ಬಾಗಲಕೋಟೆ: ಹೇರ್ ಡ್ರೈಯರ್ ಸ್ಫೋಟ, ಮಹಿಳೆಯ ಎರಡು ಕೈಗಳ ಬೆರಳು ಛಿದ್ರ!

ಮಹಿಳೆಯನ್ನು ಇಳಕಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Injured women Shashikala
ಗಾಯಾಳು ಶಶಿಕಲಾ
Updated on

ಬಾಗಲಕೋಟೆ: ಹೇರ್ ಡ್ರೈಯರ್ ಸ್ಫೋಟಗೊಂಡ ಪರಿಣಾಮ ಮಹಿಳೆಯೊಬ್ಬರ ಎರಡು ಕೈಗಳ ಬೆರಳುಗಳು ಛಿದ್ರ- ಛಿದ್ರವಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ.ಗಾಯಾಳು ಬಸಮ್ಮ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಹಿನ್ನೆಲೆ: ಶಶಿಕಲಾ ಎನ್ನುವವರು ಹೇರ್ ಡ್ರೈಯರ್ ಗೆ ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ್ದರು. ಆದರೆ ಅವರು ಇಲ್ಲದ ವೇಳೆ ಬಸಮ್ಮ ಹೇರ್ ಡ್ರೈಯರ್ ಪಾರ್ಸಲ್ ತೆಗೆದುಕೊಂಡಿದ್ದು, ಕೊರಿಯರ್ ಓಪನ್ ಮಾಡಿ ಸ್ವೀಚ್ ಆನ್ ಮಾಡಿದ ತಕ್ಷಣ ಹೇರ್ ಡ್ರೈಯರ್ ಸ್ಫೋಟಗೊಂಡಿದೆ ಎನ್ನಲಾಗಿದೆ.

ಕೂಡಲೇ ಮಹಿಳೆಯನ್ನು ಇಳಕಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Injured women Shashikala
ಬೆಂಗಳೂರಿನಲ್ಲಿ ಚರ್ಚ್ ಸ್ಫೋಟ ಪ್ರಕರಣ; ಅಪರಾಧಿಗೆ ಎರಡು ವಾರಗಳ ಕಾಲ ಪೆರೋಲ್ ನೀಡಿದ ಹೈಕೋರ್ಟ್

ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸಮ್ಮ ದಾಖಲಾಗಿರುವ ಇಳಕಲ್ ಖಾಸಗಿ ಆಸ್ಪತ್ರೆಗೆ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಭೇಟಿ ಆರೋಗ್ಯ ವಿಚಾರಿಸಿದರು. ಬಸಮ್ಮ ಪತಿ ಪಾಪಣ್ಣ 2017ರಲ್ಲಿ ಜಮ್ಮು ಕಾಶ್ಮೀರದಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದ ಮೃತಪಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com