ಕರ್ನಾಟಕ: ಈ ವರ್ಷ 23 ಮಿ.ಮೀ ಹೆಚ್ಚುವರಿ ಮುಂಗಾರು ಪೂರ್ವ ಮಳೆ

ರಾಜ್ಯದಲ್ಲಿ ಈ ವರ್ಷ ಮೇ ತಿಂಗಳಲ್ಲಿ ವಾಡಿಕೆಯಂತೆ ಮಳೆಯಾಗುತ್ತಿದೆ, ಪರಿಣಾಮವಾಗಿ ಇಲ್ಲಿಯವರೆಗೆ ಇದೇ ಸಮಯದಲ್ಲಿ ಸುರಿದ ಸರಾಸರಿ ಮಳೆಗೆ ಹೋಲಿಸಿದರೆ ಈ ವರ್ಷ ಪೂರ್ವ ಮುಂಗಾರು ಮಳೆ ಉತ್ತಮವಾಗಿದೆ.
ಕರ್ನಾಟಕ: ಈ ವರ್ಷ 23 ಮಿ.ಮೀ ಹೆಚ್ಚುವರಿ ಮುಂಗಾರು ಪೂರ್ವ ಮಳೆ
Updated on

ಬೆಂಗಳೂರು: ರಾಜ್ಯದಲ್ಲಿ ಈ ವರ್ಷ ಮೇ ತಿಂಗಳಲ್ಲಿ ವಾಡಿಕೆಯಂತೆ ಮಳೆಯಾಗುತ್ತಿದೆ, ಪರಿಣಾಮವಾಗಿ ಇಲ್ಲಿಯವರೆಗೆ ಇದೇ ಸಮಯದಲ್ಲಿ ಸುರಿದ ಸರಾಸರಿ ಮಳೆಗೆ ಹೋಲಿಸಿದರೆ ಈ ವರ್ಷ ಪೂರ್ವ ಮುಂಗಾರು ಮಳೆ ಉತ್ತಮವಾಗಿದೆ.

IMD ಪ್ರಕಾರ, ಕರ್ನಾಟಕವು ಈ ವರ್ಷ ಮಾರ್ಚ್‌ನಿಂದ ಮೇ 21 ರ ನಡುವೆ 107.8 ಮಿಮೀ ಮಳೆಯನ್ನು ಪಡೆದಿದೆ, ಪ್ರತಿ ವರ್ಷ ಈ ಸಮಯದಲ್ಲಿ 87.4 ಮಿಮೀ ಮಳೆ ದಾಖಲಾಗುತ್ತಿತ್ತು, ಇದರಿಂದಾಗಿ ಈ ವರ್ಷ 23 ಮಿಮೀ ಹೆಚ್ಚುವರಿ ಮಳೆ ಬಿದ್ದಂತಾಗಿದೆ.

ಭಾರತೀಯ ಹವಾಮಾನ ಇಲಾಖೆ (IMD) ದಕ್ಷಿಣ ಮತ್ತು ಕರಾವಳಿ ಕರ್ನಾಟಕದಲ್ಲಿ ಮುಂದಿನ ಮೂರು ದಿನಗಳ ಕಾಲ ಹೆಚ್ಚಿನ ಮಳೆಯ ಮುನ್ಸೂಚನೆ ನೀಡಿದೆ.

IMD ಪ್ರಕಾರ, ದಕ್ಷಿಣ-ಆಂತರಿಕ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ 217.9 ಮಿಮೀ, ಹಾಸನದಲ್ಲಿ 194.3 ಮಿಮೀ, ಕೊಡಗು 194 ಮಿಮೀ ಮತ್ತು ಚಾಮರಾಜನಗರದಲ್ಲಿ 153.8 ಮಿಮೀ ದಕ್ಷಿಣ ಒಳನಾಡಿನಲ್ಲಿ ದಾಖಲಾಗಿದೆ. ಅದೇ ರೀತಿ, ಕರಾವಳಿ ಕರ್ನಾಟಕದಲ್ಲಿ ದಕ್ಷಿಣ ಕನ್ನಡದಲ್ಲಿ 178.1 ಮಿಮೀ ಮಳೆಯಾಗಿದ್ದು, ಉತ್ತರ-ಆಂತರಿಕ ಕರ್ನಾಟಕದ ಧಾರವಾಡ ಮತ್ತು ಗದಗದಲ್ಲಿ ಕ್ರಮವಾಗಿ 120.9 ಮಿಮೀ ಮತ್ತು 120.3 ಮಿಮೀ ಮಳೆ ದಾಖಲಾಗಿದೆ.

ಕೊಡಗು, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು, ಶಿವಮೊಗ್ಗ, ದಾವಣಗೆರೆ, ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ದಕ್ಷಿಣ ಒಳನಾಡಿನ ಕರ್ನಾಟಕದ ಇತರ ಭಾಗಗಳಲ್ಲಿ ಮಂಗಳವಾರದವರೆಗೆ ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ದಕ್ಷಿಣ ಕನ್ನಡದ ಧರ್ಮಸ್ಥಳದಲ್ಲಿ 15, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ 10, ದಾವಣಗೆರೆಯ ಸಂತೆಬೆನ್ನೂರಿನಲ್ಲಿ 8, ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಸೋಮವಾರ 7 ಸೆಂ.ಮೀ ಮಳೆ ದಾಖಲಾಗಿದೆ.

ಕರ್ನಾಟಕ: ಈ ವರ್ಷ 23 ಮಿ.ಮೀ ಹೆಚ್ಚುವರಿ ಮುಂಗಾರು ಪೂರ್ವ ಮಳೆ
ಬರಗಾಲದ ನಡುವೆ ಗಾಳಿ-ಮಳೆ: ರಾಜ್ಯದ ವಿವಿಧ ಜಿಲ್ಲೆಗಳ ರೈತರ ಬದುಕು-ಬವಣೆಯ ಕುರಿತ ವರದಿ....

ಯಲ್ಲೋ ಅಲರ್ಟ್: ಕೇರಳದ ಮೇಲೆ ಚಂಡಮಾರುತದ ಮುನ್ಸೂಚನೆಯಿದೆ. ಇದರಿಂದಾಗಿ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಬೆಂಗಳೂರಿನ ಹವಾಮಾನ ಇಲಾಖೆಯ ವಿಜ್ಞಾನಿ ಸಿಎಸ್ ಪಾಟೀಲ್ ಹೇಳಿದ್ದಾರೆ. ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಉತ್ತರ ಕನ್ನಡ ಮತ್ತು ಉಡುಪಿಯ ಕೆಲವು ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದರು ಮತ್ತು ಮೇ 21 ರಿಂದ ಮೇ 23 ರ ನಡುವೆ ಈ ಸ್ಥಳಗಳಿಗೆ ಹಳದಿ ಅಲರ್ಟ್ ಘೋಷಿಸಲಾಗಿದೆ ಎಂದು ಹೇಳಿದರು.

ಬೆಂಗಳೂರಿಗೆ ಇದೇ ಅವಧಿಯಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದ್ದು, ಮೇ 24ರಿಂದ ಮಳೆಯ ತೀವ್ರತೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com