ಮುಂಬೈ ಸೈಬರ್ ಪೊಲೀಸರ ಹೆಸರಿನಲ್ಲಿ ಕರೆ: ನಾಲ್ಕು 4 ಲಕ್ಷ ರೂ. ಕಳೆದುಕೊಂಡ ಶಿವಮೊಗ್ಗ ಯುವತಿ

ಸಂತ್ರಸ್ತೆ ನೀಡಿದ ದೂರಿನ ಪ್ರಕಾರ, ನವೆಂಬರ್ 4 ರಂದು ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದ್ದು, ತಾವು ಫೆಡ್‌ಎಕ್ಸ್‌ನಿಂದ ಮಾತನಾಡುತ್ತಿದ್ದು, ನಿಮ್ಮ ಹೆಸರಿನಲ್ಲಿ ಇರಾನ್ ಗೆ ಪಾರ್ಸಲ್ ಹೋಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಶಿವಮೊಗ್ಗ: ತಾವು ಅಂತಾರಾಷ್ಟ್ರೀಯ ಪಾರ್ಸೆಲ್ ಹಗರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸ್ ಅಧಿಕಾರಿಗಳು ಎಂದು ಹೇಳಿಕೊಂಡು ಶಿವಮೊಗ್ಗದ 23 ವರ್ಷದ ಯುವತಿಯೊಬ್ಬರಿಗೆ 4 ಲಕ್ಷ ರೂಪಾಯಿ ವಂಚಿಸಿದ್ದಾರೆ.

ಸಂತ್ರಸ್ತೆ ನೀಡಿದ ದೂರಿನ ಪ್ರಕಾರ, ನವೆಂಬರ್ 4 ರಂದು ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದ್ದು, ತಾವು ಫೆಡ್‌ಎಕ್ಸ್‌ನಿಂದ ಮಾತನಾಡುತ್ತಿದ್ದು, ನಿಮ್ಮ ಹೆಸರಿನಲ್ಲಿ ಇರಾನ್ ಗೆ ಪಾರ್ಸಲ್ ಹೋಗುತ್ತಿದೆ. ಆ ಬಗ್ಗೆ ಮುಂಬೈ ಸೈಬರ್ ಕ್ರೈಂ ಪೊಲೀಸು ಮಾತನಾಡುತ್ತಾರೆ ಎಂದು ಹೇಳಿ ಕರೆ ಕನೆಕ್ಟ್ ಮಾಡಿದ್ದಾರೆ. ಪೊಲೀಸ್ ಅಧಿಕಾರಿಯಂತೆ ಮಾತನಾಡಿದ ಮತ್ತೊಬ್ಬ ವ್ಯಕ್ತಿ, ಪಾರ್ಸಲ್ ನಲ್ಲಿ ಲ್ಯಾಪ್‌ಟಾಪ್, ಐದು ಕ್ರೆಡಿಟ್ ಕಾರ್ಡ್‌ಗಳು ಮತ್ತು 420 ಗ್ರಾಂ ಎಂಡಿಎಂಎ ಡ್ರಗ್ಸ್ ಇದೆ. ಈ ಬಗ್ಗೆ ವಿಚಾರಣೆ ಮಾಡಬೇಕು ಎಂದು ಬೆದರಿಕೆ ಹಾಕಿದ್ದಾರೆ.

ಯುವತಿಗೆ ನಿಮ್ಮ ಹೇಳಿಕೆ ದಾಖಲಿಸಿಕೊಳ್ಳಲು ಸ್ಕೈಪ್ ಆಪ್ ಡೌನ್ ಲೋಡ್ ಮಾಡುವಂತೆ ನಕಲಿ ಅಧಿಕಾರಿ ಸೂಚಿಸಿದ್ದಾರೆ. ಅವರ ಸೂಚನೆಯಂತೆ ಆಪ್ ಡೌನ್ ಲೋಡ್ ಮಾಡಿದ್ದು, ತಕ್ಷಣ ಸಾಲಕ್ಕೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಯುವತಿಯ ಬ್ಯಾಂಕ್ ಖಾತೆಗೆ ಸಾಲದ ಮೊತ್ತ 3,75,281 ಜಮೆಯಾಗಿದೆ. ನಂತರ ಎರಡು ಬ್ಯಾಂಕ್ ಖಾತೆಯ ವಿವರ ನೀಡಿ, ಅವುಗಳಿಗೆ ತಲಾ 2 ಲಕ್ಷ ರೂ. ವರ್ಗಾಯಿಸುವಂತೆ ಸೂಚಿಸಲಾಗಿದ್ದು, ಯುವತಿ ಹಣ ವರ್ಗಾವಣೆ ಮಾಡಿದ್ದಾರೆ. ಬಳಿಕ ಅನುಮಾನಗೊಂಡ ಮಹಿಳೆ, ಸೈಬರ್ ಕ್ರೈಮ್ ಪೋರ್ಟಲ್ ಮೂಲಕ ದೂರು ದಾಖಲಿಸಿದ್ದಾರೆ.

ಸಾಂದರ್ಭಿಕ ಚಿತ್ರ
Mann Ki Baat: ವಿಜಯಪುರದ ವ್ಯಕ್ತಿ ಬಗ್ಗೆ ಪ್ರಧಾನಿ ಉಲ್ಲೇಖ: ಸೈಬರ್ ಕ್ರೈಮ್ ವಿರುದ್ಧದ ಹೋರಾಟಕ್ಕೆ ಮೆಚ್ಚುಗೆ!

ಜಯನಗರ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66ಡಿ, ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 318(4) (ವಂಚನೆ) ಮತ್ತು 319(2)(ಯಾರೊಬ್ಬರಂತೆ ನಟಿಸಿ ವಂಚನೆಗೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com