ಬೆಂಗಳೂರು: ವೀರ್ ಸಾವರ್ಕರ್ ಮೇಲ್ಸೇತುವೆ ಫಲಕಕ್ಕೆ ಮಸಿ ಬಳಿದಿದ್ದ ಮೂವರು NSUI ಕಾರ್ಯಕರ್ತರ ಬಂಧನ

ಯಲಹಂಕದಲ್ಲಿ ಹಿಂದುತ್ವ ಸಿದ್ಧಾಂತವಾದಿ ವೀರ್ ಸಾವರ್ಕರ್ ಅವರ ಹೆಸರಿನ ಮೇಲ್ಸೇತುವೆಯ ಫಲಕಕ್ಕೆ ಕಪ್ಪು ಬಣ್ಣ ಬಳಿದ ಆರೋಪದ ಮೇಲೆ ಮೂವರು ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ (NSUI) ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೀರ ಸಾರ್ವಕರ್ ಮೇಲ್ಸೇತುವೆ
ವೀರ ಸಾರ್ವಕರ್ ಮೇಲ್ಸೇತುವೆPTI
Updated on

ಬೆಂಗಳೂರು: ಯಲಹಂಕದಲ್ಲಿ ಹಿಂದುತ್ವ ಸಿದ್ಧಾಂತವಾದಿ ವೀರ್ ಸಾವರ್ಕರ್ ಅವರ ಹೆಸರಿನ ಮೇಲ್ಸೇತುವೆಯ ಫಲಕಕ್ಕೆ ಕಪ್ಪು ಬಣ್ಣ ಬಳಿದ ಆರೋಪದ ಮೇಲೆ ಮೂವರು ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ (NSUI) ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೀರ್ ಸಾವರ್ಕರ್ ಅವರ ಜನ್ಮದಿನದಂದು ಈ ಘಟನೆ ನಡೆದಿತ್ತು. ಪೊಲೀಸರ ಪ್ರಕಾರ, ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕವಾದ NSUI ಕಾರ್ಯಕರ್ತರು ಫ್ಲೈಓವರ್‌ಗೆ ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಅಲ್ಲದೆ ಫಲಕದಲ್ಲಿದ್ದ ಸಾರ್ವರ್ಕರ್ ಹೆಸರಿಗೆ ಕಪ್ಪು ಮಸಿ ಬಳಿದಿದ್ದು ಜೊತೆಗೆ 'ಭಗತ್ ಸಿಂಗ್ ಫ್ಲೈಓವರ್' ಎಂಬ ಬ್ಯಾನರ್ ಅನ್ನು ಹಾಕಿದರು. ಭಗತ್ ಸಿಂಗ್ ಅವರ ಫೋಟೋಗಳನ್ನು ಹಿಡಿದು 'ಇಂಕ್ವಿಲಾಬ್ ಜಿಂದಾಬಾದ್' ಎಂಬ ಘೋಷಣೆಗಳನ್ನು ಸಹ ಎತ್ತಿದರು.

ಈ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಸಾರ್ವಜನಿಕ ಆಸ್ತಿ ನಷ್ಟ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು ಮೂವರನ್ನು ಬಂಧಿಸಿದ್ದೇವೆ. ಪ್ರತಿಭಟನಕಾರರು ಎನ್‌ಎಸ್‌ಯುಐ ಸ್ಕಾರ್ಫ್‌ಗಳನ್ನು ಧರಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯ ಫಲಕವನ್ನು ಮರುಸ್ಥಾಪಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಹಿಂದಿನ ಬಿಜೆಪಿ ಸರ್ಕಾರವಿದ್ದಾಗ ಕಾಂಗ್ರೆಸ್ ಸೇರಿದಂತೆ ಕೆಲವು ವರ್ಗಗಳ ವಿರೋಧದ ನಡುವೆ ಮೇಲ್ಸೇತುವೆಗೆ ಸಾವರ್ಕರ್ ಹೆಸರನ್ನು ಇಡಲಾಗಿತ್ತು.

ಈ ಘಟನೆ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು 'ಕರ್ನಾಟಕದಲ್ಲಿ @RahulGandhi ಭಾರತ್ ಜೋಡೋ ಯಾತ್ರೆಯಲ್ಲಿ ವೀರ್ ಸಾವರ್ಕರ್ ಅವರ ಫೋಟೋವನ್ನು ಪ್ರದರ್ಶಿಸಲಾಗಿತ್ತು. ಆದರೆ @INCKarnataka ಮತ್ತು ಅದರ ಅಂಗಸಂಸ್ಥೆಗಳು ಬೆಂಗಳೂರಿನ ವೀರ್ ಸಾವರ್ಕರ್ ಮೇಲ್ಸೇತುವೆಯ ಫಲಕವನ್ನು ವಿರೂಪಗೊಳಿಸುವ ಮೂಲಕ ವೀರ್ ಸಾವರ್ಕರ್ ಅವರನ್ನು ಅವಹೇಳನ ಮಾಡುವುದನ್ನು ಮುಂದುವರೆಸಿದೆ ಎಂದು ಕಿಡಿಕಾರಿದ್ದಾರೆ.

ವೀರ ಸಾರ್ವಕರ್ ಮೇಲ್ಸೇತುವೆ
ಮಂಗಳೂರಿನಲ್ಲಿ ರಸ್ತೆ ಮಧ್ಯೆ ನಮಾಜ್: ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com