ಕೊಡಗಿನಲ್ಲಿ ಅಕ್ರಮವಾಗಿ ಮರ ಕಡಿಯುತ್ತಿರುವ ಬಗ್ಗೆ ತನಿಖೆಗೆ ಸಚಿವ ಈಶ್ವರ ಖಂಡ್ರೆ ಆದೇಶ

ಮೇ 11ರಂದು ಕೊಡಗಿನ ತಲಕಾವೇರಿ ಅಭಯಾರಣ್ಯದ ಬಳಿ ಇರುವ ಮುಂಡ್ರೊಟ್ ಅರಣ್ಯ ವ್ಯಾಪ್ತಿಯ ಪಡಿನಾಲ್ಕುನಾಡು ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರಗಳನ್ನು ಕಡಿಯುತ್ತಿರುವುದನ್ನು ಟಿಎನ್ಐಇ ವರದಿ ಎತ್ತಿ ತೋರಿಸಿತ್ತು.
ಸಚಿವ ಈಶ್ವರ ಖಂಡ್ರೆ
ಸಚಿವ ಈಶ್ವರ ಖಂಡ್ರೆ
Updated on

ಮಡಿಕೇರಿ: ಕೊಡಗಿನ ಮೀಸಲು ಅರಣ್ಯದಲ್ಲಿ ಅಕ್ರಮವಾಗಿ ಮರಗಳನ್ನು ಕಡಿಯುತ್ತಿರುವ ಕುರಿತು ಟಿಎನ್‌ಐಇಯಲ್ಲಿ ಪ್ರಕಟವಾದ ವರದಿಯ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ ಕಂಡ್ರೆ ಅವರು ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

ಮೇ 11ರಂದು ಕೊಡಗಿನ ತಲಕಾವೇರಿ ಅಭಯಾರಣ್ಯದ ಬಳಿ ಇರುವ ಮುಂಡ್ರೊಟ್ ಅರಣ್ಯ ವ್ಯಾಪ್ತಿಯ ಪಡಿನಾಲ್ಕುನಾಡು ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರಗಳನ್ನು ಕಡಿಯುತ್ತಿರುವುದನ್ನು ಟಿಎನ್ಐಇ ವರದಿ ಎತ್ತಿ ತೋರಿಸಿತ್ತು.

239 ಮರಗಳನ್ನು ಕಡಿದಿದ್ದಾರೆ ಎಂದು ಆರೋಪಿಸಿ ಮೂರು ಜನರ ವಿರುದ್ಧ ಮುಂಡ್ರೊಟೆಯ ರೇಂಜ್ ಫಾರೆಸ್ಟ್ ಆಫೀಸರ್ ಏಪ್ರಿಲ್ 30 ರಂದು ಅರಣ್ಯ ಅಪರಾಧ ಪ್ರಕರಣ ದಾಖಲಿಸಿದ್ದಾರೆ. ಆದರೆ, ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕೊಡಗು ಏಕೀಕರಣ ರಂಗದ ಅಕ್ರಮವಾಗಿ ಸಾವಿರಾರು ಮರಗಳನ್ನು ಕಡಿದು ಸುಟ್ಟು ಹಾಕಿರುವ ಪ್ರಕರಣದಲ್ಲಿ ಅರಣ್ಯಾಧಿಕಾರಿಗಳ ಕೈವಾಡವಿದೆ ಎಂದು ಆರೋಪಿಸಿದ್ದರು.

ಟಿಎನ್ಐಇ ವರದಿ ನಂತರ ಅರಣ್ಯ ಸಚಿವರು ಘಟನೆಯ ಬಗ್ಗೆ ಎಚ್ಚೆತ್ತುಕೊಂಡಿದ್ದಾರೆ. ಮೀಸಲು ಅರಣ್ಯ ಪ್ರದೇಶದಲ್ಲಿ ಸಾವಿರಾರು ಮರಗಳನ್ನು ಕಡಿಯುತ್ತಿದ್ದರೂ ಸಚಿವರ ಕಚೇರಿ ಎಚ್ಚೆತ್ತುಕೊಂಡಿಲ್ಲ. ಪತ್ರಿಕೆಯಲ್ಲಿ ಬಂದ ವರದಿ ರಾಜ್ಯ ಅರಣ್ಯ ಇಲಾಖೆಯ ವಾಟ್ಸಾಪ್ ಗ್ರೂಪ್‌ನಲ್ಲಿ ರವಾನೆಯಾದ ನಂತರವೇ ಸಚಿವರು ಎಚ್ಚೆತ್ತುಕೊಂಡಿದ್ದಾರೆ ಎಂದು ಮೇ 15ರ ಆದೇಶದಲ್ಲಿ ತಿಳಿಸಲಾಗಿದೆ.

ಸಮಗ್ರ ಪರಿಶೀಲನೆಗಾಗಿ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಅಧಿಕಾರಿಯನ್ನು ತಕ್ಷಣವೇ ನಿಯೋಜಿಸಬೇಕು ಮತ್ತು ಮೂರು ದಿನಗಳಲ್ಲಿ ಜಿಪಿಎಸ್ ಟ್ಯಾಗ್ ಮಾಡಿದ ವಿಡಿಯೋಗಳನ್ನು ಒಳಗೊಂಡಂತೆ ವಾಸ್ತವ ವರದಿಯನ್ನು ಸಲ್ಲಿಸಬೇಕು. ನಿರ್ಲಕ್ಷ್ಯ ತೋರಿರುವ ಅರಣ್ಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಹೇಳಿದ್ದಾರೆ.

ಸಚಿವ ಈಶ್ವರ ಖಂಡ್ರೆ
ಕೊಡಗು: ಮೀಸಲು ಅರಣ್ಯ ಪ್ರದೇಶದಲ್ಲಿ ಸಾವಿರಾರು ಮರ ಕಡಿದು, ಬೆಂಕಿ!

ಮುಂಡ್ರೊಟೆ, ಮಾಕುಟ್ಟ ಮತ್ತು ಪೊನ್ನಂಪೇಟೆ ವಲಯಗಳು ಕೇರಳದೊಂದಿಗೆ ಗಡಿಯನ್ನು ಹಂಚಿಕೊಂಡಿವೆ. ಅದರ ಸಮೀಪದ ಕೆಲವು ಕಾಡುಗಳಿಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ರಸ್ತೆ ಬಿಟ್ಟು ವಾಕಿಂಗ್ ಪಾತ್ ಹುಡುಕಲು ಕಿಲೋಮೀಟರ್ ಗಟ್ಟಲೆ ನಡೆಯಬೇಕಾದ ಪ್ರದೇಶಗಳಿವೆ. ಇದು ಅಕ್ರಮವಾಗಿ ಮರಗಳನ್ನು ಕಡಿಯುವುದು ಮತ್ತು ಸಾಗಾಟಕ್ಕೆ ವರದಾನವಾಗಿದೆ ಎಂದು ಕಾರ್ಯಕರ್ತರೊಬ್ಬರು ಹೇಳಿದರು.

ಜಿಲ್ಲೆಯ ಅಧಿಕಾರಿಗಳು ಹಂಚಿಕೊಂಡ ಮಾಹಿತಿಯ ಪ್ರಕಾರ, ಆ ಜಮೀನು ಸಾಗು (ಭೂಮಿಯಲ್ಲಿರುವ ಮರಕ್ಕಾಗಿ ನಿವಾಸಿಗಳು ಪಾವತಿಸಿದ್ದಾರೆ) ಎಂದು ತೋರುತ್ತದೆ. ಆ ಭೂಮಿಯ ಸ್ಥಿತಿಗತಿ ಕುರಿತು ತೀರ್ಮಾನಿಸಲು ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com