ಬೆಂಗಳೂರು: ಬಾಯ್ ಫ್ರೆಂಡ್ ಗಾಗಿ ಬೈಕ್ ಖರೀದಿಸಲು ಮನೆ ಮಾಲಕಿಯನ್ನೇ ಕೊಂದ ಹಂತಕಿ!

ಹಣಕ್ಕಾಗಿ ಮನೆ ಮಾಲೀಕನನ್ನೇ ಕೊಲೆ ಮಾಡಿದ ಆರೋಪದ ಮೇಲೆ 24 ವರ್ಷದ ಡಾಟಾ ಎಂಟ್ರಿ ಆಪರೇಟರ್‌ ಒಬ್ಬಳನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮೋನಿಕಾ
ಆರೋಪಿ ಮೋನಿಕಾ
Updated on

ಬೆಂಗಳೂರು: ಹಣಕ್ಕಾಗಿ ಮನೆ ಮಾಲೀಕನನ್ನೇ ಕೊಲೆ ಮಾಡಿದ ಆರೋಪದ ಮೇಲೆ 24 ವರ್ಷದ ಡಾಟಾ ಎಂಟ್ರಿ ಆಪರೇಟರ್‌ ಒಬ್ಬಳನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಮೋನಿಕಾ ಎಂದು ಗುರುತಿಸಲಾಗಿದೆ. ತನ್ನ ಗೆಳೆಯನಿಗೆ ಹಣ ಸಹಾಯ ಮಾಡುವ ಉದ್ದೇಶದಿಂದ ಮೇ 10 ರಂದು ತನ್ನ ಮನೆ ಮಾಲಕಿ ದಿವ್ಯಾಳನ್ನು ಕೊಂದಿದ್ದಾಳೆ.ಕೋಲಾರ ಮೂಲದ ಮೋನಿಕಾ ಕೋನಸಂದ್ರದಲ್ಲಿರುವ ದಿವ್ಯಾ ಅವರ ಮನೆಯ ಒಂದು ಭಾಗವನ್ನು ಬಾಡಿಗೆಗೆ ಪಡೆದಿದ್ದರು. ದಿವ್ಯಾಳನ್ನು ಹತ್ಯೆ ಮಾಡಿ ಆಕೆಯ ಬಳಿಯಿದ್ದ ಚಿನ್ನದ ಸರವನ್ನು ಕದ್ದು ಬಾಯ್ ಪ್ರೆಂಡ್ ಗೆ ನೀಡಲು ನಿರ್ಧರಿಸಿದ್ದಳು.

ಸಂತ್ರಸ್ತೆ ಮಹಿಳೆ ಪತಿ ಗುರುಮೂರ್ತಿ ಕೆಂಗೇರಿಯ ಶಿವನಪಾಳ್ಯದಲ್ಲಿ ಸಲೂನ್ ನಡೆಸುತ್ತಿದ್ದಾರೆ. ಕೊಲೆ ನಡೆದಾಗ ಗುರುಮೂರ್ತಿ ಅವರ ತಾಯಿ ಬೆಳಗ್ಗೆ ಕೆಲಸಕ್ಕೆಂದು ಮನೆಯಿಂದ ಹೊರಟಿದ್ದರು. ದಿವ್ಯಾ ತನ್ನ ಎರಡು ವರ್ಷದ ಮಗುವಿನೊಂದಿಗೆ ಮನೆಯಲ್ಲಿದ್ದ ಸಂದರ್ಭದಲ್ಲಿ ಮೋನಿಕಾ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ 30 ಗ್ರಾಂ ತೂಕದ ಚಿನ್ನದ ಸರದೊಂದಿಗೆ ಪರಾರಿಯಾಗಿದ್ದಾಳೆ. ಬಳಿಕ ಸ್ಥಳೀಯ ಗಿರವಿದಾರರ ಬಳಿ ಚಿನ್ನದ ಸರವನ್ನು ಗಿರವಿ ಇಟ್ಟಿದ್ದಳು.

ಆರೋಪಿ ಮೋನಿಕಾ
ಉಡುಪಿ: ಕೊಲೆ ಪ್ರಕರಣದ ಆರೋಪಿ ಜೈಲಿನಲ್ಲಿ ಶವವಾಗಿ ಪತ್ತೆ

ಗುರುಮೂರ್ತಿ ನಾಲ್ಕು ತಿಂಗಳ ಹಿಂದೆ ಹೊಸ ಮನೆ ನಿರ್ಮಿಸಿದ್ದಾರೆ. ಮೋನಿಕಾ ತನ್ನ ಬಾಯ್‌ಫ್ರೆಂಡ್‌ನೊಂದಿಗೆ ಬಂದು ಮನೆಯ ಒಂದು ಭಾಗವನ್ನು ಬಾಡಿಗೆಗೆ ತೆಗೆದುಕೊಳ್ಳಲು ತನ್ನ ಪತಿ ಎಂದು ಪರಿಚಯಿಸಿದ್ದಳು. ನಂತರ ಅಲ್ಲಿ ಒಬ್ಬಳೇ ಇದ್ದಳು.

ಆರೋಪಿಯು ಕೆಲವು ದಿನಗಳ ಹಿಂದೆ ತನ್ನ ಕೆಲಸವನ್ನು ತೊರೆದು ಮಾಡಿದ್ದ ಸಾಲವನ್ನು ತೀರಿಸಲು ಕಷ್ಟಪಡುತ್ತಿದ್ದಳು ಎನ್ನಲಾಗಿದೆ. ಗುರುಮೂರ್ತಿ ಕರೆಗೆ ದಿವ್ಯಾ ಸ್ಪಂದಿಸದಿದ್ದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಗುರುಮೂರ್ತಿ ಕೂಡ ಮೋನಿಕಾಗೆ ಕರೆ ಮಾಡಿ ದಿವ್ಯಾ ಮನೆಯಲ್ಲಿದ್ದಾಳಾ ಎಂದು ತಿಳಿದುಕೊಂಡರು. ಆದರೆ ಮೋನಿಕಾ ತಾನು ಹೊರಗೆ ಹೋಗಿರುವುದಾಗಿ ತಿಳಿಸಿದ್ದಾಳೆ.

ಕೆಲವು ಗಂಟೆಗಳ ನಂತರ ಗುರುಮೂರ್ತಿ ಮನೆಗೆ ಹೋದಾಗ, ಕೋಣೆಯೊಳಗೆ ತನ್ನ ಹೆಂಡತಿ ಶವವನ್ನು ನೋಡಿದನು. ಕೊಲೆ ಮಾಡಿ ಆರೋಪಿ ಪರಾರಿಯಾಗಿರಲಿಲ್ಲ. ಮನೆಯೊಳಗೆ ಬಲವಂತದ ಪ್ರವೇಶ ಇಲ್ಲದ ಕಾರಣ ಆರೋಪಿ ಮನೆಯವರಿಗೆ ಗೊತ್ತಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಆರೋಪಿಯನ್ನು ವಿಚಾರಣೆಗಾಗಿ ಠಾಣೆಗೆ ಕರೆದೊಯ್ಯಲಾಯಿತು, ಅಲ್ಲಿ ಅವಳು ಕೊಲೆಯನ್ನು ಒಪ್ಪಿಕೊಂಡಿದ್ದಾಳೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com