ಮಂಗಳೂರು: ಪತ್ನಿ, ಮಗನನ್ನು ಕೊಂದು ಪತಿ ಆತ್ಮಹತ್ಯೆಗೆ ಶರಣು

ಕಾರ್ತಿಕ್ ಭಟ್(32) ಎಂಬುವವರು ತಮ್ಮ ಪತ್ನಿ ಪ್ರಿಯಾಂಕಾ(28) ಹಾಗೂ ನಾಲ್ಕು ವರ್ಷದ ಪುತ್ರ ಹೃದಯ್ ನನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಪಕ್ಷಿಕೆರೆ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಮಗನನ್ನು ಚೂರಿಯಿಂದ ಇರಿದು ಕೊಂದು ಬಳಿಕ ತಾನೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.

ಕಾರ್ತಿಕ್ ಭಟ್(32) ಎಂಬುವವರು ತಮ್ಮ ಪತ್ನಿ ಪ್ರಿಯಾಂಕಾ(28) ಹಾಗೂ ನಾಲ್ಕು ವರ್ಷದ ಪುತ್ರ ಹೃದಯ್ ನನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೌಟುಂಬಿಕ ಸಮಸ್ಯೆಯಿಂದ ಪತ್ನಿ ಮತ್ತು ಮಗನನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಮುಲ್ಕಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸಾಂದರ್ಭಿಕ ಚಿತ್ರ
ಗದಗ: ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಸಹಕಾರಿ ಬ್ಯಾಂಕ್​ನಲ್ಲಿ ಉದ್ಯೋಗ ಮಾಡಿಕೊಂಡಿದ್ದ ಕಾರ್ತಿಕ್ ಭಟ್​ ಅವರು ನಿನ್ನೆಯೇ ಪತ್ನಿ, ಮಗನನ್ನು ಕೊಂದು ಬಳಿಕ ತಾನೂ ಮುಲ್ಕಿ ಹೊರವಲಯದ ಬೆಳ್ಳಾಯುರುವಿನಲ್ಲಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೈಲ್ವೆ ಪೊಲೀಸರು ಕಾರ್ತಿಕ್ ಮನೆ ವಿಳಾಸ ಹುಡುಕಿಕೊಂಡು ಅವರ ಫ್ಲ್ಯಾಟ್ ಗೆ ಬಂದಾರ ಪತ್ನಿ, ಪುತ್ರನ ಶವ ಪತ್ತೆ ಆಗಿದೆ.

ಸೊಸೆ ಮತ್ತು ಮೊಮ್ಮಗನ ಮೃತದೇಹ ಮನೆಯಲ್ಲಿದ್ದರೂ ವೃದ್ಧ ಅತ್ತೆ ಮಾವನಿಗೆ ಗೊತ್ತೆ ಆಗಿಲ್ಲ. ಕಾರ್ತಿಕ್ ಪತ್ನಿಗೆ ತನ್ನ ಮಾವ ಅತ್ತೆಯೊಂದಿಗೆ ಮನಸ್ತಾಪವಿದ್ದ ಮಾಹಿತಿ ಇದೆ. ಮನೆಯ ಕೋಣೆಯಲ್ಲಿ ಮತೃ ಕಾರ್ತಿಕ್ ಕುಟುಂಬ ಪ್ರತ್ಯೇಕವಾಗಿದ್ದು, ಇಡೀ ದಿನ ಮನೆಯ ಕೋಣೆಯಲ್ಲೇ ಇರುತ್ತಿದ್ದರು ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com