ಬೆಂಗಳೂರು: ಸೋಮವಾರ ಸಂಜೆ ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್) ಜೊತೆಗಿನ ಗುಂಡಿನ ಚಕಮಕಿಯಲ್ಲಿ ನಕ್ಸಲ್ ನಾಯಕ ವಿಕ್ರಮ್ ಗೌಡ (44) ಸಾವನ್ನಪ್ಪಿದ್ದಾನೆ. ಇದಕ್ಕೂ ಮೊದಲು 2021 ರಲ್ಲಿ ನಕ್ಸಲ್ ನಾಯಕ ಬಿಜಿ ಕೃಷ್ಣಮೂರ್ತಿ (50)ಯನ್ನು ಕೇರಳ ಪೊಲೀಸರು ಬಂಧಿಸಿದ್ದರಿಂದ, ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕರ್ನಾಟಕದಲ್ಲಿ ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿದೆ.
ಈ ವರ್ಷದ ಆಗಸ್ಟ್‌ನಿಂದ ಮಲೆನಾಡು ಪ್ರದೇಶದಲ್ಲಿ ಕೆಲವು ನಕ್ಸಲ್ ಚಟುವಟಿಕೆಗಳು ವರದಿಯಾದ ನಂತರ ಎಎನ್‌ಎಫ್ ನಡೆಸಿದ ಶೋಧ ಮತ್ತು ಕೂಂಬಿಂಗ್ ಕಾರ್ಯಾಚರಣೆಗಳ ಪರಿಣಾಮವಾಗಿ ವಿಕ್ರಂಗೌಡನ ಹತ್ಯೆಯಾಗಿದೆ. ವಿಕ್ರಂ ಗೌಡ ಹಾಗೂ ಇತರ ನಕ್ಸಲರು ಶರಣಾಗಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿಗಳು ವರದಿ ಮಾಡಿದ್ದವು. ಆದರೆ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಪೊಲೀಸ್ ಮಹಾನಿರ್ದೇಶಕ ಪ್ರೊಣಬ್ ಮೊಹಾಂತಿ ಈ ವರದಿಯನ್ನು ಅಲ್ಲಗಳೆದಿದ್ದಾರೆ. “ಕರ್ನಾಟಕ ಪೊಲೀಸರ ಮುಂದೆಅಂತಹ ಯಾವುದೇ ಪ್ರಸ್ತಾಪ (ಶರಣಾಗತಿ) ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ
ರಾಜ್ಯ ಸರ್ಕಾರವು "ಶರಣಾಗತಿಯ ಬಗ್ಗೆ ಸ್ಪಷ್ಟ ನೀತಿಯನ್ನು ಹೊಂದಿದೆ, ಅದು ಸುಲಭ, ನ್ಯಾಯೋಚಿತ ಮತ್ತು ನ್ಯಾಯಯುತವಾಗಿದೆ. ನಕ್ಸಲರು ಶರಣಾಗಲು ಬಯಸಿದರೆ, ಅವರು ನಿಯಮ ಪಾಲಸಿದರೆ ಹಾಗೆ ಮಾಡಬಹುದು ಮತ್ತು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬಹುದು ಎಂದಿದ್ದಾರೆ. ರಾಜ್ಯದಲ್ಲಿ ನಕ್ಸಲಿಸಂ 2018 ರಿಂದ ತೀವ್ರ ಕುಸಿತ ಕಂಡಿದ್ದು ಮಾವೋವಾದಿಗಳ ಸಂಖ್ಯೆ 19 ಕ್ಕೆ ಇಳಿದಿದೆ. ದೃಢೀಕರಿಸದ ವರದಿಗಳ ಪ್ರಕಾರ, ಈಗ ಸುಮಾರು ಏಳು ಭೂಗತ ನಕ್ಸಲರು (UGWs) ಇದ್ದಾರೆ, ಅವರಲ್ಲಿ ನಾಲ್ವರು ಮಹಿಳೆಯರು ಸೇರಿದ್ದಾರೆ ಎಂದು ತಿಳಿಸಿದ್ದಾರೆ. ಕೃಷ್ಣಮೂರ್ತಿ ಮತ್ತು ಆತನ ಪತ್ನಿ ಹಾಗೂ ನಕ್ಸಲ್ ನಾಯಕಿ ಹೊಸಗ್ಗಾಡೆ ಪ್ರಭಾ ಸೇರಿದಂತೆ ಬಹುತೇಕರು ನೆರೆಯ ಕೇರಳ ಮತ್ತು ತಮಿಳುನಾಡಿಗೆ ತೆರಳಿದ್ದರು. ಅವರಲ್ಲಿ ವಿಕ್ರಂ ಗೌಡ ಪತ್ನಿ ಮತ್ತು ಮಾವೋವಾದಿ ಕೇಡರ್ ಸಾವಿತ್ರಿಯೊಂದಿಗೆ 2021 ರಲ್ಲಿ ವಯನಾಡಿನ ಸುಲ್ತಾನ್ ಬತ್ತೇರಿ ಬಳಿ ಕೇರಳ ಪೊಲೀಸರು ಬಂಧಿಸಿದ್ದರು. ಕೆಲವು ವರದಿಗಳ ಪ್ರಕಾರ, ಗೌಡ ಕೂಡ ರಾಜ್ಯವನ್ನು ಸಂಕ್ಷಿಪ್ತವಾಗಿ ತೊರೆದಿದ್ದ, ಆದರೆ ಎರಡು ನೆರೆಯ ರಾಜ್ಯಗಳಲ್ಲಿ ಪೊಲೀಸ್ ಕಠಿಣ ಕ್ರಮದ ನಂತರ ಶೀಘ್ರದಲ್ಲೇ ಮರಳಿದ್ದ ಎಂದು ತಿಳಿದು ಬಂದಿದೆ. ಶಾಲೆಯನ್ನು ತೊರೆದಿದ್ದ ಆತ 2002 ರ ಸುಮಾರಿಗೆ ದಕ್ಷಿಣ ಕನ್ನಡದ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಕೊರಿಯರ್ ಮತ್ತು ನಿಧಿ ಸಂಗ್ರಾಹಕರಾಗಿ ಚಳವಳಿಗೆ ಸೇರಿದ್ದ.
ಕರ್ನಾಟಕದಲ್ಲಿ ಎಡಪಂಥೀಯ ಉಗ್ರಗಾಮಿತ್ವವು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಆಂದೋಲನದಲ್ಲಿ ಅದರ ದೊಡ್ಡ ಪರಿಣಾಮ ಬೀರಿತ್ತು, ಸಾಕೇತ್ ರಾಜನ್, ಅಲಿಯಾಸ್ ಪ್ರೇಮ್, ರಾಜ್ಯದ ಅತ್ಯಂತ ಪ್ರಸಿದ್ಧ ಮಾವೋವಾದಿ ನಾಯಕನಾಗಿ ಚಳುವಳಿ ಮುನ್ನಡೆಸಿದ್ದ. 2005ರ ಫೆಬ್ರುವರಿಯಲ್ಲಿ ಚಿಕ್ಕಮಗಳೂರಿನ ಮೆಣಸಿನಹಾಡ್ಯದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ರಾಜನ್ ಮತ್ತು ಅವನ ಆಪ್ತ ಸಹಚರ ಶಿವಲಿಂಗು ಇಬ್ಬರು ಪೊಲೀಸರು ಗುಂಡೇಟಿಗೆ ಬಲಿಯಾಗಿದ್ದರು. ಅವರ ಹತ್ಯೆ ನಿಷೇಧಿತ ಚಳವಳಿಗೆ ಮರಣಶಾಸನ ಬರೆಯಿತು,
ಅವರ ನಂತರ, ಕೃಷ್ಣಮೂರ್ತಿ ಮತ್ತು ವಿಕ್ರಂ ಗೌಡ ನಾಯಕತ್ವದ ಪ್ರಮುಖ ಪಾತ್ರಗಳನ್ನು ವಹಿಸಿಕೊಂಡರು. ಚಿಕ್ಕಮಗಳೂರಿನವರಾದ ಅವರು ಸಿಪಿಐ (ಮಾವೋವಾದಿ) ಪಕ್ಷದ ಕೇಂದ್ರ ಸಮಿತಿಯ ಸದಸ್ಯರಾಗಿದ್ದರು ಮತ್ತು ಪಶ್ಚಿಮ ಘಟ್ಟಗಳ ವಿಶೇಷ ವಲಯ ಸಮಿತಿಯ ಕಾರ್ಯದರ್ಶಿಯಾಗಿದ್ದರು. ಈತನ ವಿರುದ್ಧ ಕರ್ನಾಟಕದಲ್ಲಿ ಹಾಗೂ ಕೇರಳದಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆತ ಕನಿಷ್ಠ ಮೂರು ಸಂದರ್ಭಗಳಲ್ಲಿ ಬಂಧನದಿಂದ ತಪ್ಪಿಸಿಕೊಂಡಿದ್ದ, ಆತನಿಗಾಗಿ ಕರ್ನಾಟಕ ಸರ್ಕಾರ 3 ಲಕ್ಷ ರೂ. ಹಾಗೂ ಕೇರಳ ಸರ್ಕಾರ 50,000 ರೂ. ಬಹುಮಾನ ಘೋಷಿಸಿತ್ತು.
ಮಾವೋವಾದಿಗಳ ಪುನರ್ವಸತಿಗಾಗಿ ಕರ್ನಾಟಕ ಸರ್ಕಾರದ ಶರಣಾಗತಿ ನೀತಿಯು ಕೆಲವು ಕೇಡರ್ ಸದಸ್ಯರನ್ನು ಆಕರ್ಷಿಸಿದ್ದ, ಅವರು ಹೊರಗೆ ಬಂದು ಸಾಮಾನ್ಯ ಜೀವನವನ್ನು ನಡೆಸಲು ಬಯಸಿದ್ದರು. 2010ರಿಂದ ಇಲ್ಲಿಯವರೆಗೆ 14 ನಕ್ಸಲೀಯರ ಶರಣಾಗತಿ ಪ್ರಕರಣಗಳು ನಡೆದಿದ್ದು, ಅವುಗಳಲ್ಲಿ ಹೆಚ್ಚಿನವು ಚಿಕ್ಕಮಗಳೂರಿನಲ್ಲಿ ನಡೆದಿವೆ. ಪತ್ರಕರ್ತೆ ಗೌರಿ ಲಂಕೇಶ್ ಅವರು ಸಮಿತಿಯ ಸದಸ್ಯರಾಗಿದ್ದರು ಮತ್ತು ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ಮಾವೋವಾದಿಗಳನ್ನು ಪ್ರೋತ್ಸಾಹಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.
Advertisement