ಕಲಬುರಗಿಯಲ್ಲಿ ರಸ್ತೆ ಅಪಘಾತ: ಹೈದರಾಬಾದ್ ಮೂಲದ ಮೂವರು ಸೇರಿ ನಾಲ್ವರು ಸಾವು

ಮೃತರನ್ನು ಹೈದರಾಬಾದ್ ಮೂಲದ ಭಾರ್ಗವ್ ಕೃಷ್ಣ (55ವ), ಅವರ ಪತ್ನಿ ಸಂಗೀತ (45ವ) ಮತ್ತು ಅವರ ಮಗ ಉತ್ತಮ್ ರಾಘವನ್ (28ವ) ಎಂದು ಗುರುತಿಸಲಾಗಿದ್ದು, ಮೃತ ಕಾರು ಚಾಲಕನ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Representational image
ಸಾಂಕೇತಿಕ ಚಿತ್ರ
Updated on

ಕಲಬುರಗಿ: ಇಲ್ಲಿನ ಕಮಲಾಪುರ ತಾಲೂಕಿನ ಮರಗುತ್ತಿ ಕ್ರಾಸ್ ಬಳಿ ಶನಿವಾರ ಬೆಳಗಿನ ಜಾವ ಪಿಕಪ್ ಗೂಡ್ಸ್ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಹೈದರಾಬಾದ್ ಮೂಲದ ಭಾರ್ಗವ್ ಕೃಷ್ಣ (55 ವ), ಅವರ ಪತ್ನಿ ಸಂಗೀತ (45 ವ) ಮತ್ತು ಅವರ ಮಗ ಉತ್ತಮ್ ರಾಘವನ್ (28 ವ) ಎಂದು ಗುರುತಿಸಲಾಗಿದ್ದು, ಮೃತ ಕಾರು ಚಾಲಕನ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಕುಟುಂಬವು ಅಫಜಲಪುರ ತಾಲೂಕಿನ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ.

ಕಮಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಥಳಕ್ಕೆ ಕಮಲಾಪುರ ಸಿಪಿಐ ಭೇಟಿ ನೀಡಿ ಪರೀಶಿಲನೆ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com