ಹೊಳೆನರಸೀಪುರ ನರ್ಸಿಂಗ್ ಕಾಲೇಜ್ ಗಡ್ಡ ವಿವಾದ: ಸೌಹಾರ್ದತಯುತವಾಗಿ ಬಗೆಹರಿದಿದೆ- ಕಾಲೇಜು ಆಡಳಿತ ಮಂಡಳಿ

ಕಾಲೇಜು ಆಡಳಿತ ಮಂಡಳಿಯ ನಿರ್ದೇಶನವನ್ನು ಪಾಲಿಸಲು ವಿದ್ಯಾರ್ಥಿಗಳು ಒಪ್ಪಿಗೆ ಸೂಚಿಸಿದ ನಂತರ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಲಾಗಿದೆ ಎಂದು ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ರಾಜಣ್ಣ ತಿಳಿಸಿದ್ದಾರೆ.
Nursing College
ನರ್ಸಿಂಗ್ ಕಾಲೇಜು
Updated on

ಹೊಳೆನರಸೀಪುರ: ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳ ಉದ್ದನೆಯ ಗಡ್ಡ ವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲಾಗಿದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಈ ಕುರಿತು ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿಗಳ ಸಂಘವು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ನಂತರ ವಿವಾದ ಬೆಳಕಿಗೆ ಬಂದಿತ್ತು.

ಕಾಲೇಜು ಆಡಳಿತ ಮಂಡಳಿಯ ನಿರ್ದೇಶನವನ್ನು ಪಾಲಿಸಲು ವಿದ್ಯಾರ್ಥಿಗಳು ಒಪ್ಪಿಗೆ ಸೂಚಿಸಿದ ನಂತರ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಲಾಗಿದೆ ಎಂದು ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ರಾಜಣ್ಣ ತಿಳಿಸಿದ್ದಾರೆ. ಕಾಲೇಜಿನಲ್ಲಿ ಸುಮಾರು 40 ಕಾಶ್ಮೀರಿ ವಿದ್ಯಾರ್ಥಿಗಳಿದ್ದಾರೆ. ಗಡ್ಡ ತೆಗೆಯುವಂತೆ ಆಡಳಿತ ಮಂಡಳಿ ತಮಗೆ ಸೂಚನೆ ನೀಡಿದೆ ಅಂತಾ 12 ವಿದ್ಯಾರ್ಥಿಗಳು ಶ್ರೀನಗರ ಮೂಲದ ಜಮ್ಮು-ಕಾಶ್ಮೀರ ವಿದ್ಯಾರ್ಥಿಗಳಿಗೆ ಅಸೋಸಿಯೇಷನ್ ಗೆ ದೂರು ನೀಡಿದ್ದರು.

ಕಾಲೇಜು ಆಡಳಿತ ಕಾಶ್ಮೀರಿ ವಿದ್ಯಾರ್ಥಿಗಳಿಗೆ ತಮ್ಮ ಗಡ್ಡವನ್ನು' ಟ್ರಿಮ್ಮರ್‌ಗೆ ಟ್ರಿಮ್ ಮಾಡುವಂತೆ ಒತ್ತಾಯಿಸುತ್ತಿದೆ ಅಥವಾ ಕಾಲೇಜು ಚಟುವಟಿಕೆಗಳಲ್ಲಿ ಭಾಗವಹಿಸಲು ಅಥವಾ ಆವರಣ ಪ್ರವೇಶಿಸಲು ಅನುಮತಿಸುವ ಮೊದಲು ಕ್ಲೀನ್ ಶೇವ್ ಮಾಡುವಂತೆ ಒತ್ತಾಯಿಸುತ್ತಿದೆ ಎಂದು ಅಸೋಸಿಯೇಷನ್ ​​ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದೆ.

ಗಡ್ಡ ಹೊಂದಿರುವ ವಿದ್ಯಾರ್ಥಿಗಳು ಕ್ಲಿನಿಕಲ್ ಕರ್ತವ್ಯದ ಸಮಯದಲ್ಲಿ ಗೈರುಹಾಜರಾಗಿರುತ್ತಾರೆ. ಇದು ಅವರ ಶೈಕ್ಷಣಿಕ ದಾಖಲೆಗಳು ಮತ್ತು ಹಾಜರಾತಿ ಮೇಲೆ ಪರಿಣಾಮ ಬೀರುತ್ತದೆ. ಗಡ್ಡವನ್ನು ಬೆಳೆಸುವ ಆಯ್ಕೆ ಸೇರಿದಂತೆ ವೈಯಕ್ತಿಕ ನೋಟದ ಹಕ್ಕು ವ್ಯಕ್ತಿಯ ಸ್ವಾತಂತ್ರ್ಯ ಮತ್ತು ಗುರುತಿನ ಮೂಲಭೂತ ಅಂಶವಾಗಿದೆ ಎಂದು ಸಂಘವು ಹೇಳಿದೆ.

ಯಾವುದೇ ವಿದ್ಯಾರ್ಥಿಯು ಅಂತಹ ತಾರತಮ್ಯಕ್ಕೆ ಒಳಗಾಗಬಾರದು ಅಥವಾ ಶಿಕ್ಷಣವನ್ನು ಪ್ರವೇಶಿಸಲು ಅವರ ನಂಬಿಕೆಗಳು ಮತ್ತು ಆಚರಣೆಗಳನ್ನು ರಾಜಿ ಮಾಡಿಕೊಳ್ಳುವಂತೆ ಒತ್ತಾಯಿಸಬಾರದು. ಇಂತಹ ಕ್ರಮಗಳು ಈ ವಿದ್ಯಾರ್ಥಿಗಳ ಹಕ್ಕುಗಳನ್ನು ಉಲ್ಲಂಘಿಸುವುದಲ್ಲದೆ, ಭಯ ಮತ್ತು ಬಹಿಷ್ಕಾರದ ವಾತಾವರಣವನ್ನು ಸೃಷ್ಟಿಸುತ್ತದೆ, ಇದು ಶಿಕ್ಷಣ ಮತ್ತು ಪ್ರಜಾಪ್ರಭುತ್ವದ ಮನೋಭಾವಕ್ಕೆ ಹಾನಿಕಾರಕವಾಗಿದೆ ಎಂದು ಸಂಘ ಆರೋಪಿಸಿತ್ತು.

ಆದರೆ ಡಾ. ರಾಜಣ್ಣ ಸಂಘದ ಆರೋಪಗಳನ್ನು ತಿರಸ್ಕರಿಸಿದ್ದಾರೆ. ಕಾಲೇಜು ನೀಡಿದ ನಿಯಮಗಳನ್ನು ಈ ವಿದ್ಯಾರ್ಥಿಗಳು ತಪ್ಪಾಗಿ ಗ್ರಹಿಸಿದ್ದಾರೆ. ಕ್ಲಿನಿಕಲ್ ಪ್ರಕ್ರಿಯೆಯಲ್ಲಿ ಅವರು ತಮ್ಮ ಡ್ರೆಸ್ ನ್ನು ಅಚ್ಚುಕಟ್ಟಾಗಿ ಇರಿಸಿಕೊಳ್ಳಲು ಮತ್ತು ಗಡ್ಡವನ್ನು ಟ್ರಿಮ್ ಮಾಡಲು ಸೂಚಿಸಲಾಗಿದೆ ಎಂದು ಅವರು ಪಿಟಿಐಗೆ ತಿಳಿಸಿದರು.

Nursing College
ಬೆಂಗಳೂರು ಸುರಕ್ಷಿತ ನಗರ, ಅಸುರಕ್ಷಿತ ಭಾವ ಎಂದಿಗೂ ಕಾಡಿಲ್ಲ: ಕಾಶ್ಮೀರಿ ವಿದ್ಯಾರ್ಥಿಗಳು

ವಿಷಯ ತಿಳಿದ ರಾಜಣ್ಣ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದ್ದು, ಬಳಿಕ ನೀಟಾಗಿ ಡ್ರೆಸ್ ಧರಿಸಿ ಬರಲು ಒಪ್ಪಿಗೆ ಸೂಚಿಸಿದ್ದು, ಸಮಯಪಾಲನೆ ಹಾಗೂ ಗಡ್ಡ ಟ್ರಿಮ್ ಮಾಡಿಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ.ಈಗ ಸಮಸ್ಯೆ ಬಗೆಹರಿದಿದೆ. ಈಗ 40 ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್‌ಗಳಲ್ಲಿ ಸಂತೋಷವಾಗಿದ್ದಾರೆ. ಅಧ್ಯಾಪಕರು ಮತ್ತು ಪ್ರಾಂಶುಪಾಲರು ಅವರ ಕೊಠಡಿಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಮಾಡಿದ್ದಾರೆ ಎಂದು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com