು ಮೀಟರ್ ಗಳು ನೀಡಬೇಕು'' ಎಂದಿದ್ದಾರೆ.

ಬಿಡಿಎಯ ಉನ್ನತ ಅಧಿಕಾರಿಯೊಬ್ಬರು, “ನಾವು 800 ಮೀಟರ್ ವರೆಗೆ ರಸ್ತೆ ಸ್ವಾಧೀನಪಡಿಸಿಕೊಂಡಿದ್ದೇವೆ. ಆದರೆ ಮಾರ್ಗದಲ್ಲಿ ಸ್ಮಶಾನ ಇರುವುದರಿಂದ ಉಳಿದ ಭೂಮಿಯನ್ನು ಪಡೆಯಲು ಸಾಧ್ಯವಾಗಿಲ್ಲ. ಹಾಗಾಗಿ ಅಲೈನ್ ಮೆಂಟ್ ಬದಲಿಸಿ ಮತ್ತೊಂದು ಸುತ್ತಿನ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಬೇಕಿತ್ತು. ನಾವು ಅದನ್ನು ಇತ್ತೀಚೆಗೆ ಮಂಡಳಿಯಿಂದ ತೆರವುಗೊಳಿಸಿದ್ದೇವೆ ಮತ್ತು ಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅಂತಿಮ ಅಧಿಸೂಚನೆ ಹೊರಡಿಸಿದ ನಂತರ, ನಾವು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಹುದು ಮತ್ತು ರಸ್ತೆ ಸಿದ್ಧಗೊಳಿಸಲು ಟೆಂಡರ್ ಕರೆಯಬಹುದು. ಪ್ರಕ್ರಿಯೆಯು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಸ್ವಾಧೀನವು ಸುಗಮವಾಗಿ ನಡೆದರೆ 2024 ರ ಅಂತ್ಯದ ವೇಳೆಗೆ ನಾವು ಹೊಸ ರಸ್ತೆಯನ್ನು ನಿರ್ಮಿಸುತ್ತೇವೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com