ಪ್ರಯಾಣಿಕ ಮಹಿಳೆಗೆ ಲೈಂಗಿಕ ಕಿರುಕುಳ: ಸಂಕಷ್ಟಕ್ಕೆ ಸಿಲುಕಿದ ಆಟೋ ಚಾಲಕ!

ಕೆಲಸ ಅರಸಿ ತನ್ನ ಸ್ನೇಹಿತನ ಜೊತೆಗೆ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬಂದಿದ್ದ 19 ವರ್ಷದ ಯುವತಿಗೆ 51 ವರ್ಷದ ಆಟೋ ರಿಕ್ಷಾ ಚಾಲಕ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.
ಆಟೋ ಚಾಲಕ
ಆಟೋ ಚಾಲಕ
Updated on

ಬೆಂಗಳೂರು: ಕೆಲಸ ಅರಸಿ ತನ್ನ ಸ್ನೇಹಿತನ ಜೊತೆಗೆ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬಂದಿದ್ದ 19 ವರ್ಷದ ಯುವತಿಗೆ 51 ವರ್ಷದ ಆಟೋ ರಿಕ್ಷಾ ಚಾಲಕ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ ನಂತರ ಜಯನಗರದಲ್ಲಿರುವ ಮತ್ತೋರ್ವ ಸ್ನೇಹಿತನ ಭೇಟಿಗಾಗಿ ಯುವತಿ ತನ್ನ ಗೆಳೆಯನೊಂದಿಗೆ ಬೆಂಗಳೂರಿಗೆ ಬಂದಿದ್ದರು. ನಗರಕ್ಕೆ ಹೊಸಬರಾಗಿದ್ದ ಅವರನ್ನು ರೈಲ್ವೆ ನಿಲ್ದಾಣಕ್ಕೆ ಕರೆದೊಯ್ಯುತ್ತಿದ್ದ ಆಟೋ ಚಾಲಕ, ರಾತ್ರಿ ತನ್ನ ಮನೆಯಲ್ಲಿಯೇ ಕಳೆಯಲು ಅವರಿಬ್ಬರನ್ನೂ ಕರೆದೊಯ್ದಿದ್ದಾರೆ. ಮಾರ್ಗ ಮಧ್ಯದಲ್ಲಿ ಮದ್ಯ ಸೇವಿಸಿದ್ದು, ಆಕೆಯ ಸ್ನೇಹಿತನಿಗೂ ಕುಡಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಆಟೋ ಚಾಲಕ ತನ್ನ ಮನೆಯಲ್ಲಿ ಆಕೆಗೆ ಲೈಂಗಿಕ ಕಿರುಕುಳ ನೀಡಿದಾಗ ಆಕೆಯ ಗೆಳೆಯ ಚಾಲಕನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಚಾಲಕ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಇದೊಂದು ಮೆಡಿಕಲ್ ಕೇಸ್ ಆಗಿದ್ದರಿಂದ ಆಸ್ಪತ್ರೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ತಾನು ತೊಂದರೆಗೆ ಸಿಲುಕಬಹುದೆಂಬ ಭಯದಿಂದ ಚಾಲಕ, ಆಟೋ ದರವನ್ನು ಪಾವತಿಸಲು ನಿರಾಕರಿಸಿದಾಗ ಇಬ್ಬರು ಪ್ರಯಾಣಿಕರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಕೊಲೆ ಯತ್ನದ ಸುಳ್ಳು ದೂರು ದಾಖಲಿಸಿದ್ದಾರೆ. ಹೆಚ್ಚಿನ ತನಿಖೆಯಲ್ಲಿ ಆತನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಬಂಧಿಸಲಾಯಿತು. ಚಾಲಕನ ವಿರುದ್ಧ ಮಹಿಳೆ ಲೈಂಗಿಕ ಕಿರುಕುಳ ಪ್ರಕರಣವನ್ನೂ ದಾಖಲಿಸಿದ್ದಾರೆ. ಚಾಲಕನ ವಿರುದ್ಧವೂ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಆಟೋ ಚಾಲಕ
ಬೆಂಗಳೂರು ಮೆಟ್ರೋ ನಿಲ್ದಾಣದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಕೆಂಪು ಅಂಗಿ ಧರಿಸಿದ್ದ ವ್ಯಕ್ತಿಯಿಂದ ಕೃತ್ಯ!

ಆಟೋ ಚಾಲಕ. ಕೆ ರಾಜು, ಜಯನಗರ 6ನೇ ಬ್ಲಾಕ್ ನಿವಾಸಿ. ಮೇ 5 ರಂದು ಮುಂಜಾನೆ ಪಿಲ್ಲಗಾನಹಳ್ಳಿಯ ಚಾಲಕನ ಇನ್ನೊಂದು ಮನೆಯಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು. ಅದೇ ದಿನ ಚಾಲಕ ಸುಳ್ಳು ದೂರು ದಾಖಲಿಸಿದ್ದಾನೆ. ಘಟನೆ ನಡೆದ ನಾಲ್ಕು ದಿನಗಳ ನಂತರ ಮಹಿಳೆ ತನ್ನ ಸ್ನೇಹಿತ ಮೊಹಮ್ಮದ್ ಅನ್ಸಾರ್‌ನನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ ನಂತರ ರಾಜು ವಿರುದ್ಧ ದೂರು ನೀಡಿದ್ದಾಳೆ. ಅನ್ಸಾರ್ ನನ್ನು ಬಂಧಿಸಿದ ನಂತರವಷ್ಟೇ ಆತ ರಾಜುವಿನ ಮೇಲೆ ಹಲ್ಲೆ ನಡೆಸಿದ್ದಕ್ಕೆ ನಿಜವಾದ ಕಾರಣ ಪೊಲೀಸರಿಗೆ ತಿಳಿಯಿತು.

ನಂತರ ಪೊಲೀಸರು ಮಹಿಳೆಯೊಂದಿಗೆ ಮಾತನಾಡಿ ಚಾಲಕನ ವಿರುದ್ಧ ದೂರು ದಾಖಲಿಸುವಂತೆ ತಿಳಿಸಿದ್ದಾರೆ. ಚಾಲಕನ ಮೇಲೆ ಹಲ್ಲೆ ನಡೆಸಿದ ಬಳಿಕ ಇಬ್ಬರು ಸ್ನೇಹಿತರು ತಮ್ಮ ಊರಿಗೆ ಮರಳಿದ್ದರು. ಸಿಸಿಟಿವಿಯಲ್ಲಿ ಅನ್ಸಾರ್ ಚಲನವಲನಗಳನ್ನು ಪತ್ತೆ ಹಚ್ಚಿದಾಗ ಆತನ ಪತ್ತೆಯಾಯಿತು. ಚಿಕಿತ್ಸೆ ಬಳಿಕ ರಾಜು ಅವರನ್ನು ಬಂಧಿಸಲಾಗುವುದು. ಲೈಂಗಿಕ ಕಿರುಕುಳ ಪ್ರಕರಣದ ಹೊರತಾಗಿ, ಸುಳ್ಳು ದೂರು ದಾಖಲಿಸಿದ್ದಕ್ಕಾಗಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com