
ಬೆಂಗಳೂರು: ಸಿವಿಲ್ ಕೋರ್ಟ್ ಆದೇಶ ಬಂದ 3 ವರ್ಷಗಳ ಬಳಿಕ ಅರಣ್ಯ ಇಲಾಖೆ ಬೆಂಗಳೂರಿನ ಕಗ್ಗಲಿಪುರದಲ್ಲಿರುವ ಬಿಎಂ ಕಾವಲ್ ನಲ್ಲಿ 5 ಎಕರೆ ಭೂ ಪ್ರದೇಶವನ್ನು ವಶಕ್ಕೆ ಪಡೆದಿದೆ.
ಬೆಂಗಳೂರು ನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಮೇ 23 ರಂದು ಅರಣ್ಯ ಇಲಾಖೆ ಭೂಮಿಯನ್ನು ಹಿಂಪಡೆದಿದೆ.
ಬೆಂಗಳೂರು ನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ರವೀಂದ್ರ ಕುಮಾರ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ್ದು, "ಅರಣ್ಯ ಇಲಾಖೆ ಮತ್ತು ನ್ಯಾಯವ್ಯಾಪ್ತಿಯ ಪೊಲೀಸರೊಂದಿಗೆ ಕಗ್ಗಲೀಪುರದ ಬಿಎಂ ಕಾವಲ್‌ನ ಸರ್ವೆ ಸಂಖ್ಯೆ 92 ರಲ್ಲಿನ ಭೂಮಿಯನ್ನು ಅರಣ್ಯವನ್ನು ಅತಿಕ್ರಮಣ ಮಾಡಿದ ವೆಂಕಟಪ್ಪ ಎಂಬುವವರಿಂದ ಹಿಂಪಡೆಯಲಾಗಿದೆ. 2021 ರಲ್ಲಿ ನ್ಯಾಯಾಲಯದ ಆದೇಶವನ್ನು ಆಧರಿಸಿ ಇಲಾಖೆಯು ಕ್ರಮ ಕೈಗೊಂಡಿದೆ.
ಅಧಿಕಾರಿಗಳ ಪ್ರಕಾರ, ಜೂನ್ 5 ರಂದು ವಿಶ್ವ ಪರಿಸರ ದಿನದ ಅಂಗವಾಗಿ ಗಿಡ ನೆಡುವಿಕೆ ಚಾಲನೆಗೆ ಭೂಮಿಯನ್ನು ಬಳಸಲಾಗುತ್ತದೆ. ವೈಲ್ಡರ್‌ನೆಸ್ ಕ್ಲಬ್ ಎನ್‌ಜಿಒ ಗೌರವ ಕಾರ್ಯದರ್ಶಿ ಮಂಜುನಾಥ್ ಜೆ ಅರಣ್ಯ ಇಲಾಖೆಯ ಕಾರ್ಯವನ್ನು ಶ್ಲಾಘಿಸಿದ್ದು, ದಕ್ಷಿಣ ಬೆಂಗಳೂರು ಮತ್ತು ಸುತ್ತಮುತ್ತಲಿನ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಲಾಗಿದೆ ಎಂದು ತಿಳಿದ ನಂತರ ಪರಿಸರ ಹೋರಾಟಗಾರರು ಕಳೆದ ಐದು ವರ್ಷಗಳಿಂದ ಆಂದೋಲನ ನಡೆಸುತ್ತಿದ್ದಾರೆ. ಅರಣ್ಯ ಭೂಮಿ ಒತ್ತುವರಿ ಹಿಂದೆ ಗೂಂಡಾಗಳು, ರಿಯಲ್ ಎಸ್ಟೇಟ್ ಮಾಫಿಯಾ ಮತ್ತಿತರರ ಕೈವಾಡವಿದ್ದು, ರವೀಂದ್ರಕುಮಾರ್, ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಂತಹ ಪ್ರಾಮಾಣಿಕ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿರುವುದು ನಮಗೆ ಸಂತಸ ತಂದಿದೆ ಎಂದು ಹೇಳಿದ್ದಾರೆ.
Advertisement