ಹಾವೇರಿ: ಬಳಕೆಯಾಗದ ಬ್ಯಾಲೆಟ್ ಬಾಕ್ಸ್‌ಗಳು ರಸ್ತೆ ಬದಿಯ ಕಾಲುವೆಯಲ್ಲಿ ಪತ್ತೆ..!

ಬ್ಯಾಲೆಟ್ ಬಾಕ್ಸ್ ಗಳನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮತ್ತು ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿದ್ದು, ಬಳಿಕ ಸ್ಥಳಕ್ಕೆ ಬಂದ ಅಧಿಕಾರಿಗಳ ತಂಡವು ಪರಿಶೀಲನೆ ನಡೆಸಿದರು.
ಕಾಲುವೆಯಲ್ಲಿ ಪತ್ತೆಯಾಗಿರುವ ಬ್ಯಾಲೆಟ್ ಬಾಕ್ಸ್.
ಕಾಲುವೆಯಲ್ಲಿ ಪತ್ತೆಯಾಗಿರುವ ಬ್ಯಾಲೆಟ್ ಬಾಕ್ಸ್.
Updated on

ಹಾವೇರಿ: ಶಿಗ್ಗಾಂವಿ ಉಪಚುನಾವಣೆ ಮತದಾನ ಪೂರ್ಣಗೊಂಡ ಮರುದಿನವೇ ಹಾವೇರಿ ತಾಲ್ಲೂಕಿನ ಯತ್ನಳ್ಳಿ ಬಳಿಯಿರುವ ಕಾಲುವೆಯೊಂದರಲ್ಲಿ ಬಳಕೆಯಾಗದ 10 ಬ್ಯಾಲೆಟ್ ಬಾಕ್ಸ್‌ಗಳು ಪತ್ತೆಯಾಗಿವೆ.

ಬ್ಯಾಲೆಟ್ ಬಾಕ್ಸ್ ಗಳನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮತ್ತು ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿದ್ದು, ಬಳಿಕ ಸ್ಥಳಕ್ಕೆ ಬಂದ ಅಧಿಕಾರಿಗಳ ತಂಡವು ಪರಿಶೀಲನೆ ನಡೆಸಿದರು.

ಬಳಿಕ ಹೇಳಿಕೆ ನೀಡಿದ ಅಧಿಕಾರಿಗಳು, ಈ ಬ್ಯಾಲೆಟ್ ಬಾಕ್ಸ್‌ಗಳು ಹಳೆಯದ್ದಾಗಿದ್ದು, ಶಿಗ್ಗಾಂವಿ ಚುನಾವಣೆಗೂ ಈ ಬಾಕ್ಸ್‌ಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.

ಕಾಲುವೆಯಲ್ಲಿ ಪತ್ತೆಯಾಗಿರುವ ಬ್ಯಾಲೆಟ್ ಬಾಕ್ಸ್.
ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಉಪಚುನಾವಣೆ ಅಂತ್ಯ: ಎಲ್ಲರ ಚಿತ್ತ ಈಗ ನವೆಂಬರ್ 23ರತ್ತ

ಹಾವೇರಿಯ ಡಿಸಿ ವಿಜಯ ಮಹಾಂತೇಶ ದಾನಮ್ಮನವರ್ ಅವರು ಮಾತನಾಡಿ, ಈ ಕುರಿತು ವಿಸ್ತೃತ ತನಿಖೆ ನಡೆಸುವಂತೆ ಕೋರಿದ್ದು, ತಹಶೀಲ್ದಾರ್ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.

ಯಾರೋ ಕಿಡಿಗೇಡಿಗಳು ಬಾಕ್ಸ್‌ಗಳನ್ನು ಮಾರುವ ಉದ್ದೇಶದಿಂದ ಕಳ್ಳತನ ಮಾಡಿದ್ದು, ಮಾರಲು ಸಾಧ್ಯವಿಲ್ಲ ಎಂದು ತಿಳಿದಾಗ ಗ್ರಾಮದ ಬಳಿ ಇರುವ ಲೇಔಟ್ ಒಂದರ ಬಳಿ ಎಸೆದು ಹೋಗಿದ್ದಾರೆಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com