ಮಂಗಳೂರು: ಇ-ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿಗೆ ವಂಚನೆ; ಇಬ್ಬರ ಬಂಧನ

ಬಂಧಿತ ಆರೋಪಿಗಳಾದ ರಾಜಸ್ಥಾನದ ರಾಜ್ ಕುಮಾರ್ ಮೀನಾ (23) ಮತ್ತು ಸುಭಾಷ್ ಗುರ್ಜರ್ (27) ಅವರು ತಮಿಳುನಾಡು, ಕೇರಳ, ಅಸ್ಸಾಂ, ಕರ್ನಾಟಕ, ದೆಹಲಿ, ಉತ್ತರ ಪ್ರದೇಶ ಸೇರಿದಂತೆ 10 ರಾಜ್ಯಗಳಲ್ಲಿ ದೊಡ್ಡ ಪ್ರಮಾಣದ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
Accused
ಬಂಧಿತ ಆರೋಪಿಗಳು
Updated on

ಮಂಗಳೂರು: ದೇಶಾದ್ಯಂತ ಇ-ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿಗೆ ವಂಚಿಸಿದ ಆರೋಪಿಗಳಿಬ್ಬರನ್ನು ಬಂಧಿಸುವ ಮೂಲಕ ಮಂಗಳೂರು ಪೊಲೀಸರು ಬಹು ರಾಜ್ಯ, ಬಹುಕೋಟಿ ವಂಚನೆಯ ಜಾಲವೊಂದನ್ನು ಪತ್ತೆ ಹಚ್ಚಿದ್ದಾರೆ.

ಬಂಧಿತ ಆರೋಪಿಗಳಾದ ರಾಜಸ್ಥಾನದ ರಾಜ್ ಕುಮಾರ್ ಮೀನಾ (23) ಮತ್ತು ಸುಭಾಷ್ ಗುರ್ಜರ್ (27) ಅವರು ತಮಿಳುನಾಡು, ಕೇರಳ, ಅಸ್ಸಾಂ, ಕರ್ನಾಟಕ, ದೆಹಲಿ, ಉತ್ತರ ಪ್ರದೇಶ ಸೇರಿದಂತೆ 10 ರಾಜ್ಯಗಳಲ್ಲಿ ದೊಡ್ಡ ಪ್ರಮಾಣದ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪಿಗಳ ಬಂಧನ ಮಹತ್ವದ ಕಾರ್ಯಾಚರಣೆಯಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿದ್ದಾರೆ. ಈ ಕುರಿತು ನಗರದ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಗರಣದಲ್ಲಿ 11. 45 ಲಕ್ಷ ರೂಪಾಯಿ ಮೌಲ್ಯದ ಆರ್ಡರ್‌ಗಳು ನಕಲಿ ಎಂದು ಗುರುತಿಸಲಾಗಿದೆ.

ಮಂಗಳೂರಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಕಾಲ್ಪನಿಕ ವಿಳಾಸ ನೀಡಿ ಎರಡು ಅಧಿಕ ಮೌಲ್ಯದ ಕ್ಯಾಮೆರಾ ಮತ್ತಿತರ ವಸ್ತುಗಳಿಗೆ ಆರ್ಡರ್ ನೀಡಲು ಅಮಿತ್ ಎಂಬ ಹೆಸರನ್ನು ಆರೋಪಿಗಳು ಬಳಸುತ್ತಿದ್ದರು. ಡೆಲಿವರಿ ಆದ ಮೇಲೆ, ಮೀನಾ ಅವರು ವಸ್ತುಗಳನ್ನು ಸಂಗ್ರಹಿಸಿ ಒಟಿಪಿ ನೀಡಿದರೆ ಗುರ್ಜರ್ ಡೆಲಿವರಿ ಸಿಬ್ಬಂದಿಯನ್ನು ತಬ್ಬಿಬ್ಬುಗೊಳಿಸಿದರು. ನಂತರ ಅವರು ಸೋನಿ ಕ್ಯಾಮೆರಾ ಬಾಕ್ಸ್‌ಗಳಲ್ಲಿನ ಟ್ರ್ಯಾಕಿಂಗ್ ಲೇಬಲ್​ಗಳನ್ನು ತಪ್ಪಾದ OTPಯಿಂದ ಡೆಲಿವರಿ ವಿಳಂಬ ಖಚಿತವಾದ ಅದೇ ರೀತಿಯ ಕಡಿಮೆ ಬೆಲೆಯ ವಸ್ತುಗಳ ಬಾಕ್ಸ್​​ ಮೇಲೆ ಹಚ್ಚಿದ್ದರು.

ಹೀಗೆ ದುಬಾರಿ ಬೆಲೆಯ ವಸ್ತುಗಳನ್ನು ತಮ್ಮಲ್ಲೇ ಇಟ್ಟುಕೊಂಡು ವಂಚಿಸುತ್ತಿದ್ದರು.ದುಬಾರಿ ಬೆಲೆಯ ವಸ್ತುಗಳನ್ನು ಸೆಕೆಂಡ್ ಹ್ಯಾಂಡ್​ಗೆ ಮಾರಾಟ ಮಾಡುತ್ತಿದ್ದರು. ಐಟಂ ರಿಟರ್ನ್ ಆದ ಬಳಿಕ ಆರ್ಡರ್​ಗೆ ಬಳಸಿದ ಸಿಮ್ ಕಿತ್ತೆಸೆಯುತ್ತಿದ್ದರು. ವಸ್ತು ಅಮೇಜಾನ್ ಗೋಡಾನ್ ತಲುಪಿದ ಬಳಿಕ ವಂಚನೆ ಬೆಳಕಿಗೆ ಬರುತ್ತಿತ್ತು.

ನಂತರ ಆರೋಪಿಗಳು ಕ್ಯಾಮೆರಾ ಆರ್ಡರ್ ರದ್ದುಗೊಳಿಸಿದಾಗ ಅನುಮಾನ ಹುಟ್ಟಿಕೊಂಡಿದ್ದು, ಅಮೆಜಾನ್ ನ ವಿತರಣಾ ಪಾಲುದಾರರು ಬಾಕ್ಸ್‌ಗಳನ್ನು ಪರೀಕ್ಷಿಸಿದ್ದು, ಸ್ಟಿಕ್ಕರ್ ಅದಲು ಬದಲು ಆಗಿರುವುದು ಬಯಲಾಗಿದೆ. ಆರೋಪಿಗಳು ಕ್ಯಾಮೆರಾಗಳನ್ನು ತೆಗೆದುಕೊಂಡು ಹೋಗಿದ್ದು, ತಿರುಚಿದ ಬಾಕ್ಸ್‌ಗಳನ್ನು ಬಿಟ್ಟು ಹೋಗಿರುವುದು ತನಿಖೆಯಿಂದ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆ ಕೈಗೊಂಡ ಉರ್ವ ಪೊಲೀಸರು ವಂಚನೆಯಿಂದ ಸಂಪಾದಿಸಿದ 11.45 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ರೋಪಿ ಮೀನಾ ಅವರನ್ನು ಅಕ್ಟೋಬರ್ 18 ರಂದು ಉರ್ವಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಅವರ ವಿಚಾರಣೆ ನಂತರ ಅಕ್ಟೋಬರ್ 28 ರಂದು ಗುರ್ಜರ್ ಅವರನ್ನು ಮಂಗಳೂರಿನಲ್ಲಿ ಬಂಧಿಸಲಾಯಿತು. ಇವರಿಬ್ಬರೂ ಅಸ್ಸಾಂ, ಒಡಿಶಾ, ಮಹಾರಾಷ್ಟ್ರ ಮತ್ತು ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಆರೋಪಗಳನ್ನು ಎದುರಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com