ಎಸ್‌ಸಿ/ಎಸ್‌ಟಿ, ಪೌರಕಾರ್ಮಿಕರ ವಸತಿ ಯೋಜನೆಗೆ ಇನ್ನೂ ಸಿಗದ ಅನುಮೋದನೆ: ಫಲಾನುಭವಿಗಳ ಅಸಮಾಧಾನ

2008ರಲ್ಲಿ 29 ಎಕರೆ ಜಾಗ ಪಡೆದುಕೊಂಡಿದ್ದರೂ ಪಾಲಿಕೆ ಲೇಔಟ್ ನಿರ್ಮಾಣ ಮಾಡುವುದು ವಿಳಂಬವಾಗಿರುವುದರಿಂದ ಅರ್ಹ ಫಲಾನುಭವಿಗಳು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
BBMP (file image)
ಬಿಬಿಎಂಪಿ ಕಚೇರಿ(ಸಂಗ್ರಹ ಚಿತ್ರ)
Updated on

ಬೆಂಗಳೂರು: ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿ ಮತ್ತು ಕೆಂಗೇರಿ ಹೋಬಳಿ (ಬೆಂಗಳೂರು ನಗರ)ಯಲ್ಲಿ 20x30 ಅಡಿ ಅಳತೆಯ ನಿವೇಶನಗಳ ಹಂಚಿಕೆಗೆ 1,110 ಅರ್ಜಿದಾರರನ್ನು ಆಯ್ಕೆ ಮಾಡಲಾಗಿದೆ. ಆದರೆ ಇದುವರೆಗೆ ಯೋಜನೆಗೆ ಅನುಮೋದನೆ ಸಿಗದಿರುವುದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪೌರಕಾರ್ಮಿಕರು ಮತ್ತು ಅರ್ಹ ಎಸ್‌ಸಿ/ಎಸ್‌ಟಿ ಸಮುದಾಯದವರು ಬೇಸರ ವ್ಯಕ್ತಪಡಿಸಿದ್ದಾರೆ.

ಬಿಬಿಎಂಪಿ ಮತ್ತು ರಾಜ್ಯ ಸರ್ಕಾರದ ವಿರುದ್ಧ ಬಹುಜನ ವಿಮೋಚನಾ ಸಂಸ್ಥೆಯ ಕಾರ್ಯದರ್ಶಿ ಚಳುವಳಿ ಗಂಗಾಧರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ, “ಭೂಮಿ ಗುರುತಿಸುುದನ್ನು ಹೊರತು ಪಡಿಸಿದರೇ ಬಿಬಿಎಂಪಿ ಮತ್ತು ಕಂದಾಯ ಇಲಾಖೆ ಯಾವುದೇ ಕೊಡುಗೆ ನೀಡಿಲ್ಲ. 2008ರಲ್ಲಿ 29 ಎಕರೆ ಜಾಗ ಪಡೆದುಕೊಂಡಿದ್ದರೂ ಪಾಲಿಕೆ ಲೇಔಟ್ ನಿರ್ಮಾಣ ಮಾಡುವುದು ವಿಳಂಬವಾಗಿರುವುದರಿಂದ ಅರ್ಹ ಫಲಾನುಭವಿಗಳು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಬಿಎಂಪಿಯ ಕ್ರೋಡೀಕೃತ (ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆ ಎಸ್‌ಸಿಪಿ/ಟಿಪಿ) ನಿಧಿಯಿಂದ 450 ಕೋಟಿ ರೂ ನಿಧಿಯಿಂದ 42 ಕೋಟಿ ಮಂಜೂರು ಮಾಡಲಾಗಿದೆ ಆದರೆ ಅನುಮೋದನೆಯ ಕಡತವು ಆಡಳಿತಾಧಿಕಾರಿಯ ಮುಂದೆ ಬಾಕಿ ಉಳಿದಿದೆ ಎಂದು ಆರೋಪಿಸಿದರು.

“ಬಿಬಿಎಂಪಿ ಕಲ್ಯಾಣ ಇಲಾಖೆಯು ಸಂಕೀರ್ಣವನ್ನು ನಿರ್ಮಿಸಲು ಮತ್ತು ಮನೆಗಳನ್ನು ಮಂಜೂರು ಮಾಡಲು ಪ್ರಸ್ತಾಪಿಸಿದೆ ಆದರೆ ನಮ್ಮ ಸಮುದಾಯವು ಭೂಮಿಯ ಹಕ್ಕುಗಳಿಗಾಗಿ ದೀರ್ಘಕಾಲ ಹೋರಾಡುತ್ತಿರುವುದರಿಂದ ನಾವು ಪ್ರಸ್ತಾವನೆಯನ್ನು ತಿರಸ್ಕರಿಸಿದ್ದೇವೆ. ಬಿಬಿಎಂಪಿ ವಿಶೇಷ ಘಟಕದಡಿ 42 ಕೋಟಿ ರೂ.ಗಳಲ್ಲಿ ಲೇಔಟ್ ರಚನೆಗೆ ಆಡಳಿತಾಧಿಕಾರಿಗಳ ಅನುಮೋದನೆ ಪಡೆದ ನಂತರ ಸಮುದಾಯದವರು ತಮ್ಮ ಮನೆಗಳನ್ನು ನಿರ್ಮಿಸಲು ಪ್ರಾರಂಭಿಸುತ್ತಾರೆ ಎಂದು ಗಂಗಾಧರ್ ಹೇಳಿದರು. ಒಟ್ಟು ಜಮೀನಿನ ಪೈಕಿ ದಾಸನಾಪುರ ಹೋಬಳಿಯಲ್ಲಿ 22 ಎಕರೆ ಹಾಗೂ ಕೆಂಗೇರಿ ಹೋಬಳಿಯಲ್ಲಿ 7 ಎಕರೆ ಜಮೀನು ನಿಗದಿಪಡಿಸಲಾಗಿತ್ತು. 2018ರಲ್ಲಿ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಈ ಪ್ರದೇಶಗಳಿಗೆ ಬೇಲಿ ಹಾಕುವಂತೆ ಬಿಬಿಎಂಪಿಗೆ ಸೂಚಿಸಿತ್ತು. ಆದರೆ, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಮೀನು ಪ್ರಕ್ರಿಯೆ ವಿಳಂಬವಾಗಿತ್ತು.

2023 ರಲ್ಲಿ ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ (ಡಿಸಿಎಂ) ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದ್ದೇವೆ. ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಡಿಸಿಎಂ ನಿರ್ದೇಶನದ ಹೊರತಾಗಿಯೂ, ಅಭಿವೃದ್ಧಿ ತುಂಬಾ ನಿಧಾನವಾಗಿದೆ. ಬಿಬಿಎಂಪಿ ಲೆಕ್ಕಪತ್ರ ಇಲಾಖೆಯಿಂದ ಈಗಾಗಲೇ ಹಣ ಮಂಜೂರಾಗಿದ್ದು, ಆಡಳಿತಾಧಿಕಾರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಅನುಮೋದನೆ ಇಲ್ಲದೆ 40 ದಿನಗಳು ಕಳೆದಿವೆ ಎಂದು ಪೌರಕಾರ್ಮಿಕ ಮುಖಂಡರೊಬ್ಬರು ತಿಳಿಸಿದರು.

BBMP (file image)
ರಸ್ತೆಗಳನ್ನು ಸರಿಪಡಿಸಲು ಬಿಬಿಎಂಪಿ ELCITA ವನ್ನು ತೊಡಗಿಸಿಕೊಳ್ಳಲಿ, ಗುತ್ತಿಗೆದಾರರನ್ನು ಅಲ್ಲ: ಕಿರಣ್ ಮಜುಂದಾರ್ ಶಾ ಸಲಹೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com