
ಬೆಂಗಳೂರು: BBMP ನಗರದ ರಸ್ತೆಗಳನ್ನು ಸರಿಪಡಿಸುವ ಕೆಲಸವನ್ನು ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕಾ ಟೌನ್ ಶಿಪ್ ಪ್ರಾಧಿಕಾರ (ELCITA) ಕ್ಕೆ ನೀಡಲಿ, ಗುತ್ತಿಗೆದಾರರಿಗೆ ಬೇಡ ಎಂದು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಐಟಿ ಕಾರಿಡಾರ್‌ನ ಭಾಗವಾಗಿರುವ ಬೊಮ್ಮನಹಳ್ಳಿಯಲ್ಲಿ ರಸ್ತೆಗಳು ಹಾಳಾಗಿದ್ದ ಹಿನ್ನೆಲೆಯಲ್ಲಿ ಅಕ್ಟೋಬರ್ 25 ರಂದು ಬೆಳಿಗ್ಗೆ ಶಾ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು. ಅವರ ಪೋಸ್ಟ್ ವೈರಲ್ ಆಗಿದ್ದು, 28.1 ಸಾವಿರದಿಂದ 33 ಸಾವಿರ ವೀಕ್ಷಣೆ ಕಂಡಿದ್ದು, ಅಪಾರ ಸಂಖ್ಯೆಯಲ್ಲಿ ರಿಪೋಸ್ಟ್ ಆಗಿದೆ.
ಪ್ರತಿ ಹದಿನೈದು ದಿನಗಳಿಗೊಮ್ಮೆ ರಸ್ತೆಗಳಲ್ಲಿನ ದೋಷ ಪರಿಶೀಲಿಸಲು ELCITA ರೋಡ್ ಮೆಟ್ರಿಕ್ಸ್ ಎಂಬ ಸಾಧನವನ್ನು ಬಳಸುತ್ತದೆ. ಇದು ಪರಿಸ್ಥಿತಿ ಹದಗೆಡುವ ಮೊದಲೇ ಅವುಗಳನ್ನು ತ್ವರಿತವಾಗಿ ಸರಿಪಡಿಸಲು ಅವಕಾಶ ಮಾಡಿಕೊಡುತ್ತದೆ. ನೀರು ಸಾರಾಗವಾಗಿ ಹರಿಯದಿರುವುದು ಗುಂಡಿಗಳಿಗೆ ಕಾರಣವಾಗುತ್ತದೆ, ಆದರೆ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಇದನ್ನು ಸ್ವಚ್ಛ ಮತ್ತು ಬಲವಾದ ಒಳಚರಂಡಿ ವ್ಯವಸ್ಥೆಗಳು, 75 ಮಳೆನೀರು ಕೊಯ್ಲು ಗುಂಡಿಗಳೊಂದಿಗೆ ತಡೆಯಲಾಗುತ್ತದೆ. ಭಾರೀ ಮಳೆಯ ಸಮಯದಲ್ಲಿಯೂ ರಸ್ತೆಗಳನ್ನು ಒಣಗಿಸುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.
ನಗರದ ರಸ್ತೆಗಳನ್ನು ಸರಿಪಡಿಸಲು ELCITA ಗುತ್ತಿಗೆ ನೀಡಬೇಕು ಬಿಬಿಎಂಪಿ ಗುತ್ತಿಗೆದಾರರಲ್ಲ, ಎಂದು ಮಜುಂದಾರ್ ಶಾ ಅವರು ಡಿಸಿಎಂ ಶಿವಕುಮಾರ್ ಮತ್ತು ಐಟಿ ಸಚಿವ ಪ್ರಿಯಾಂಕ್ ಖರ್ಗೆ ಇಬ್ಬರನ್ನೂ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ.
Advertisement