ವರ್ಜೀನಿಯಾ: ಅಮೆರಿಕದ ವರ್ಜೀನಿಯಾದಲ್ಲಿ ಯೋಗ ತರಗತಿಗಳನ್ನು ನಡೆಸುತ್ತಿದ್ದ ಮೈಸೂರಿನ ಖ್ಯಾತ ಯೋಗ ಗುರು ಶರತ್ ಜೋಯಿಸ್ ಅವರು ಹೃದಯಘಾತದಿಂದ ನಿಧನರಾಗಿದ್ದಾರೆ.
ಶರತ್ ಜೋಯಿಸ್ ಅವರಿಗೆ 53 ವರ್ಷ ವಯಸ್ಸಾಗಿತ್ತು, ಅವರು ಮಡೋನಾ, ಗ್ವಿನೆತ್ ಪಾಲ್ಟ್ರೋ ಮತ್ತು ಸ್ಟಿಂಗ್ ಸೇರಿದಂತೆ ಹಲವಾರು ಜಾಗತಿಕ ಪ್ರಸಿದ್ಧ ವ್ಯಕ್ತಿಗಳಿಗೆ ಅಷ್ಟಾಂಗ ಯೋಗವನ್ನು ಕಲಿಸಿದ್ದಾರೆ.
ಮೈಸೂರಿನ ಕೆ.ಪಟ್ಟಾಭಿ ಜೋಯಿಸ್ ಅವರ ಮೊಮ್ಮಗ ಶರತ್ ಜೋಯಿಸ್ ಅವರು ಅಮೆರಿಕಾದ ವರ್ಜೀನಿಯಾದಲ್ಲಿ ಯೋಗ ಗುರುವಾಗಿ ನೆಲೆಸಿದ್ದರು. ಶರತ್ ಜೋಯಿಸ್ ಅವರು ತಮ್ಮ ಅಜ್ಜ ಕೆ.ಪಟ್ಟಾಭಿ ಜೋಯಿಸ್ ಅವರಂತೆ ಯೋಗ ಶಾಲೆ ನಡೆಸುತ್ತಿದ್ದರು. ಮೈಸೂರಿನಲ್ಲಿ ಇವರದ್ದೇ ಆದ ಯೋಗ ಕೇಂದ್ರವಿದೆ.
ಶರತ್ ಜೋಯಿಸ್ ಅವರು ಸೆಪ್ಟೆಂಬರ್ 29, 1971 ರಂದು ಮೈಸೂರಿನಲ್ಲಿ ಸರಸ್ವತಿ(ಪಟ್ಟಾಭಿ ಜೋಯಿಸ್ ಅವರ ಪುತ್ರಿ) ಮತ್ತು ರಂಗಸ್ವಾಮಿ ದಂಪತಿಯ ಮಗನಾಗಿ ಜನಿಸಿದರು. ಶರತ್ ಅವರು ಚಿಕ್ಕ ವಯಸ್ಸಿನಿಂದಲೂ ಯೋಗದಲ್ಲಿ ಆಸಕ್ತಿ ಬೆಳಸಿಕೊಂಡಿದ್ದರು.
ಶರತ್ ಜೋಯಿಸ್ ಅವರು ಮೈಸೂರಿನ ಜೆಎಸ್‌ಎಸ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್‌ನಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದರು.
Advertisement