ಮಾಧ್ಯಮಗಳಲ್ಲಿ ದಯವಿಟ್ಟು ಅವರ ಬಗ್ಗೆ ನಕಾರಾತ್ಮಕ ಪ್ರಚಾರ ಮಾಡಬೇಡಿ: ಪ್ರಜ್ವಲ್ ಪರ ವಕೀಲರ ಮನವಿ
ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಂಧಿತರಾಗಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ತನಿಖೆ ಹಂತದಲ್ಲಿದ್ದು ಯಾವುದೇ ರೀತಿಯಲ್ಲಿ ನಕಾರಾತ್ಮಕ ಪ್ರಚಾರ ಮಾಡಬೇಡಿ ಎಂದು ಅವರ ಪರ ವಕೀಲರು ಮಾಧ್ಯಮ ಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿ ಬೆಂಗಳೂರಿನ ಸಿಐಡಿ ಕಚೇರಿಗೆ ಕರೆತರಲಾಗಿತ್ತು.
ಈ ಬಗ್ಗೆ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಪ್ರಜ್ವಲ್ ಪರ ವಕೀಲ ಅರುಣ್, 'ಅನವಶ್ಯಕವಾಗಿ ಯಾವುದೇ ಋಣಾತ್ಮಕ ಪ್ರಚಾರ ಬೇಡ. ಪ್ರಜ್ವಲ್ ರೇವಣ್ಣ ಅವರು ಎಸ್‌ಐಟಿಗೆ ಸಹಕರಿಸಲು ಮುಂದಾಗಿದ್ದಾರೆ. ಎಸ್‌ಐಟಿಗೂ ಮುನ್ನ ಬೆಂಗಳೂರಿಗೆ ಬಂದಿರುವ ಅವರ ಸಂಪೂರ್ಣ ಉದ್ದೇಶ ತಮ್ಮ ಮಾತಿಗೆ ಬದ್ಧವಾಗಿರಬೇಕು ಎಂಬುದು, ಅವರು ತನಿಖೆಗೆ ಸಂಪೂರ್ಣ ಸಹಕರಿಸುತ್ತಾರೆ ಎಂದರು.
ನಿನ್ನೆ, ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಪ್ರಕಾರ, ಅವರನ್ನು ವಲಸೆ ಕೇಂದ್ರದಲ್ಲಿ ಇರಿಸಲಾಯಿತು. ಕಾರ್ಯವಿಧಾನದ ಪ್ರಕಾರ ಸರಿಯಾಗಿ ತನಿಖಾ ಸಂಸ್ಥೆಗಳಿಗೆ ಅವರನ್ನು ಹಸ್ತಾಂತರಿಸಲಾಗಿದೆ. ಹೊಳೆನರಸೀಪುರ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ನನಗೆ ತಿಳಿಸಲಾಗಿದೆ. ಇದು ಮೊದಲ ಪ್ರಕರಣ ಎಂದರು.
ಪ್ರಜ್ವಲ್ ರನ್ನು ಬಂಧಿಸಿದ 24 ಗಂಟೆಯೊಳಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವ ನಿರೀಕ್ಷೆಯಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ