ಸರ್ಕಾರದ ಗಮನ ಸೆಳೆದಿದ್ದೇ ತಪ್ಪಾ?; ನನ್ನ ಧ್ವನಿ ಹತ್ತಿಕ್ಕುವ ಯತ್ನ: FIR ಬಗ್ಗೆ ತೇಜಸ್ವಿ ಸೂರ್ಯ ಪ್ರತಿಕ್ರಿಯೆ

ಪೊಲೀಸ್ ಇಲಾಖೆಗೆ ಗೌರವ ನೀಡಿ ನನ್ನ ಟ್ವೀಟ್‌ ತೆಗೆದಿದ್ದೇನೆ. ಆದರೆ ಇದರ ಹಿಂದೆ ಪ್ರಕರಣವನ್ನು ಮುಚ್ಚಿ ಹಾಕುವ ಷಡ್ಯಂತ್ರ ನಡೆಯುತ್ತಿದೆ" ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.
Tejasvi Surya
ತೇಜಸ್ವಿ ಸೂರ್ಯonline desk
Updated on

ಶಿಗ್ಗಾವಿ: ಹಾವೇರಿ ಜಿಲ್ಲೆಯ ರೈತರೊಬ್ಬರ ಆತ್ಮಹತ್ಯೆ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಕ್ಕಾಗಿ ತಮ್ಮ ವಿರುದ್ಧ FIR ದಾಖಲಾಗಿರುವುದರ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಹಾವೇರಿಯ ಶಿಗ್ಗಾವಿ ತಾಲೂಕಿನ ತಡಸ ಗ್ರಾಮದಲ್ಲಿ ಉಪಚುನಾವಣೆ ಪ್ರಚಾರದಲ್ಲಿ ಭಾಗಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಂಸದ ತೇಜಸ್ವಿ ಸೂರ್ಯ, ನಿನ್ನೆ ಜೆಪಿಸಿ ಬಂದಾಗ ಹಾವೇರಿಯ ರೈತನ ಅಹವಾಲು ಪಡೆದೆವು. ಅದರಲ್ಲಿ ರೈತನ ಜಮೀನು ವಕ್ಫ್​​ ಎಂದು ಬದಲಾಯಿಸಿದ ಕಾರಣ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿತ್ತು. ಮಾಧ್ಯಮಗಳಲ್ಲೂ ಈ ಬಗ್ಗೆ ವರದಿ ಬಂದಿದೆ.‌ ರೈತನ ಕುಟುಂಬಸ್ಥರು ಕೂಡಾ ಮಾಧ್ಯಮದೆದುರು ಮಾತನಾಡಿದ್ದು ಪ್ರಸಾರವಾಗಿದೆ. ಇದ್ಯಾವುದೋ ಕಾಲ್ಪನಿಕ, ಕಾದಂಬರಿ ಬರೆದಿರುವುದಲ್ಲ. ರೈತರ ಕುಟುಂಬದವರು ಬಂದು ಮನವಿ ಕೊಟ್ಟ ಬಳಿಕ ಮಾಧ್ಯಮದವರು ಈ ಬಗ್ಗೆ ಬರೆದಿದ್ದಾರೆ. ಅವರ ಸಂದರ್ಶನ ಪ್ರಸಾರವಾಗಿದೆ" ಎಂದು ಹೇಳಿದ್ದಾರೆ.

Tejasvi Surya
ನಕಲಿ ಸುದ್ದಿ ಹರಡಿದ ಆರೋಪ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಕನ್ನಡ ಸುದ್ದಿ ಪೋರ್ಟಲ್ ಗಳ ಸಂಪಾದಕರ ವಿರುದ್ಧ ಕೇಸು ದಾಖಲು

ಇಷ್ಟೆಲ್ಲಾ ಆಗಿಯೂ ಕೂಡ ಪೊಲೀಸ್​ ವ್ಯವಸ್ಥೆಯಿಂದ ಟ್ವೀಟ್​ ಬಂದ ಕಾರಣ, ಪೊಲೀಸ್ ಇಲಾಖೆಗೆ ಗೌರವ ನೀಡಿ ನನ್ನ ಟ್ವೀಟ್‌ ತೆಗೆದಿದ್ದೇನೆ. ಆದರೆ ಇದರ ಹಿಂದೆ ಪ್ರಕರಣವನ್ನು ಮುಚ್ಚಿ ಹಾಕುವ ಷಡ್ಯಂತ್ರ ನಡೆಯುತ್ತಿದೆ" ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.

ಮೃತ ರೈತನ ಕುಟುಂಬದವರು ಜೆಪಿಸಿ ಎದುರು ನೀಡಿದ್ದ ಅಹವಾಲನ್ನು ಉಲ್ಲೇಖಿಸಿ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದ್ದೆ, ಆದರೆ ಸರ್ಕಾರ ನನ್ನ ಧ್ವನಿ ಹತ್ತಿಕ್ಕಲು, ನನ್ನ ವಿರುದ್ಧವೇ ಎಫ್​ಐಆರ್ ಹಾಕಿದೆ ಸರ್ಕಾರದ ಗಮನ ಸೆಳೆದಿದ್ದೇ ತಪ್ಪಾ? ಎಂದು ತೇಜಸ್ವಿ ಸೂರ್ಯ ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com