'ಗ್ಯಾರಂಟಿ' ಸಂಕಷ್ಟ: ಯೋಜನೆಗಳ ಮರುಪರಿಶೀಲನೆಗೆ ಸರ್ಕಾರ ಚಿಂತನೆ; ಮುಂಬರುವ ಬಜೆಟ್‍ನಲ್ಲಿ ಅನುದಾನ ಕಡಿತ?

ಕಳೆದ ಬಜೆಟ್‌ನಲ್ಲಿ ಗೃಹ ಜ್ಯೋತಿ, ಗೃಹಲಕ್ಷ್ಮಿ, ಅನ್ನ ಭಾಗ್ಯ, ಶಕ್ತಿ ಮತ್ತು ಯುವ ನಿಧಿ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ 57 ಸಾವಿರ ರೂ. ಮೀಸಲಿಟ್ಟಿತ್ತು.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸಂಕಷ್ಟ ಹೆಚ್ಚಾಗ ತೊಡಗಿದ್ದು, ಈ ಹಿನ್ನೆಲೆಯಲ್ಲಿ ಯೋಜನೆಗಳ ಮರುಪರಿಶೀಲನೆ ನಡೆಸಿ, ಮುಂಬರುವ ಬಜೆಟ್ ನಲ್ಲಿ ಅನುದಾನ ಕಡಿತಗೊಳಿಸಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಕಳೆದ ಬಜೆಟ್‌ನಲ್ಲಿ ಗೃಹ ಜ್ಯೋತಿ, ಗೃಹಲಕ್ಷ್ಮಿ, ಅನ್ನ ಭಾಗ್ಯ, ಶಕ್ತಿ ಮತ್ತು ಯುವ ನಿಧಿ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ 57 ಸಾವಿರ ರೂ. ಮೀಸಲಿಟ್ಟಿತ್ತು. ಈ ಅನುದಾನ ಈ ಬಾರಿಯ ಬಜೆಟ್ ನಲ್ಲಿ 52,000 ಕೋಟಿ ರೂ.ಗೆ ಇಳಿಕೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಯೋಜನೆಗಳ ಅನುಷ್ಠಾನ ಮೇಲ್ವಿಚಾರಣೆಗೆ ಸರ್ಕಾರ ಈಗಾಗಲೇ ಸಮಿತಿಯನ್ನು ರಚಿಸಿದ್ದು, ಮಾಜಿ ಸಚಿವ ಹೆಚ್ ಎಂ ರೇವಣ್ಣ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಮೆಹರುಜ್ ಖಾನ್, ಎಸ್ ಆರ್ ಪಾಟೀಲ್, ಪುಷ್ಪಾ ಅಮರನಾಥ್ ಮತ್ತು ಸೂರಜ್ ಹೆಗ್ಡೆ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಿದೆ.

ಸರ್ಕಾರದ ಚಿಂತನೆ ಕುರಿತು ಪ್ರತಿಕ್ರಿಯೆ ನೀಡಿರುವ ರೇವಣ್ಣ ಅವರು, ಪ್ರತಿ ಜಿಲ್ಲೆಯಲ್ಲಿ 60-70 ಜನರನ್ನೊಳಗೊಂಡ ತಂಡವು ಮನೆ-ಮನೆಗೆ ತೆರಳಿ ಸಮೀಕ್ಷೆ ನಡೆಸುತ್ತಿದೆ, ಜನರಿಂದ ಪ್ರತಿಕ್ರಿಯೆ ಪಡೆಯುತ್ತಿದೆ. ಯೋಜನೆಯಿಂದ ಪ್ರಯೋಜನಗಳನ್ನು ಪಡೆಯುತ್ತಿರುವವರ ಮಾಹಿತಿ ಪಡೆಯುತ್ತದೆ. ಜನರ ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿಯಲು ಇದು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಸರ್ಕಾರದ ಈ ನಡೆ ಫಲಾನುಭವಿಗಳ ಸಂಖ್ಯೆ ಕಡಿಮೆ ಮಾಡುವ ಉದ್ದೇಶವನ್ನು ಹೊಂದಿಲ್ಲ. ಆದರೆ, ಭವಿಷ್ಯದಲ್ಲಿ ಯೋಜನೆಗ ಉತ್ತಮ ಅನುಷ್ಠಾನಕ್ಕಾಗಿ ಹಣಕಾಸು ಇಲಾಖೆ ಮತ್ತು ಮುಖ್ಯಮಂತ್ರಿಗಳು ಅನುದಾನ ಹಂಚಿಕೆಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

File photo
ಗ್ಯಾರಂಟಿ ಯೋಜನೆ ಜಟಾಪಟಿ: ರಾಜಕೀಯ ಪುಡಾರಿ ರೀತಿ ಸುಳ್ಳು ಆರೋಪ ಮಾಡುತ್ತಿರುವುದು ವಿಷಾದನೀಯ; ಪ್ರಧಾನಿ ಮೋದಿ ವಿರುದ್ಧ ಸಿದ್ದು, ಖರ್ಗೆ ಕಿಡಿ

ಯೋಜನೆಗಳಿಗೆ ಸರ್ಕಾರ ಈ ಬಾರಿ 50,000 ಕೋಟಿ ರೂಪಾಯಿಗಳನ್ನು ವಿನಿಯೋಗಿಸುವ ಸಾಧ್ಯತೆಯಿದ್ದು, ಅನುದಾನವು 55,000 ಕೋಟಿ ರೂಪಾಯಿಗಳನ್ನು ಮೀರುವ ಸಾಧ್ಯತೆಯಿಲ್ಲ. ಏಕೆಂದರೆ, ಯೋಜನೆ ಅನುಷ್ಠಾನದ ಸಮಯದಲ್ಲಿ ಜಿಎಸ್‌ಟಿ ದೋಷಗಳು ಮತ್ತು ಕೆಲ ಮಾಹಿತಿಯಲ್ಲಿ ವ್ಯತ್ಯಾಸಗಳು ಕಂಡು ಬಂದಿತ್ತು. ಈ ಬಗ್ಗೆ ಇತ್ತೀಚೆಗೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿಗಳು ಚರ್ಚೆ ನಡೆಸಿದ್ದರು ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.

ಸಮಿತಿಯ ಅಂಕಿಅಂಶಗಳ ಪ್ರಕಾರ, ಯೋಜನೆಯನ್ನು ಪ್ರಾರಂಭಿಸಿದಾಗ ಮೊದಲ ಹಂತದಲ್ಲಿ 37,000 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿತ್ತು. ಈ ಹಣಕಾಸು ವರ್ಷದಲ್ಲಿ ಗೃಹ ಲಕ್ಷ್ಮಿ ಯೋಜನೆಯಡಿ 1.22 ಕೋಟಿ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಆಗಸ್ಟ್‌ವರೆಗೆ 30,285 ಕೋಟಿ ರೂಗಳನ್ನು ವ್ಯಯಿಸಲಾಗಿದೆ.

ಗೃಹ ಜ್ಯೋತಿ ಯೋಜನೆಗಾಗಿ 1.61 ಕೋಟಿ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಸೆಪ್ಟೆಂಬರ್‌ವರೆಗೆ 10,259 ಕೋಟಿ ರೂ ವ್ಯಯಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಜುಲೈವರೆಗೆ 51.39 ಕೋಟಿ ಫಲಾನುಭವಿಗಳಿಗೆ 8,433 ಕೋಟಿ ರೂ., ಶಕ್ತಿ ಯೋಜನೆಗೆ ಅಕ್ಟೋಬರ್ ಅಂತ್ಯದವರೆಗೆ 321 ಕೋಟಿ ರೂ. ಮತ್ತು ಯುವನಿಧಿಗೆ 177 ಲಕ್ಷ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್‌ವರೆಗೆ 650 ಕೋಟಿ ರೂ. ವ್ಯಯಿಸಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com