ಬ್ಯಾಂಕ್ ಆಫ್ ಬರೋಡಾದಿಂದ ಕರ್ನಾಟಕ ಪೊಲೀಸರಿಗೆ ವಿಶೇಷ ಹಣಕಾಸು ಸೇವೆ; ಒಪ್ಪಂದಕ್ಕೆ ಸಹಿ

ರಾಜ್ಯದ ಎಲ್ಲಾ ಪೊಲೀಸ್ ಸಿಬ್ಬಂದಿಗೆ ವಿಶೇಷ ವೇತನ ಪ್ಯಾಕೇಜ್ ನೀಡಲು ಬ್ಯಾಂಕ್ ಆಫ್ ಬರೋಡಾ ಮತ್ತು ಕರ್ನಾಟಕ ಪೊಲೀಸರು ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದ್ದಾರೆ. ರಾಜ್ಯ ಪೊಲೀಸ್ ಮತ್ತು ಬ್ಯಾಂಕ್‌ನ ಪ್ರತಿನಿಧಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮೇ 14ರಂದು ಎಂಒಯುಗೆ ಸಹಿ ಹಾಕಲಾಯಿತು.
ರಾಜ್ಯ ಪೊಲೀಸ್ ಮತ್ತು ಬ್ಯಾಂಕ್‌ನ ಪ್ರತಿನಿಧಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮೇ 14 ರಂದು ಎಂಒಯುಗೆ ಸಹಿ ಹಾಕಲಾಯಿತು
ರಾಜ್ಯ ಪೊಲೀಸ್ ಮತ್ತು ಬ್ಯಾಂಕ್‌ನ ಪ್ರತಿನಿಧಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮೇ 14 ರಂದು ಎಂಒಯುಗೆ ಸಹಿ ಹಾಕಲಾಯಿತು
Updated on

ಬೆಂಗಳೂರು: ರಾಜ್ಯದ ಎಲ್ಲಾ ಪೊಲೀಸ್ ಸಿಬ್ಬಂದಿಗೆ ವಿಶೇಷ ವೇತನ ಪ್ಯಾಕೇಜ್ ನೀಡಲು ಬ್ಯಾಂಕ್ ಆಫ್ ಬರೋಡಾ ಮತ್ತು ಕರ್ನಾಟಕ ಪೊಲೀಸರು ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದ್ದಾರೆ. ರಾಜ್ಯ ಪೊಲೀಸ್ ಮತ್ತು ಬ್ಯಾಂಕ್‌ನ ಪ್ರತಿನಿಧಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮೇ 14ರಂದು ಎಂಒಯುಗೆ ಸಹಿ ಹಾಕಲಾಯಿತು.

ಈ ಸಹಯೋಗದ ಮೂಲಕ, ಪೊಲೀಸ್ ಸಿಬ್ಬಂದಿ ವಿಶೇಷ ಬ್ಯಾಂಕಿಂಗ್ ಹಕ್ಕುಗಳು, ಹೆಚ್ಚುವರಿ ವಿಮೆ, ಅವರ ನಿರ್ದಿಷ್ಟ ಅಗತ್ಯಗಳಿಗೆ ಅನುಗುಣವಾಗಿ ಆರ್ಥಿಕ ಪರಿಹಾರಗಳು ಮತ್ತು ಅವರ ಬೇಡಿಕೆಗಳನ್ನು ಪೂರೈಸುವ ಕಸ್ಟಮರ್ ಕೇರ್ ಅನ್ನು ಪಡೆಯುತ್ತಾರೆ.

ಡಿಜಿ ಮತ್ತು ಐಜಿಪಿ ಅಲೋಕ್ ಮೋಹನ್ ಮಾತನಾಡಿ, 'ನಮ್ಮ ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬಗಳ ಆರ್ಥಿಕ ಮತ್ತು ಸಾಮಾಜಿಕ ಅಗತ್ಯಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಈ ಸಹಯೋಗವು ಮಹತ್ವದ ಹೆಜ್ಜೆಯಾಗಿದೆ. ನಮ್ಮ ಸಿಬ್ಬಂದಿಗೆ ಸಾಧ್ಯವಾದಷ್ಟು ಉತ್ತಮವಾದ ಸಂಪನ್ಮೂಲಗಳು ಮತ್ತು ಬೆಂಬಲ ದೊರೆಯುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com