ಬೆಂಗಳೂರು: ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಏರ್ ಕಾನ್‌ಕೋರ್ಸ್, ಅಂಡರ್ ಗ್ರೌಂಡ್ ಪಾರ್ಕಿಂಗ್ ನಿರ್ಮಾಣ

ಬೆಂಗಳೂರಿನ ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಹೊಸ ರೂಪ ನೀಡುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಕೆಲಸಗಳು ಭರದಿಂದ ಸಾಗುತ್ತಿದ್ದು, ಅಂಡರ್ ಗ್ರೌಂಡ್ ಪಾರ್ಕಿಂಗ್ ನಿರ್ಮಿಸಲಾಗುತ್ತಿದೆ.
ಕಂಟೋನ್ಮೆಂಟ್ ರೈಲು ನಿಲ್ದಾಣ
ಕಂಟೋನ್ಮೆಂಟ್ ರೈಲು ನಿಲ್ದಾಣ

ಬೆಂಗಳೂರು: ಬೆಂಗಳೂರಿನ ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಹೊಸ ರೂಪ ನೀಡುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಕೆಲಸಗಳು ಭರದಿಂದ ಸಾಗುತ್ತಿದ್ದು, ಸುಮಾರು 500 ಕಾರುಗಳನ್ನು ಪಾರ್ಕಿಂಗ್‌ ಮಾಡಲು ಸಾಧ್ಯವಾಗುವಂತಹ ಎರಡು ಹಂತದ ಅಂಡರ್ ಗ್ರೌಂಡ್ ಪಾರ್ಕಿಂಗ್, ರೈಲ್ವೆ ಹಳಿಗಳ ಮೇಲೆ ಹೊಸ ಕಾನ್‌ಕೋರ್ಸ್, ವಿಮಾನ ನಿಲ್ದಾಣದ ಮಾದರಿಯಲ್ಲಿ ಪ್ರತ್ಯೇಕ 'ಆಗಮನ' ಮತ್ತು 'ನಿರ್ಗಮನ' ವಲಯಗಳನ್ನು ನಿರ್ಮಿಸಲಾಗುತ್ತಿದೆ.

ನೈಋತ್ಯ ರೈಲ್ವೆಯ(ಎಸ್‌ಡಬ್ಲ್ಯುಆರ್) ನಿರ್ಮಾಣ ವಿಭಾಗವು 480 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರಾಭಿವೃದ್ಧಿ ಕಾರ್ಯವನ್ನು ನಡೆಸುತ್ತಿದೆ. ಈ ನಿಲ್ದಾಣಕ್ಕೆ ಅತ್ಯಾಧುನಿಕ ಸ್ಪರ್ಶ ನೀಡುವ ಮೂಲಕ ಪ್ರಯಾಣಿಕರಿಗೆ ವಿಶ್ವ ದರ್ಜೆಯ ಸೌಲಭ್ಯ ಮತ್ತು ಹವಾನಿಯಂತ್ರಿತ ನಿಲ್ದಾಣದ ಕಟ್ಟಡವನ್ನು ಅಕ್ಟೋಬರ್ 2025 ರ ವೇಳೆಗೆ ಸಿದ್ಧವಾಗಲಿದೆ.

ಮುಖ್ಯ ಇಂಜಿನಿಯರ್, ಕನ್ಸ್ಟ್ರಕ್ಷನ್ಸ್, SWR, ರಮೇಶ್ ಕಾಂಬ್ಳಿ ಮಾತನಾಡಿ, “ಕಳೆದ ಕೆಲವು ತಿಂಗಳುಗಳಿಂದ, ನಾವು ಅಸ್ತಿತ್ವದಲ್ಲಿರುವ ರಚನೆಗಳನ್ನು ಸ್ಥಳಾಂತರಿಸುವ ಕಾರ್ಯದಲ್ಲಿ ನಿರತರಾಗಿದ್ದೇವೆ. ನಿಜವಾದ ಕೆಲಸವು ಇತ್ತೀಚೆಗೆ ಪ್ರಾರಂಭವಾಗಿದೆ ಮತ್ತು ನಾವು ನಿಲ್ದಾಣದ ಸಿವಿಲ್ ಕೆಲಸವನ್ನು ಶೇ.15 ರಷ್ಟು ಪೂರ್ಣಗೊಳಿಸಿದ್ದೇವೆ ಎಂದು ತಿಳಿಸಿದರು.

ನಿಲ್ದಾಣದ ಮುಖ್ಯ ಪ್ರವೇಶ(ಕೋಲ್ಸ್ ರಸ್ತೆ ಬದಿಯಲ್ಲಿ) ದ್ವಾರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು. “ಎರಡೂ ಪ್ರವೇಶಗಳಲ್ಲಿ ಎರಡು ಹಂತದ ಅಂಡರ್ ಗ್ರೌಂಡ್ ಪಾರ್ಕಿಂಗ್ ಮತ್ತು ವಾಹನಗಳಿಗೆ ನೆಲಮಟ್ಟದ ಪಾರ್ಕಿಂಗ್ ಸ್ಥಳವಿರುತ್ತದೆ. ಈ ಪಾರ್ಕಿಂಗ್ ಸ್ಥಳಗಳಲ್ಲಿ ಒಟ್ಟು 500 ಕಾರುಗಳು ಮತ್ತು 500 ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ. ವಿದ್ಯುತ್ ತಂತಿಗಳು ಮತ್ತು ನೀರು ಸರಬರಾಜು ಮಾರ್ಗಗಳ ಯುಟಿಲಿಟಿ ಶಿಫ್ಟ್ ಈಗ ಪ್ರಗತಿಯಲ್ಲಿದೆ ”ಎಂದು ಅವರು ಹೇಳಿದ್ದಾರೆ.

ಕಂಟೋನ್ಮೆಂಟ್ ರೈಲು ನಿಲ್ದಾಣ
ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ರೂ.525 ಕೋಟಿ ವೆಚ್ಚದಲ್ಲಿ ಹೈಟೆಕ್ ಸ್ಪರ್ಶ!

ಮತ್ತೊಂದು ವಿಶಿಷ್ಟ ವೈಶಿಷ್ಟ್ಯವೆಂದರೆ, ರೈಲು ನಿಲ್ದಾಣವು ಎರಡೂ ಬದಿಗಳನ್ನು ಒಳಗೊಂಡಿರುವ ಸಂಪೂರ್ಣ ಮೇಲ್ಛಾವಣಿಯಿಂದ ಕೂಡಿರುತ್ತದೆ ಮತ್ತು ಇದು ಒಂದೇ ರಚನೆಯಾಗಿ ಕಾಣಿಸುತ್ತದೆ” ಎಂದು ಕಾಂಬ್ಲಿ ಅವರು ತಿಳಿಸಿದ್ದಾರೆ.

ಕಂಟೋನ್ಮೆಂಟ್ ರೈಲು ನಿಲ್ದಾಣ ಇರುವ ಪ್ರಧಾನ ಪ್ರದೇಶವನ್ನು ಉತ್ತಮವಾಗಿ ಬಳಸಿಕೊಳ್ಳಲು, ಕನಿಷ್ಠ 30 ಮೀಟರ್ ಅಗಲದ 136 ಮೀಟರ್ ಉದ್ದದ ಕಾನ್ಕೋರ್ಸ್ ಅನ್ನು ಸಹ ನಿರ್ಮಿಸಲಾಗುವುದು. "ನಾವು ಇದನ್ನು ಏರ್ ಕಾನ್ಕೋರ್ಸ್ ಎಂದು ಕರೆಯುತ್ತೇವೆ. ಇದು SWR ನಲ್ಲಿ ಮೊದಲ ಬಾರಿಗೆ ಪ್ರಯತ್ನಿಸಲಾಗುತ್ತಿದೆ. ನಿಲ್ದಾಣದ ಆವರಣದ ಉದ್ದಕ್ಕೂ ಹಾದು ಹೋಗುವ ರೈಲ್ವೆ ಹಳಿ ಮೇಲೆ ಕಾನ್ಕೋರ್ಸ್ ಇರುತ್ತದೆ” ಎಂದು ಅವರು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com