ಬೆಳಗಾವಿ: ತನ್ನ ತಂಗಿಯನ್ನು ಬೈಕ್ ನಲ್ಲಿ ಸುತ್ತಿಸುತ್ತಿದ್ದ ಮುಸ್ಲಿಂ ಯುವಕನಿಗೆ ಸ್ಕ್ರೂಡ್ರೈವರ್​ನಿಂದ ಚುಚ್ಚಿ ಕೊಂದ ಸಹೋದರ!

ತನ್ನ ಸಹೋದರಿಯನ್ನು ಬೈಕ್ ನಲ್ಲಿ ಸುತ್ತಾಡಿಸುತ್ತಿದ್ದ ಪ್ರಿಯಕರನ್ನು ಯುವಕನೋರ್ವ ಸ್ಕ್ರೂಡ್ರೈವರ್​ನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಇಬ್ರಾಹಿಂ ಗೌಸ್ ಬರ್ಬರ ಹತ್ಯೆ
ಇಬ್ರಾಹಿಂ ಗೌಸ್ ಬರ್ಬರ ಹತ್ಯೆ
Updated on

ಬೆಳಗಾವಿ: ತನ್ನ ಸಹೋದರಿಯನ್ನು ಬೈಕ್ ನಲ್ಲಿ ಸುತ್ತಾಡಿಸುತ್ತಿದ್ದ ಪ್ರಿಯಕರನ್ನು ಯುವಕನೋರ್ವ ಸ್ಕ್ರೂಡ್ರೈವರ್​ನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಬೆಳಗಾವಿಯ ಮಹಾಂತೇಶನಗರದ ಬ್ರಿಡ್ಜ್ ಬಳಿ ಇಂದು ಮಧ್ಯಾಹ್ನ ಈ ಭೀಕರ ಕೊಲೆ ನಡೆದಿದ್ದು ಮೃತನನ್ನು ಬೆಳಗಾವಿಯ ಗಾಂಧಿನಗರ ನಿವಾಸಿ 22 ವರ್ಷದ ಇಬ್ರಾಹಿಂ ಗೌಸ್ ಎಂದು ಗುರುತಿಸಲಾಗಿದೆ.

ತನ್ನ ಪ್ರೇಯಸಿಯನ್ನು ಬೈಕ್​ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ ಇಬ್ರಾಹಿಂ ಗೌಸ್ ನನ್ನು ಯುವತಿಯ ಸಹೋದರ ಮುಜಾಮಿಲ್ ಸತ್ತಿಗೇರಿ ಅಡ್ಡಗಟ್ಟಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಮುಜಾಮಿಲ್ ಸ್ಕ್ರೂಡ್ರೈವರ್​ನಿಂದ ಗೌಸ್ ಗೆ ಚುಚ್ಚಿ ಪರಾರಿಯಾಗಿದ್ದಾನೆ. ಗಾಯಾಳು ಗೌಸ್​ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ.

ಇಬ್ರಾಹಿಂ ಗೌಸ್ ಬರ್ಬರ ಹತ್ಯೆ
ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಪ್ರಕರಣ: ಕರ್ತವ್ಯ ಲೋಪ ಆರೋಪದ ಮೇಲೆ ಇಬ್ಬರು ಪೊಲೀಸರ ಅಮಾನತು

ಈ ಕುರಿತು ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಆರೋಪಿಯ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com