ಕಾರ್‌ಪೂಲಿಂಗ್‌: ಮಾರ್ಗಸೂಚಿ ತರಲು ಕೇಂದ್ರದ ನೀತಿಗಾಗಿ ಕಾಯುತ್ತಿರುವ ರಾಜ್ಯ ಸರ್ಕಾರ

ಕಾರ್‌ಪೂಲಿಂಗ್ ಉದ್ದೇಶಕ್ಕಾಗಿ ಮೊಬೈಲ್ ಅಪ್ಲಿಕೇಶನ್‌ಗಳ ಬಳಕೆಯ ಮೇಲೆ ನಿಷೇಧ ಹೇರಲು ಸಾರಿಗೆ ಇಲಾಖೆ ಸಜ್ಜಾಗುತ್ತಿದೆಯಾದರೂ ಈ ಸಂಬಂಧ ಕೇಂದ್ರ ಸರ್ಕಾರ ಯಾವುದೇ ಮಾರ್ಗಸೂಚಿ ಹೊರಡಿಸದೇ ಇರುವುದು ಗೊಂದಲಕ್ಕೆ ಕಾರಣವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬೆಂಗಳೂರಿನಲ್ಲಿ ಕಾರ್‌ಪೂಲಿಂಗ್‌ಗೆ ತನ್ನದೇ ಆದ ಮಾರ್ಗಸೂಚಿಯನ್ನು ರೂಪಿಸಬೇಕಿದ್ದ ರಾಜ್ಯ ಸಾರಿಗೆ ಇಲಾಖೆ ಈ ಸಂಬಂಧ ಕೇಂದ್ರ ಸರ್ಕಾರದ ನೀತಿಗಾಗಿ ಕಾಯುತ್ತಿದ್ದು, ಇನ್ನೂ ಮಾರ್ಗಸೂಚಿಗಳನ್ನು ಸಿದ್ಧಪಡಿಸಿಲ್ಲ.

ಕಾರ್‌ಪೂಲಿಂಗ್ ಉದ್ದೇಶಕ್ಕಾಗಿ ಮೊಬೈಲ್ ಅಪ್ಲಿಕೇಶನ್‌ಗಳ ಬಳಕೆಯ ಮೇಲೆ ನಿಷೇಧ ಹೇರಲು ಸಾರಿಗೆ ಇಲಾಖೆ ಸಜ್ಜಾಗುತ್ತಿದೆಯಾದರೂ ಈ ಸಂಬಂಧ ಕೇಂದ್ರ ಸರ್ಕಾರ ಯಾವುದೇ ಮಾರ್ಗಸೂಚಿ ಹೊರಡಿಸದೇ ಇರುವುದು ಗೊಂದಲಕ್ಕೆ ಕಾರಣವಾಗಿದೆ.

ಖಾಸಗಿ ಟ್ಯಾಕ್ಸಿ ಮತ್ತು ಆಟೋ ಚಾಲಕರಿಂದ ಪದೇ ಪದೇ ದೂರುಗಳು ಬರುತ್ತಿದ್ದು, ಕಾರ್‌ಪೂಲಿಂಗ್‌ನಲ್ಲಿ ತೊಡಗಿರುವ ವಾಣಿಜ್ಯೇತರ (ವೈಟ್‌ಬೋರ್ಡ್) ವಾಹನಗಳು ತಮ್ಮ ಆದಾಯವನ್ನು ಕಸಿದುಕೊಳ್ಳುತ್ತಿವೆ ಮತ್ತು ಇದು 'ಅಕ್ರಮ'ವಾಗಿದೆ. ನಮ್ಮ ನ್ಯಾಯಯುತ ಆದಾಯವನ್ನು ಕಸಿದುಕೊಳ್ಳುತ್ತಿದೆ. ನಾವು ತೆರಿಗೆ, ವಿಮೆ ಹಾಗೂ ಇತರೆ ವೆಚ್ಚಗಳನ್ನು ಪಾವತಿಸುತ್ತಿದ್ದು, ಕಾರ್ ಪೂಲಂಗ್ ಮೇಲೆ ನಿಷೇಧ ಹೇರಬೇಕೆಂದು ಆಗ್ರಹಿಸಿದ್ದರು. ಅಲ್ಲದೆ, ಪ್ರತಿಭಟನೆಗಿಳಿದಿದ್ದರು. ಆದರೆ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವರು ಕಾರ್ ಪೂಲಿಂಗ್'ಗೆ ಬೆಂಬಲ ವ್ಯಕ್ತಪಡಿಸಿದ್ದರು.

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ದೂರಾಗಿಸಲು ಕಾರ್‌ಪೂಲಿಂಗ್ ಅತ್ಯುತ್ತಮ ಪರಿಹಾರವಾಗಿದೆ. ಅಸ್ತಿತ್ವದಲ್ಲಿರುವ ಕಾನೂನಿಗೆ ಅಗತ್ಯ ತಿದ್ದುಪಡಿಗಳನ್ನು ಮಾಡುವ ಮೂಲಕ ಈ ಚಿಂತನೆಗಳಿಗೆ ಪ್ರೋತ್ಸಾಹ ನೀಡಬೇಕಿದೆ ಎಂದು ಹೇಳಿದ್ದರು.

ಸಾಂದರ್ಭಿಕ ಚಿತ್ರ
ಕಾರ್ ಪೂಲಿಂಗ್ ವಿವಾದ: ತೇಜಸ್ವಿ ಸೂರ್ಯ ಕ್ಷಮೆಯಾಚಿಸುವಂತೆ ಖಾಸಗಿ ಸಾರಿಗೆ ಸಂಘಟನೆಗಳ ಆಗ್ರಹ

ಕಾರ್ ಪೂಲಿಂಗ್ ಗಾಗಿ ಮಾರ್ಗಸೂಚಿ ಹೊರಡಿಸಲು ಚಿಂತನೆ ನಡೆಸುತ್ತಿದ್ದೇವೆ. ಆದರೆ, ಕೇಂದ್ರ ಸರ್ಕಾರ ಮಾರ್ಗಸೂಚಿಗಾಗಿ ಕಾಯುತ್ತಿದ್ದೇವೆ. ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದ ಕೂಡಲೇ ನಾವು ನಮ್ಮ ರಾಜ್ಯದಲ್ಲೂ ಮಾರ್ಗಸೂಚಿ ಹೊರಡಿಸುತ್ತೇವೆಂದು ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿವಿಧ ಆ್ಯಪ್‌ಗಳನ್ನು ಬಳಸಿಕೊಂಡು ಕಾರ್ ಪೂಲಿಂಗ್ ಬಳಸುತ್ತಿರುವವರು ಹಣವನ್ನು ಉಳಿತಾಯ ಮಾಡಲು ಇದು ಸಹಾಯಕವಾಗಿದೆ ಎಂದು ತಿಳಿಸಿದ್ದಾರೆ.

ಆದಾಗ್ಯೂ ಸಾರಿಗೆ ಇಲಾಖೆ ಅಧಿಕಾರಿಗಳು ವಿವಿಧ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಬಳಸಿಕೊಂಡು ಕಾರ್‌ಪೂಲಿಂಗ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಮುಂದುವರೆಸಿದ್ದಾರೆ.

ಏನಿದು ಕಾರ್​ಪೂಲಿಂಗ್..?

ಕಾರ್ ಪೂಲಿಂಗ್ ಬೆಂಗಳೂರು, ಮುಂಬೈ ಇತ್ಯಾದಿ ನಗರಗಳಲ್ಲಿ ಟ್ರೆಂಡ್​ನಲ್ಲಿದೆ. ಅದರಲ್ಲೂ ನಿತ್ಯ ಕಚೇರಿಗಳಿಗೆ ಕಾರಿನಲ್ಲಿ ಹೋಗುವ ಉದ್ಯೋಗಿಗಳಲ್ಲಿ ಇದು ಜನಪ್ರಿಯವಾಗಿದೆ. ಒಂದು ಕಾರಿನಲ್ಲಿ ಒಬ್ಬ ವ್ಯಕ್ತಿ ಮಾತ್ರ ಹೋಗುವ ಬದಲು ಅದೇ ಮಾರ್ಗದಲ್ಲಿ ಇತರರನ್ನೂ ಜೊತೆಗೆ ಸೇರಿಸಿಕೊಂಡು ಕರೆದೊಯ್ಯಬಹುದು. ಇದರಿಂದ ರಸ್ತೆಗಿಳಿಯುವ ವಾಹನಗಳ ಸಂಖ್ಯೆ ಕಡಿಮೆ ಆಗುತ್ತದೆ, ಪೆಟ್ರೋಲ್ ವೆಚ್ಚ ತಗ್ಗುತ್ತದೆ. ಐಟಿ ವಲಯದಲ್ಲಿ ಈ ಕಾರ್ ಪೂಲಿಂಗ್ ಬಹಳ ಜನಪ್ರಿಯವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com